ಕರಾವಳಿ

ಲೈಂಗಿಕ ಕ್ರಿಯೆಯ (ಸೆಕ್ಸ್) ಬಳಿಕ ಏನೇನು ಮಾಡಬಾರದು : ಇಲ್ಲಿದೆ ಒಂದು ಸಣ್ಣ ಟಿಪ್ಸ್

Pinterest LinkedIn Tumblr

Sex_after_Tips

ಮಂಗಳೂರು : ಬಹಳಷ್ಟು ಮಂದಿ ಕೇವಲ ತಮ್ಮ ಕಾಮನೆಯನ್ನು ಇಳಿಸುವ ಸಲುವಾಗಿ ಮಾತ್ರ ಸಂಗಾತಿಯನ್ನು ಒಂದು ಯಂತ್ರದಂತೆ ಬಳಸುತ್ತಾರೆ. ಇದರಿಂದ ಸೆಕ್ಸ್ ಲೈಫ್ ಜೊತೆಗೆ ವೈವಾಹಿಕ ಜೀವನ ಕೂಡಾ ಹಳ್ಳ ಹಿಡಿಯುತ್ತದೆ.

ಎಲ್ಲದಕ್ಕೂ ಒಂದು ರೂಲ್ ಇದೆ. ಹಾಗೇ ಸೆಕ್ಸ್ ಗೂ ಕೂಡಾ. ಕೇವಲ ಯಾಂತ್ರಿಕವಾಗಿ ಸೆಕ್ಸ್ ನಡೆಸಿ ಮಲಗಿದರೆ ಅದು ನಿಜವಾದ ಸುಖವನ್ನು ನೀಡುವುದಿಲ್ಲ. ಆರಂಭದಿಂದ ಅಂತ್ಯದವರೆಗೆ ಸಂಪೂರ್ಣವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿ ಸಂಗಾತಿಗೆ ಶೇಕಡಾ ನೂರು ಸುಖ ನೀಡಿದಾಗ ಸೆಕ್ಸ್ ಸಂಪೂರ್ಣವೆನಿಸುತ್ತದೆ.ಹಾಗಾದರೆ ಸೆಕ್ಸ್ ಮಾಡಿದ ನಂತರ ಏನೇನು ಮಾಡಬಾರದು ಎಂಬುದನ್ನೊಮ್ಮೆ ಗಮನಿಸೋಣ;

ಸೆಕ್ಸ್ ಮಾಡಿದ ಕೂಡಲೇ ಮಲಗೋದು : ಸೆಕ್ಸ್‌ ಮಾಡಿದ ನಂತರ ಮಾಡುವ ಬಹುದೊಡ್ಡ ತಪ್ಪಾಗಿದೆ. ಮಿಲನ ಕ್ರಿಯೆ ನಡೆಸಿದ ಕೂಡಲೇ ಮಲಗೋದು ಸಂಬಂಧ ಉಳಿಸಿಕೊಳ್ಳುವಲ್ಲಿ ಆರೋಗ್ಯಕರ ವಿಷಯವಲ್ಲ.ಅದಕ್ಕೆ ಬದಲಾಗಿ ಮಲಗುವ ಮುನ್ನ ಒಬ್ಬರ ಜೊತೆ ಇನ್ನೊಬ್ಬರು ಮಾತುಕತೆ ನಡೆಸಿ. ಇದರಿಂದ ನಿಮ್ಮ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.

ಕೂಡಲೇ ಸ್ನಾನ ಮಾಡುವುದು : ಮಿಲನಕ್ರಿಯೆ ಆದ ಕೂಡಲೇ ಅಥವಾ ನಡೆಸುವ ಸಂದರ್ಭದಲ್ಲಿ ಪದೇ ಪದೇ ವಾಶ್‌ ರೂಮ್‌ಗೆ ಹೋಗಿ ಕ್ಲೀನ್‌ ಮಾಡೋದು ಅಥವಾ ಸ್ನಾನ ಮಾಡೋದು ಮಾಡಲೇ ಬೇಡಿ. ನೀವು ಹೀಗೆ ಮಾಡಿದರೆ ಸಂಗಾತಿಗೆ ಒಬ್ಬಂಟಿ ಎಂಬ ಭಾವನೆ ಬರುತ್ತದೆ. ಇದರ ಬದಲು ನೀವು ಸಂಗಾತಿ ಜೊತೆಗೆ ಸ್ನಾನ ಮಾಡಲು ಹೋಗಿ.

ಬೇರೆ ಬೇರೆಯಾಗಿ ಮಲಗೋದು : ಇದು ಸಹ ಸರಿಯಲ್ಲ. ನೀವು ಯಾವಾಗಲೂ ಬೇರೆಯಾಗಿ ಮಲಗುವುದಿದ್ದರೂ ಸಹ ಸೆಕ್ಸ್‌ ಬಳಿಕವಾದರೂ ಜೊತೆಯಾಗಿ ಮಲಗಲೇಬೇಕು.ಯಾಕೆಂದರೆ ಉತ್ತಮ ಸಂಬಂಧಕ್ಕಾಗಿ ಕನೆಕ್ಟಿವಿಟಿ ಡೆವೆಲಪ್‌ಮೆಂಟ್‌ ಅಗತ್ಯವಾಗಿದೆ.

ಮಕ್ಕಳನ್ನು ಜೊತೆಯಾಗಿ ಮಲಗಿಸೋದು : ಹೆಚ್ಚಿನ ಎಲ್ಲಾ ಜನರಿಗೆ ಈ ಅಭ್ಯಾಸ ಇರುತ್ತದೆ. ಆದರೆ ಸೆಕ್ಸ್‌ ಬಳಿಕವೂ ಇದನ್ನು ಮಾಡುವುದು ಸರಿಯಲ್ಲ. ಆ ಸಮಯ ಪೂರ್ತಿಯಾಗಿ ನಿಮ್ಮ ಸಂಗಾತಿಗಾಗಿ ಮೀಸಲಿಡಿ. ಮಕ್ಕಳನ್ನು ನಿಮ್ಮ ಹತ್ತಿರದ ಕೋಣೆ ಅಥವಾ ತಂದೆ ತಾಯಿಯ ಬಳಿ ಬಿಡಿ.

Comments are closed.