ಕರಾವಳಿ

ಕುಂದಾಪುರ: ಶಾಲಾ ವಠಾರದಲ್ಲಿ ಪ್ರಾರ್ಥನಾ ಮಂದಿರ ಮಾಡುವ ಹುನ್ನಾರ: ಹಿಂದೂ ಸಂಘಟನೆಗಳ ಖಂಡನೆ

Pinterest LinkedIn Tumblr

ಕುಂದಾಪುರ: ಕುಂದಾಪುರದ ಹೃದಯಭಾಗದಲ್ಲಿರುವ ಬೋರ್ಡ್ ಹೈಸ್ಕೂಲ್ ಎಂದು ಖ್ಯಾತಿ ಪಡೆದಿರುವ ಶಾಲೆಗೆ ಸುಮಾರು 130 ವರ್ಷಗಳ ಇತಿಹಾಸವಿದ್ದು, ಈ ಸರಕಾರಿ ಶಾಲೆಯಲ್ಲಿರುವ ಸ್ಥಳವನ್ನು ಧಾರ್ಮಿಕ ಕೇಂದ್ರವನ್ನಾಗಿ ಮಾಡಲು ಹೊರಟರೆ ಸಂವಿಧಾನಕ್ಕೆ ವಿರುದ್ದವಾಗುವುದಲ್ಲದೇ ಕೋಮು ಭಾವನೆಯನ್ನು ಕೆರಳಿಸಲು ಅವಕಾಶವಿರುತ್ತದೆ . ಶಾಲಾ ವಠಾರದಲ್ಲಿರುವ ಸ್ಥಳವನ್ನು ಖಾಸಗಿ ಸೊತ್ತಾಗಿ ಮಾರ್ಪಡಿಸಲು ಷಡ್ಯಂತ್ರ ನಡೆಸಿದರೆ ಸಾರ್ವಜನಿಕರೊಂದಿಗೆ ಕೂಡಿಕೊಂಡು ಉಗ್ರವಾದ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಉಡುಪಿ ಜಿಲ್ಲಾ ಬಜರಂಗದಳದ ಸಹ ಸಂಚಾಲಕ ಗಿರೀಶ್ ಕುಂದಾಪುರ ಹೇಳಿದ್ದಾರೆ.

????????????????????????????????????

ಅವರು  ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಈ ವಿಚಾರ ತಿಳಿಸುತ್ತಾ ಈ ಶಾಲೆಯಲ್ಲಿ ಸುಮಾರು 2 ಸಾವಿರ ವಿದ್ಯಾರ್ಥಿಗಳು ವ್ಯಾಸಾಂಗಮಾಡುತ್ತಿದ್ದು, ಶಾಲೆಯ ಮೈದಾನದ ಮಧ್ಯಭಾಗದಲ್ಲಿ ಮುಸ್ಲಿಂರು ವರ್ಷಕ್ಕೊಮ್ಮೆ ಯಾ ಎರಡು ಬಾರಿ ಪ್ರಾರ್ಥನೆ ಸಲ್ಲಿಸುವ ಕೇಂದ್ರವಿದ್ದು ಈ ಪ್ರಾರ್ಥನಾ ಕೇಂದ್ರವನ್ನು ಮುಸ್ಲಿಂ ಸಮುದಾಯದವರು ತಮ್ಮ ಖಾಸಗಿ ಸೊತ್ತನ್ನಾಗಿ ಮಾಡಿಕೊಳ್ಳಲು ಹೊರಡಿರುವುದು ಖಂಡನೀಯವಾದದು. ಈ ಶಾಲೆಯಲ್ಲಿ ಕಲಿಯುತ್ತಿರುವ ೨ಸಾವಿರ ವಿದ್ಯಾರ್ಥಿಗಳಿಗೆ ಆಟಕ್ಕಾಗಲಿ, ವ್ಯಾಯಾಮಕ್ಕಾಗಲಿ ಇದ್ದ ಮೈದಾನದಲ್ಲಿ ಸ್ಥಳವಾಕಾಶದ ಕೊರತೆ ಇದೆ. ಹೀಗಿರುವಾಗ 0.16 ಎಕರೆ ಸ್ಥಳವನ್ನು ತಮಗೆ ಕೊಡಿ ಎಂದು ಕೇಳುತ್ತಿರುವ ಮುಸ್ಲಿಂ ಮುಖಂಡರ ಬೇಡಿಕೆ ತೀರಾ ಬಾಲಿಶ. ಈ ಪ್ರಾರ್ಥನಾ ಕೇಂದ್ರಕ್ಕೆ ವಿಶಾಲವಾದ ಸ್ಥಳ ಬೇಕೆಂದು ಬಯಸಿದ್ದಲ್ಲಿ ಕುಂದಾಪುರದ ಮಸೀದಿಯ ಎದುರುಗಡೆ ವಿಶಾಲವಾದ ಕಾಲಿ ಸ್ಥಳಿವಿದೆ ಅಲ್ಲಿಗೆ ಅದನ್ನು ವರ್ಗಾಯಿಸಲು ನಮ್ಮ ಅಭ್ಯಂತರವಿಲ್ಲ ಎಂದರು.

