ಕರಾವಳಿ

ತಲೆಯ ಮೇಲೆ ನಡಿಗೆ : ಪುರುಷೋತ್ತಮ ದೇರಾಜೆಯವರಿಂದ ವಿಶ್ವ ದಾಖಲೆ

Pinterest LinkedIn Tumblr

world_record_purushottam1

ವಿಶ್ವ ದಾಖಲೆ ಪುಟ ಸೇರಿದ ಪುರುಷೋತ್ತಮ ದೇರಾಜೆ

_ Sathish Kapikad

ಮಂಗಳೂರು : ಅಂತಾರಾಷ್ಟ್ರೀಯ ಯೋಗ ಪಟು ಪುರುಷೋತ್ತಮ ದೇರಾಜೆಯವರು ಅತೀ ವೇಗವಾಗಿ ತಲೆಕೆಳಗಾಗಿ ತಲೆಯ (Fastest head stand moving) ಮೇಲೆ ಒಂದು ನಿಮಿಷಕ್ಕೆ ಏಳು ಮೀಟರ್ ನಡೆದುಕೊಂಡು ಹೋಗುವ ಮೂಲಕ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು ಅರಂತೋಡು ಗ್ರಾಮದ ದೇರಾಜೆ ಮನೆತನದ ಶ್ರೀ ಸಣ್ಣಯ್ಯ ಗೌಡ ಹಾಗೂ ಶ್ರೀಮತಿ ಸರಸ್ವತಿ ಯವರ ಪುತ್ರರಾದ ಪುರುಷೋತ್ತಮ ದೇರಾಜೆ ಯವರು Assist world records Research Foundation ನಲ್ಲಿ ಹೊಸ ದಾಖಲೆ ಮಾಡಿದ್ದಾರೆ.

ಇವರು ಸುಮಾರು 24 ವರ್ಷಗಳಿಂದ ಯೋಗಾಭ್ಯಾಸದ್ಲಲಿ ತೊಡಗಿದ್ದು, ವಿಶ್ವ ದಾಖಲೆ ಮಾಡಬೇಕೆಂದು ಇವರ ಆಸೆ ಯಾಗಿತ್ತು ಇದಕ್ಕಾಗಿ ಇವರು ತಲೆಯ ಮೇಲೆ ನಿಂತು ವಿಶ್ವ ದಾಖಲೆ ಮಾಡಬೇಕೆಂದು ತರಭೇತಿಯಲ್ಲಿ ತೊಡಗಿದ್ದರು. ಆದರೆ ಈ ಬಗ್ಗೆ 90 ನಿಮಿಷಗಳ ದಾಖಲೆ ಈಗಾಗಲೇ ಇರುವುದರಿಂದ ಇವರು ಹೊಸ ಪ್ರಯತ್ನದ ಮೂಲಕ ತಲೆಯ ಮೇಲೆ ನಡೆದುಕೊಡು ಹೋಗುವ ಅಭ್ಯಾಸ ಮಾಡಿಕೊಂಡು ಇದೀಗ ದಾಖಲೆ ಪುಟಕ್ಕೆ ಸೇರಿದ್ದಾರೆ.

world_record_purushottam2

ನನ್ನ ಅಪ್ಪ ಅಮ್ಮನ ಅವಿರತ ಪ್ರೋತ್ಸಾಹ ಹಾಗೂ ನನ್ನ ಕುಟುಂಬಸ್ಥರ ಅಪಾರವಾದ ಬೆಂಬಲದಿಂದ ನನಗೆ ಈ ಸಾಧನೆ ಮಾಡಲು ಸಾಧ್ಯವಾಯಿತು. ಜೊತೆಗೆ ನನ್ನ ಅಣ್ಣ ನಾನು ಚಿಕ್ಕವನಾಗಿರುವಾಗ ಹೇಳಿಕೊಟ್ಟ ಈ ತಲೆ ನಡಿಗೆಯು ಇಂದು ನನಗೆ ವಿಶ್ವ ದಾಖಲೆ ಮಾಡಲು ಸಹಕಾರಿಯಾಯಿತು, ಈ ಒಂದು ಸಾಧನೆಯಿಂದ ನನಗೆ ತುಂಬಾ ಖುಷಿಯಾಗುತ್ತದೆ ಎಂದು ಹೆಮ್ಮೆಯಿಂದ ಹೇಳುತ್ತಾರೆ ಪುರುಷೋತ್ತಮ ದೇರಾಜೆ.

ಪತ್ನಿ ಹಾಗು ಮಗಳ ಜೊತೆ ಬೆಂಗಳೂರಿನಲ್ಲಿ ವಾಸವಾಗಿರುವ ಪುರುಷೋತ್ತಮ ದೇರಾಜೆ ಅವರು ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ purchase officer ಆಗಿ ಕೆಲಸ ಮಾಡುತ್ತಿದ್ದಾರೆ.

ಇದೀಗ ಮಾಡಿರುವ ವರ್ಲ್ಡ್ರ್ ರೆಕಾರ್ಡ್ ಅನ್ನು ಉಳಿಸುವುದರ ಜೊತೆಗೆ ಇನ್ನು ಉನ್ನತ ಮಟ್ಟದಲ್ಲಿ ಸಾಧನೆ ಮಾಡಬೇಕು ಎಂಬುದು ನನ್ನ ಅಸೆ. ಈಗಾಗಲೇ ಹಲವಾರು ಅಂತಾರಾಷ್ಟ್ರೀಯ, ರಾಷ್ಟ್ರೀಯ ಯೋಗ ಪ್ರಶಸ್ತಿಗಳು ದೊರಕಿದೆ. ಸದ್ಯಕ್ಕೆ ನನ್ನ ಉದ್ಯೋಗದೊಂದಿಗೆ ಯೋಗ ತರಗತಿಗಳನ್ನು ಕೂಡ ನೀಡುತಾ ಇದ್ದೇನೆ ಎಂದು ಪುರುಷೋತ್ತಮ ದೇರಾಜೆಯವರು ಖುಷಿಖುಷಿಯಿಂದ ತಮ್ಮ ಮನದಾಳದ ಅಭಿಲಾಷೆಯನ್ನು ವ್ಯಕ್ತಪಡಿಸಿದ್ದಾರೆ.

Comments are closed.