ಮಂಗಳೂರು: ನಗರದ ಪಂಪುವೆಲ್ ಹಾಗೂ ಮಣ್ಣಗುಡ್ಡೆ ಬಳಿಯ ಮಟ್ಕ ಆಡ್ಡಗಳಿಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ಮಟ್ಕಾ ಆಟಕ್ಕೆ ಸಾರ್ವಜನಿಕರಿಂದ ಹಣ ಸಂಗ್ರಹ ಮಾಡುತ್ತಿದ್ದ ನಾಲ್ವರನ್ನು ಬಂಧಿಸಿ, ನಗದು ಹಾಗೂ ಸೊತ್ತುಗಳನ್ನು ವಶಪಡಿಸ್ಕೊಂಡಿದ್ದಾರೆ.
ಬಂಧಿತ ಆರೋಪಿಗಳನ್ನು ಉಜ್ಜೋಡಿಯ ರತನ್ ಕುಮಾರ್ (46), ಕಂಕನಾಡಿಯ ಯತೀಶ್ (45), ಉರ್ವ ಮಾರಿಗುಡಿಯ ಸುರೇಶ್ ಆಚಾರಿ (44), ಕಂಕನಾಡಿಯ ಧರ್ಮಪಾಲ್ ಶೆಟ್ಟಿ (60) ಎಂದು ಗುರುತಿಸಲಾಗಿದ್ದು, ಬಂಧಿತರಿಂದ ಮಟ್ಕಾದಲ್ಲಿ ಸಂಗ್ರಹವಾಗಿದ್ದ ರೂ. 72530 ನಗದು ಹಾಗೂ ಎರಡು ದ್ವಿಚಕ್ರ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಒಂದು ಪ್ರಕರಣದಲ್ಲಿ ಮಂಗಳೂರು ನಗರದ ಪಂಪುವೆಲ್ ಬಳಿ ಇರುವ ಪದ್ಮಶ್ರೀ ಹೊಟೇಲ್ ನ ಬಳಿಯಲ್ಲಿ ಮಟ್ಕ ಆಟದಲ್ಲಿ ನಿರತರಾಗಿದ್ದ ಸ್ಥಳಕ್ಕೆ ಸಿಸಿಬಿ ಪೊಲೀಸರು ಧಾಳಿ ಮಾಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದ ಉಜ್ಜೋಡಿಯ ರತನ್ ಕುಮಾರ್ ಎಂಬಾತನನ್ನು ಬಂಧಿಸಿ, ಆತನಿಂದ ಮಟ್ಕ ಆಟದಲ್ಲಿ ಸಂಗ್ರಹವಾಗಿದ್ದ ಒಟ್ಟು 51,030/- ರೂಪಾಯಿ, ಮಟ್ಕ ಚೀಟಿ, ಮತ್ತು ಸಿಬಿಝಡ್ ಮೋಟಾರು ಸೈಕಲ್ ನ್ನು ವಶಪಡಿಸಿಕೊಂಡಿದ್ದಾರೆ.ಇದರ ಒಟ್ಟು ಬೆಲೆ 94,000/- ರೂಪಾಯಿ ಆಗಿರುತ್ತದೆ. ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕಾನೂನು ಕ್ರಮದ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಮಣ್ಣಗುಡ್ಡೆ ಗುರ್ಜಿ ಜಂಕ್ಷನ್ ಎದುರು ಮಟ್ಕ ಆಟ ಆಡುವಲ್ಲಿಗೆ ದಾಳಿ ಮಾಡಿ ಅಲ್ಲಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹ ಮಾಡುತ್ತಿದ್ದ ಕಂಕನಾಡಿಯ ಯತೀಶ್, ಉರ್ವ ಮಾರಿಗುಡಿಯ ಸುರೇಶ್ ಆಚಾರಿ ಹಾಗೂ ಕಂಕನಾಡಿಯ ಧರ್ಮಪಾಲ್ ಶೆಟ್ಟಿ ಎಂಬವರನ್ನು ಬಂಧಿಸಿ ಅವರಿಂದದ ರೂ. 21,500 ನಗದು, ಮಟ್ಕ ನಂಬರ್ ಬರೆದ ಚೀಟಿ-1, ಜುಪಿಟರ್ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಒಟ್ಟು ಬೆಲೆ 65,000/- ರೂಪಾಯಿ ಆಗಿರುತ್ತದೆ. ಮೂವರು ಆರೋಪಿಗಳನ್ನು ಮತ್ತು ಸೊತ್ತುಗಳನ್ನು ಮುಂದಿನ ಕ್ರಮದ ಬಗ್ಗೆ ಬರ್ಕೆ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಮಂಗಳೂರು ನಗರ ಪೊಲೀಸ್ ಆಯುಕ್ತರ ಆದೇಶದಂತೆ ಪೊಲೀಸ್ ಉಪ ಆಯುಕ್ತರ (ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ಮತ್ತು ಸಂಚಾರ) ಮಾರ್ಗದರ್ಶನದಂತೆ ನಡೆದ ಈ ಎರಡು ಪ್ರಕರಣಗಳ ಕಾರ್ಯಾಚರಣೆಯಲ್ಲಿ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಇನ್ಸ್ ಪೆಕ್ಟರ್ ಸುನೀಲ್.ವೈ.ನಾಯ್ಕ್ ಮತ್ತು ಪಿಎಸ್ಐ ಶ್ಯಾಮ್ ಸುಂದರ್.ಹೆಚ್.ಎಂ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
Comments are closed.