ಕರಾವಳಿ

ಡಿವೈಎಸ್‌ಪಿ ಕಲ್ಲಪ್ಪ ಹಂದಿಬಾಗ್ ಆತ್ಮಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿ ಬಂಧನ

Pinterest LinkedIn Tumblr

joy milton

ಬೆಂಗಳೂರು: ಚಿಕ್ಕಮಗಳೂರು ಡಿವೈಎಸ್‌ಪಿ ಕಲ್ಲಪ್ಪ ಹಂದಿಬಾಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ನಗರದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ.

ಬೆಳಂದೂರಿನ ಪಬ್ ಒಂದರಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದ ಜಾಯ್ ಮಿಲ್ಟನ್(22) ಬಂಧಿತ ಆರೋಪಿ. ಜೂ.24 ರಂದು ಚಿಕ್ಕಮಗಳೂರಿನಿಂದ ತೇಜಸ್ ಗೌಡನನ್ನು ಅಪಹರಿಸಿದ್ದ ತಂಡದೊಂದಿಗೆ ಈತನೂ ಭಾಗಿಯಾಗಿದ್ದ. ಆನೆಪಾಳ್ಯದಲ್ಲಿ ವಾಸ ಮಾಡುತ್ತಿದ್ದ ಈತ ಆರೋಪಿಗಳಿಗೆ ಸಹಕಾರ ನೀಡಿದ್ದಲ್ಲದೇ ತೇಜಸ್ ಗೌಡನಿಂದ ಹಣ ವಸೂಲಿ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರಿನಿಂದ ತೇಜಸ್ ಗೌಡನನ್ನು ಅಪಹರಿಸಿಕೊಂಡು ಬಂದಿದ್ದ ಆರೋಪಿಗಳು ಸಂಜಯನಗರದ ಮನೆಯೊಂದರ ನಾಯಿಯ ಕೊಠಡಿಯಲ್ಲಿ ಆತನನ್ನು ಕೂಡಿಹಾಕಿ ಕಿರುಕುಳ ನೀಡಿದ್ದರು. ಇದಕ್ಕೆ ಜಾಯ್ ಮಿಲ್ಟನ್ ಸಹಕಾರ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಡಿವೈಎಸ್‌ಪಿ ಕಲ್ಲಪ್ಪ ಆತ್ಮಹತ್ಯೆ ಮಾಡಿಕೊಂಡ ನಂತರ ಜಾಯ್ ಮಿಲ್ಟನ್ ತಲೆಮರೆಸಿಕೊಂಡಿದ್ದ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Comments are closed.