
ಮುಂಬೈ: ಅನಾಥಾಶ್ರಮದಲ್ಲಿದ್ದುಕೊಂಡು ಓದುತ್ತಿರುವ ಸಂದರ್ಭದಲ್ಲೇ ಸಂಬಂಧಿಕರ ಒತ್ತಡದಿಂದ ಮದುವೆಯಾದ ಬಾಲಕಿಯೊಬ್ಬಳನ್ನು ಆಕೆಯ ಪತಿಯೇ ಮಾರಾಟ ಮಾಡಿದ ಹೇಯ ಕೃತ್ಯವೊಂದು ಮುಂಬೈನಲ್ಲಿ ನಡೆದಿದ್ದು, ಇದೀಗ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ.
ಹೆಣ್ಣುಮಕ್ಕಳನ್ನು ನಂಬಿಸಿ, ಮದುವೆಯಾಗಿ ವಂಚಿಸಿದ ಎಷ್ಟೋ ಘಟನೆಗಳು ನಡೆದಿವೆ. ಅಲ್ಲದೇ ಕೆಲವು ಪ್ರಕರಣಗಳಲ್ಲಿ ಬಾಲಕಿಯರು, ಯುವತಿಯರನ್ನು ಮಾನವ ಕಳ್ಳಸಾಗಾಣೆ, ವೇಶ್ಯಾವಾಟಿಕೆ, ಮನೆಕೆಲಸ ಮೊದಲಾದ ಜಾಲಕ್ಕೆ ಮಾರಲಾಗುತ್ತದೆ. ಹೀಗೆ 14 ವರ್ಷದ ಬಾಲಕಿಯೊಬ್ಬಳನ್ನು ಮದುವೆಯಾದ ಕಿರಾತಕನೊಬ್ಬ ಮುಂಬೈನಲ್ಲಿ 50,000 ರೂ.ಗೆ ಮಾರಾಟ ಮಾಡಿದ ಘಟನೆ ವರದಿಯಾಗಿದೆ.
ದೆಹಲಿಯ ಆಶ್ರಮದಲ್ಲಿದ್ದ ಬಾಲಕಿಯನ್ನು, ಕಿರಾತಕನೊಬ್ಬನ ಜೊತೆಗೆ ಸಂಬಂಧಿಕರು ಬಲವಂತದಿಂದ ಮದುವೆ ಮಾಡಿದ್ದಾರೆ. ಬಾಲಕಿಯನ್ನು ಮದುವೆಯಾದ ಕಿರಾತಕ ಗಂಡ, ಆಕೆಯನ್ನು ಮುಂಬೈಗೆ ಕರೆತಂದು, 50,000 ರೂಪಾಯಿಗೆ ಶ್ರೀಮಂತರಿಗೆ ಮಾರಾಟ ಮಾಡಿದ್ದಾನೆ. ಮನೆಕೆಲಸ ಮಾಡಿಕೊಂಡಿದ್ದ ಬಾಲಕಿಗೆ ಚಿತ್ರ ಹಿಂಸೆ ನೀಡಲಾಗಿದೆ.
ಉತ್ತರ ಪ್ರದೇಶದ ಬನಾರಸ್ ಮೂಲದ ಬಾಲಕಿ, ದೆಹಲಿಯ ಅನಾಥಾಶ್ರಮದಲ್ಲಿದ್ದುಕೊಂಡು ಓದುವಾಗಲೇ ಸಂಬಂಧಿಕರು ಒತ್ತಡದಿಂದ ಮದುವೆ ಮಾಡಿದ್ದು, ಅಲ್ಲಿಂದ ಮುಂಬೈಗೆ ಕರೆತಂದು, ಮಾರಾಟ ಮಾಡಿರುವುದಾಗಿ ಬಾಲಕಿ ಹೇಳಿಕೊಂಡಿದ್ದಾಳೆ.
ಮುಂಬೈನ ಮಾಲ್ಡಾದ ಲಿಂಕ್ ರಸ್ತೆ ಅಪಾರ್ಟ್ ಮೆಂಟ್ ನಲ್ಲಿದ್ದ ಬಾಲಕಿ ತಾನು ಅನುಭವಿಸುತ್ತಿರುವ ಸಂಕಷ್ಟವನ್ನು ಸೆಕ್ಯುರಿಟಿ ಬಳಿ ಹೇಳಿಕೊಂಡಿದ್ದು, ಅವರ ಸಲಹೆಯಂತೆ ಪೊಲೀಸರಿಗೆ ದೂರು ನೀಡಿದ್ದಾಳೆ. ಮಾಲ್ಡಾ ಪೊಲೀಸರು ಮಕ್ಕಳ ಕಳ್ಳಸಾಗಾಣೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಲಕಿಯ ಹೇಳಿಕೆ ಪಡೆದುಕೊಂಡಿದ್ದಾರೆ.
Comments are closed.