ಚಂದನವನಕ್ಕೆ ಹೊಸಬರ ಜತೆಗೆ ಹೊಸತನವೂ ಹರಿದು ಬರುತ್ತಿದೆ. ಹಾಗಾಗಿಯೇ ಇತ್ತೀಚೆಗೆ ನಿರ್ಮಾಣವಾಗುತ್ತಿರುವ ಚಿತ್ರಗಳು ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುತ್ತವೆ. ಅಂತಹ ಚಿತ್ರಗಳ ಸಾಲಿಗೆ ‘ಸಿನಿಮಾ ಎಂಬ ಮಾಯೆ’ ಹೊಸದಾಗಿ ಸೇರುತ್ತಿದೆ. ‘ಪ್ರೀತಿ ಮಾಡು ತಮಾಷೆ ನೋಡು’, ‘ಸೀತಾಪತಿ’ ಸೇರಿದಂತೆ ಹಲವಾರು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ್ದ ಎನ್.ಎಸ್. ಶ್ರೀಧರ್ ಈ ಚಿತ್ರಕ್ಕೆ ಆಯಿಕ್ಷನ್ ಕಟ್ ಹೇಳುತ್ತಿದ್ದಾರೆ.
ಇದು ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಕೂಡ ಅವರದೇ. ಬೆಂಗಳೂರು, ಮಂಗಳೂರು, ಮಡಿಕೇರಿ ಹಾಗೂ ಹೈದರಾಬಾದ್ನ ರಾಮೋಜಿ ರಾವ್ ಫಿಲಂ ಸ್ಟುಡಿಯೋದಲ್ಲಿ ಶೇ 70ರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ.
ಮರ್ಡರ್ ಹಾಗೂ ಹಾರರ್ ಜತೆಗೆ ಕಾಮಿಡಿ ಟಚ್ ನೀಡಿ ಕಥೆಯನ್ನು ಹೆಣೆಯ ಲಾಗಿದೆ.
ನಿರ್ದೇಶಕರಾದ ಆನಂದ್ ಪಿ ರಾಜು ಹಾಗೂ ಎಂ.ಡಿ. ಕೌಶಿಕ್ ಈ ಚಿತ್ರದಲ್ಲಿ ಕಾಣಿಸಿಕೊಂಡಿರುವ ಮತ್ತೊಂದು ವಿಶೇಷ. ಗೌರಿ ವೆಂಕಟೇಶ್ ಛಾಯಾಗ್ರಹಣ ಹಾಗೂ ಸನ್ನಿ ಸಂಗೀತ ಚಿತ್ರಕ್ಕಿದ್ದು, ಕೌರವ ವೆಂಕಟೇಶ್ ಸಾಹಸ ಸಂಯೋಜಿಸಿದ್ದಾರೆ.
ಸಾಲೋಮನ್ ಸಂಕಲನ, ಕವಿರಾಜ್ ಸಾಹಿತ್ಯ ಹಾಗೂ ಹರಿ ನೃತ್ಯ ನಿರ್ದೇಶನ ಮಾಡಿದ್ದಾರೆ. ಹಾಲೇಶ್ ಚಿತ್ರದುರ್ಗ ಸಹನಿರ್ಮಾಪಕ ಮತ್ತು ಗೀತಾ ಪವಾರ್ ಕಾರ್ಯಕಾರಿ ನಿರ್ಮಾಪಕರಾಗಿರುವ ಚಿತ್ರದಲ್ಲಿ ಮಹೇಶ್, ಅಸ್ಮಾ, ಅನು, ಧೃತಿ, ಕೋಲಾರ ನಾಗೇಶ್ ಮುಂತಾದವರ ತಾರಾಗಣವಿದೆ.

Comments are closed.