ನೂತನ ಸಚಿವರಿಗೆ ಮುಸ್ಲಿಂ ಮುಖಂಡರುಗಳು ಮಾಡಿಕೊಂಡ ಮನವಿಯ ಮಾಹಿತಿಯಲ್ಲಿ ಹಾಲಿ ಪ್ರಾರ್ಥನೆ ಮಾಡುವ ಸ್ಥಳದ ಸರ್ವೆ ನಂಬ್ರ 147/1 ಅಯಲ್ಲಿ ಒಟ್ಟು 1.60 ಎಕರೆ ಸ್ಥಳದಲ್ಲಿ 0.16ಎಕರೆ ಸ್ಥಳವನ್ನು ತಮ್ಮ ಮಸೀದಿಯ ಸುರ್ಪದಿಗೆ ನೀಡಬೇಕು ಎಂದು ಒತ್ತಾಯಿಸಿದ್ದರು. ಇನ್ನು ಈ ಸ್ಥಳದ ದಾಖಲೆಗಳನ್ನು ಪರಿಶೀಲಿಸಿದಾಗ ಸ್ಥಳಕ್ಕೆ ಸಂಬಂಧಪಟ್ಟ ದಾಖಲೆಗಳಲ್ಲಿ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿರುತ್ತದೆ. ಮೂಲ ಅಡಂಗಲ್ ದಾಖಲೆಯಲ್ಲಿ ಶಾಲೆಯ ಜಾಗವೆಂದೂ ನಮೂದಾಗಿತ್ತು. ನಂತರದಲ್ಲಿ \ಅದನ್ನು ಕೈ ಬರವಣಿಗೆಯ ಮೂಲಕ ಈದ್ಗಾ ಎಂದು ಬರೆಯಲಾಗಿತ್ತು. ನಂತರ ಬಂದ ಆರ್‌ಟಿಸಿಯಲ್ಲಿ ಶಾಲಾ ಸ್ಥಳವೆಂದೂ ಮತ್ತು ಅದರ ನಂತರ ಬಂದ ಕಂಪ್ಯೂಟರ್ ಆರ್‌ಟಿಸಿಯಲ್ಲಿ ಸರಕಾರವೆಂದು ನಮೂದಾಗಿದೆ. ಈ ಬಗ್ಗೆ ಉಪ ವಿಭಾಗಾದಿಕಾರಿಯವರನ್ನು ಭೇಟಿಯಾಗಿ ಮೌಖಿಕವಾಗಿ ದೂರನ್ನು ನೀಡಲಾಗಿದ್ದು ದಾಖಲೆಗಳಲ್ಲಾದ ಅಕ್ರಮಗಳನ್ನು ಸರಿಪಡಿಸಿ ಆ ಸ್ಥಳವನ್ನು ಈ ಹಿಂದೆ ಹೇಗಿತ್ತೋ ಹಾಗೆಯೇ ಮಾಡುವಂತೆ ಆದೇಶ ಹೊರಡಿಸಬೇಕು ಎಂದು ಅದಿಕಾರಿಗಳನ್ನು ಆಗ್ರಹಿಸುತ್ತೇವೆ ಎಂದು ಅವರು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಹಿಂಜಾವೇ ಮುಖಂಡರಾದ ಶಂಕರ ಅಂಕದಕಟ್ಟೆ, ದಿನೇಶ ಆಚಾರ್ ಉಪಸ್ಥಿತರಿದ್ದರು.

Comments are closed.