ಕರಾವಳಿ

ಪರಿಸರ ಜಾಗೃತಿ ಕಾರ್ಯಕ್ರಮ : 105 ವರ್ಷ ಪ್ರಾಯದಲ್ಲೂ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಿದ ಸಾಲುಮರದ ತಿಮ್ಮಕ್ಕ

Pinterest LinkedIn Tumblr

Salumara_thimmakka_ (1)

ಮಂಗಳೂರು,ಜು.25: ಆಗ್ನೇಸ್ ಟುವಾರ್ಡ್ಸ್ ಕಮ್ಯುನಿಟಿ ಮತ್ತು ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ವತಿಯಿಂದ ಸೋಮವಾರ ನಗರದ ಸೈಂಟ್ ಆಗ್ನೇಸ್ ಕಾಲೇಜನ ಸಭಾಂಗಣದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ ನಡೆಯಿತು.

105ರ ಹರೆಯದ ಸಾಲುಮರದ ತಿಮ್ಮಕ್ಕ ಅವರು ಆಗ್ನೇಸ್ ಕಾಲೇಜಿನ ಗೇಟಿನ ಬಳಿಯ ಮುಖ್ಯ ರಸ್ತೆಯ ವಿಭಾಜಕ ಹಾಗೂ ಇತರ ಕಡೆ ವಿದ್ಯಾರ್ಥಿಗಳ ಜತೆ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಮಾತನಾಡಿದ ಅವರು, ಮರಗಳನ್ನು ನೆಟ್ಟು ಬೆಳೆಸಿದರೆ ಅವುಗಳು ಫಲವನ್ನು ನೀಡುತ್ತವೆ. ಮಾತ್ರವಲ್ಲದೇ ಗಾಳಿ ಮಳೆಗೆ ಸಹಕಾರ ಅಗುವುದರ ಜೊತೆಗೆ ವಾತಾವರಣ ಕೂಡ ಶುದ್ಧವಾಗಿರುತ್ತದೆ. ಆದ್ದರಿಂದ ಮರಗಳನ್ನು ಕಡಿಯುವವರನ್ನು ಪೊಲೀಸರಿಗೆ ದೂರು ನೀಡಿ ಜೈಲಿಗೆ ಹಾಕಬೇಕು ಎಂದು ಸಾಲುಮರದ ತಿಮ್ಮಕ್ಕ ಹೇಳಿದರು.

Salumara_thimmakka_ (2) Salumara_thimmakka_ (3) Salumara_thimmakka_ (4) Salumara_thimmakka_ (5) Salumara_thimmakka_ (6) Salumara_thimmakka_ (7) Salumara_thimmakka_ (8) Salumara_thimmakka_ (9) Salumara_thimmakka_ (10) Salumara_thimmakka_ (11) Salumara_thimmakka_ (12) Salumara_thimmakka_ (13) Salumara_thimmakka_ (14) Salumara_thimmakka_ (15)

ಕಾರ್ಯಕ್ರಮಕ್ಕೆ ಆಗಮಿಸುವ ಸಂದರ್ಭ ಸಭಾಂಗಣ ತನಕವೂ ನಡೆದುಕೊಂಡೇ ಬಂದ 105ರ ಹರೆಯದ ಸಾಲುಮರದ ತಿಮ್ಮಕ್ಕ ಅವರನ್ನು ಅರ್ಧದಿಂದ ಕಾರಿಗೆ ಹತ್ತಿಸಲಾಯಿತು. ಕಾಲೇಜಿನ ವಿದ್ಯಾರ್ಥಿಗಳು ಭಾರಿ ಕರತಾಡತನ ಮೂಲಕ ಸುತ್ತುವರಿದು ಅವರನ್ನು ಸ್ವಾಗತಿಸಿದರು. 105 ವರ್ಷ ಪ್ರಾಯದಲ್ಲೂ ಮಕ್ಕಳ ಜತೆ ನಿಂತುಕೊಂಡೇ ಮಾತನಾಡಿದ ಅವರು,ತನ್ನ ಜೀವನ ಹಾಗೂ ಪರಿಶ್ರಮದ ಕುರಿತಂತೆ ಮಕ್ಕಳಿಗೆ ಅವರು ವಿವರಿಸಿದರು.

ಕಾರ್ಯಕ್ರಮಕ್ಕೆ ಮೊದಲು ಕಾಲೇಜು ಆವರಣದ ಎದುರು ಗಿಡ ನೆಡುವ ಕಾರ್ಯಕ್ರಮಕ್ಕೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಚಾಲನೆ ನೀಡಿದರು. ಸೈಂಟ್ ಆಗ್ನೇಸ್ ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಎಂ.ಸುಪ್ರಿಯಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Salumara_thimmakka_ (16) Salumara_thimmakka_ (17) Salumara_thimmakka_ (18) Salumara_thimmakka_ (19) Salumara_thimmakka_ (20) Salumara_thimmakka_ (21) Salumara_thimmakka_ (22) Salumara_thimmakka_ (23) Salumara_thimmakka_ (24) Salumara_thimmakka_ (25) Salumara_thimmakka_ (26)

ಕಾರ್ಪೊರೇಟರ್ಗಳಾದ ಸಬಿತಾ ಮಿಸ್ಕಿತ್, ನವೀನ್ ಡಿಸೋಜ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಕುಂತಳಾ ಶೆಟ್ಟಿ, ಸೈಂಟ್ ಆಗ್ನೇಸ್ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಎಂ.ಸುಪ್ರಿಯಾ,ಉಪ ಪ್ರಾಂಶುಪಾಲರಾದ ಡಾ.ಎಂ.ಜೆಸ್ವಿನಾ, ಜಂಟಿ ಕಾರ್ಯದರ್ಶಿ ಡಾ.ಮರಿಯಾ ರೂಪ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ನೀನಾ, ಎನ್‌ಎಸ್‌ಎಸ್ ಕಾರ್ಯಕ್ರಮ ಸಂಯೋಜಕ ಡಾ.ಉದಯ ಕುಮಾರ್ ಬಿ., ಅರ್ಥಶಾಸ ವಿಭಾಗದ ಮುಖ್ಯಸ್ಥೆ ಡಾ.ಎಂ.ವೆನಿಸ್ಸಾ ಮತ್ತಿತರರು ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಧ್ಯಾಪಕಿ ಪ್ರೊ.ದೇವಿಪ್ರಭಾ ಆಳ್ವ ಸ್ವಾಗತಿಸಿದರು. ವಿದ್ಯಾರ್ಥಿನಿ ನಯನಾ ವಂದಿಸಿದರು.

Comments are closed.