ಉಡುಪಿ: ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆಯ ಹಿಂದಿರುವ ಶಕ್ತಿಗಳ ವಿರುದ್ದ ಕಠಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಉಡುಪಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ನಡೆಸಿತು.

ಉಡುಪಿ ಸರ್ವೀಸ್ ಬಸ್ ನಿಲ್ದಾಣದ ಕ್ಲಾಕ್ ಟವರ್ ಎದುರು ಪ್ರತಿಭಟನೆ ನಡೆಸಿದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಸರಕಾರ ಸರಕಾರಿ ಅಧಿಕಾರಿಗಳಿಗೆ ಸಾವಿನ ಭಾಗ್ಯ ನೀಡುತ್ತಿದೆ ಎಂದು ಲೇವಡಿ ಮಾಡಿದರು. ಇಲ್ಲಿಯವರೆಗೆ ಆತ್ಮಹತ್ಯೆಗೈದ ಅಧಿಕಾರಿಗಳ ಬಗ್ಗೆ ಇರಲಿ, ರಾಜೀನಾಮೆ ನೀಡಿರುವ ಅಧಿಕಾರಿಗಳ ಬಗ್ಗೆ ಆಗಲೀ ಸರಕಾರ ನಿಸ್ಪಕ್ಷಪಾತ ತನಿಖೆ ನಡೆಸದೇ ರಾಜಕೀಯ ಮುಖಂಡರ ಬೆಂಬಲಕ್ಕೆ ನಿಂತಿದೆ.
ಡಿವೈ ಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆಯಲ್ಲಿ ಕೂಡಾ ಸರಕಾರ ನಿಸ್ಪಕ್ಷಪಾತ ತನಿಖೆ ನಡೆಸಿರುವುದು ಅನುಮಾನ ಇದೆ. ಕೆ.ಜೆ ಜಾರ್ಜ್ ಸೇರಿ ಅನೇಕ ಅಧಿಕಾರಿಗಳ ಬಗ್ಗೆ ಡೆತ್ ನೋಟ್ ನಲ್ಲಿ ಹೆಸರಿದ್ದರೂ ಕೆ.ಜೆ ಜಾರ್ಜ್ ಅವರ ಬೆನ್ನಿಗೆ ಸರಕಾರ ನಿಂತಿದೆಯೇ ಹೊರತು ಈ ಬಗ್ಗೆ ಸರಿಯಾದ ತನಿಖೆಯನ್ನು ನಡೆಸಲು ಮುಂದಾಗುತ್ತಿಲ್ಲ ಎಂದು ಕರವೇ ಆರೋಪಿಸಿತು.
Comments are closed.