ಉಡುಪಿ: ಈ ಫೋಟೊದಲ್ಲಿರುವ ವ್ಯಕ್ತಿಯ ಹೆಸರು ಸಿದ್ದಪ್ಪ ಸುಮಾರು 40 ವರ್ಷ ಪ್ರಾಯ ಮೂಲತಃ ಬೆಳಗಾವಿ ಜಿಲ್ಲೆಯವನು.

ಕುಂದಾಪುರ ತಾಲೂಕಿನ ಗೋಳಿಯಂಗಡಿ ಪರಿಸರದಲ್ಲಿ ಅನಾರೋಗ್ಯ ಪೀಡಿತನಾಗಿ ಬಿದ್ದಿದ್ದವರನ್ನು ಸ್ಥಳೀಯರಾದ ಗಣೇಶ ಮೊಗವೀರ ಎಂಬುವವರು ಆಶ್ರಯ ನೀಡುವಂತೆ ಕೋರಿ ಸ್ಫೂರ್ತಿಧಾಮಕ್ಕೆ ದಾಖಲಿಸಿದ್ದಾರೆ. ಸಿದ್ದಪ್ಪನ ಎರಡೂ ಕಿಡ್ನಿಗಳು ವಿಫಲವಾಗಿವೆ. ಈಗ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾನೆ.
ಸಿದ್ದಪ್ಪನು ವಾರೀಸುದಾರರ ಬಗ್ಗೆ ಮಾಹಿತಿ ಕೊಟ್ಟಿಲ್ಲ ಈತನ ವಾರೀಸುದಾರರ್‍ಯಾರಾದರೂ ಇದ್ದಲ್ಲಿ ಸ್ಫೂರ್ತಿಧಾಮವನ್ನು ಸಂಪರ್ಕಿಸುವಂತೆ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ಡಾ|| ಕೇಶವ ಕೋಟೇಶ್ವರ ಪ್ರಕಟಣೆಯಲ್ಲಿ ಕೋರಿದ್ದಾರೆ. ದೂ.ಸಂ 9448984119.
Comments are closed.