ಕಾಸರಗೋಡು,ಜುಲೈ.22 : ಅಕ್ರಮ ಮರಳುಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ ಕರಾವಳಿ ಪೊಲೀಸ್ ಠಾಣೆಯ ಪೊಲೀಸರ ಮೇಲೆ ಹಲ್ಲೆ ನಡೆದ ಘಟನೆ ಕಾಸರಗೋಡು ಸಮೀಪದ ತಳಂಗೆರೆಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಪೊಲೀಸರನ್ನು ವಿ.ಕೆ.ರಂಜಿತ್(34) ಮತ್ತು ರತೀಶ್ ಚಂದ್ರನ್(37) ಎಂದು ಗುರುರಿಸಲಾಗಿದ್ದು, ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಮೇಲೆ ಮಾರಕಬಾಗಿ ಹಲ್ಲೆಗೈದು ಅವರನ್ನು ಹೊಳೆಗೆ ಎಸೆಯಲಾಗಿತ್ತು. ಈಜಿ ದಡ ಸೇರಲು ಕೂಡ ಬಿಡದೇ ಹಲ್ಲೆಗೈದು ಕೊಲೆಗೆ ಯತ್ನಿಸಲಾಗಿತ್ತು.
ಪೊಲೀಸ್ ದಾಳಿ ಸಂದರ್ಭ ಐದು ದೋಣಿಗಳಲ್ಲಿ ಇಪ್ಪತ್ತು ಮಂದಿ ಮರಳುಗಾರಿಕೆ ನಿರತರಾಗಿದ್ದರು. ಪೊಲೀಸರು ಎಲ್ಲರ ಮೇಲೆ ಪ್ರಕರಣ ದಾಖಲಿಸಿ, ಇವರ ಪತ್ತೆಗೆ ಶೋಧ ನಡೆಸಿದ್ದಾರೆ.

Comments are closed.