*ಯೋಗೀಶ್ ಕುಂಭಾಸಿ
ಕುಂದಾಪುರ: ದೇಶದಲ್ಲಿಯೇ ತಲ್ಲಣ ಮೂಡಿಸಿದ ಕುಂದಾಪುರದ ತ್ರಾಸಿ ಸಮೀಪದ ಮೋವಾಡಿ ಡಾನ್ ಬಾಸ್ಕೋ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರು ಹಾಗೂ ಬಸ್ಸು ನಡುವಿನ ಅಪಘಾತದಲ್ಲಿ ಮೃತರಾದ 8 ಮಕ್ಕಳ ಕುಟುಂಬದ ಪೈಕಿ 6 ಮಕ್ಕಳ ಕುಟುಂಬಕ್ಕೆ ಶಿಕ್ಷಕರ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಪರಿಹಾರ ಚೆಕ್ ದೊರಕಿದ್ದು ಅದರ ವಿತರಣಾ ಕಾರ್ಯ ಸೋಮವಾರ ಹೆಮ್ಮಾಡಿಯಲ್ಲಿ ನಡೆಯಿತು.
ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಮಕ್ಕಳ ಕುಟುಂಬಕ್ಕೆ ಚೆಕ್ ವಿತರಿಸಿದರು.

ಜೂ.21ರಂದು ಮಂಗಳವಾರ ತ್ರಾಸಿಯ ಮೋವಾಡಿ ಕ್ರಾಸ್ ಸಮೀಪದಲ್ಲಿ ಶಾಲಾ ವಿದ್ಯಾರ್ಥಿಗಳಿದ್ದ ಓಮ್ನಿ ಕಾರು ಹಾಗೂ ಬಸ್ಸು ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಡಾನ್ ಬೋಸ್ಕೋ ಶಾಲೆಯ ೮ ವಿದ್ಯಾರ್ಥಿಗಳು ಅಸುನೀಗಿದ್ದರು. 8 ವಿದ್ಯಾರ್ಥಿಗಳ ಪೈಕಿ 6 ವಿದ್ಯಾರ್ಥಿಗಳ ಕುಟುಂಬಕ್ಕೆ ಶಿಕ್ಷಕರ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ತಲಾ 50 ಸಾವಿರ ರೂ. ಪರಿಹಾರ ಚೆಕ್ ದೊರಕಿದ್ದು ಅದರ ಚೆಕ್ ವಿತರಿಸಲಾಯಿತು.

ಅಲ್ಲದೇ ಇಬ್ಬರು ಮಕ್ಕಳು ಯು.ಕೆ.ಜಿ. ಓದುತ್ತಿದ್ದವರಾಗಿದ್ದು ಸರಕಾರದ ಶಿಕ್ಷಕರ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿ ಯೋಜನೆಯಡಿಯಲ್ಲಿ 1ನೇ ತರಗತಿ ನಂತರದ ವಿದ್ಯಾರ್ಥಿಗಳಿಗೆ ಮಾತ್ರ ಪರಿಹಾರ ನೀಡಲಾಗುವ ಕಾರಣ ಇಬ್ಬರಿಗೆ ಸರಕಾರದ ಪರಿಹಾರ ಸಿಕ್ಕಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ಮನವರಿಕೆ ಮಾಡಿ ಉಳಿದೆರಡು ಮಕ್ಕಳ ಕುಟುಂಬಕ್ಕೂ ಪರಿಹಾರ ಧನ ಸಿಗುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ‘ಕನ್ನಡಿಗ ವರ್ಲ್ಡ್’ಗೆ ಈ ಸಂದರ್ಭ ತಿಳಿಸಿದ್ದಾರೆ.
ಪರಿಹಾರ ಚೆಕ್ ವಿತರಣೆ ವೇಳೆ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಬೈಂದೂರು ಪ್ರಾಥಮಿಕ ವಲಯ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ್ ಪೂಜಾರಿ, ಕಟ್‌ಬೆಲ್ತೂರು ಗ್ರಾ.ಪಂ. ಉಪಾಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಮುಖಂಡರಾದ ಶೇಖರ್ ಬಳೆಗಾರ ಮೊದಲಾದವರಿದ್ದರು.
ಇದನ್ನೂ ಓದಿರಿ:
ಮೃತ ಪುಟಾಣಿಗಳ ಪೋಷಕರಿಗೆ ಸಾಂತ್ವಾನ ಹೇಳಿದ ಆಸ್ಕರ್; ನೆರವಿನ ಭರವಸೆ-http://kannadigaworld.com/kannada/karavali-kn/267059.html
ತ್ರಾಸಿ ದುರ್ಘಟನೆಯಲ್ಲಿ ಮೃತಪಟ್ಟ 8 ಕಂದಮ್ಮಗಳಿಗೆ ಶೋಕಸಾಗರದೊಂದಿಗೆ ಅಂತಿಮ ವಿದಾಯ-http://kannadigaworld.com/kannada/karavali-kn/266287.html
ತ್ರಾಸಿ: ಅಪಘಾತದಲ್ಲಿ 8 ಮಕ್ಕಳ ಸಾವು; ಶೋಕಸಾಗರದಲ್ಲಿ ಜನತೆ; ಹೆಮ್ಮಾಡಿ ಬಂದ್; ಶಾಲಾ ಕಾಲೇಜು ರಜೆ
ಕುಂದಾಪುರದ ತ್ರಾಸಿಯಲ್ಲಿ ಎಂಟು ಮಕ್ಕಳನ್ನು ಬಲಿಪಡೆದ ಕರಾಳ ಮಂಗಳವಾರ: ಈ ಸಾವಿಗ್ಯಾರು ಹೊಣೆ?
http://kannadigaworld.com/kannada/karavali-kn/266192.html
ತ್ರಾಸಿ ದುರ್ಘಟನೆ ಸಂದರ್ಭ ಸಾಮಾಜಿಕ ಜಾಲತಾಣಗಳ ದುರುಪಯೋಗ; ಸೈಬರ್ ಕ್ರೈಮ್ ವಿಭಾಗಕ್ಕೆ ದೂರು
Comments are closed.