ಕರಾವಳಿ

ಪರಪುರುಷನ ಜೊತೆ ಪಲಾಯನ: ಪತ್ನಿ ದುರ್ನಡತೆ ರುಜುವಾತು; ಪತಿಗೆ ಸಿಕ್ಕ ಡೈವೋರ್ಸ್

Pinterest LinkedIn Tumblr

ಕುಂದಾಪುರ: ತಾಲೂಕಿನ ಸಿದ್ದಾಪುರ ಗ್ರಾಮದ ಸಭಾಗೃಹವೊಂದರಲ್ಲಿ 2011ನೇ ಅಕ್ಟೋಬರ್ 11ರಂದು ಬ್ರಾಹ್ಮಣ ಜಾತಿಪದ್ದತಿಯಂತೆ ಮದುವೆಯಾಗಿ ನಂತರ ಅನ್ಯಕೋಮಿನ ಹುಡುಗನ ಜೊತೆ ಪ್ರೇಮಿಸಿ, ಪಲಾಯನಗೈದ ಪತ್ನಿಯ ವಿರುದ್ಧ ದಾಖಲಾದ ಪ್ರಕರಣದಲ್ಲಿ ಪತಿಯು ವಿವಾಹ ವಿಚ್ಚೇದನೆಯ ಪರಿಹಾರ ಪಡೆದಿರುತ್ತಾನೆ.

Kundapura_Court_divorce

ಪತಿಯು ವರದಕ್ಷಿಣೆ ಪಡೆಯದೇ ಮದುವೆಯಾಗಿ ಪತ್ನಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದನು. ಐಷಾರಾಮಿ ಹಾಗೂ ಸ್ವಚ್ಚಂದ ಬದುಕು ಬಯಸಿದ ಪತ್ನಿ ಪರಾರಿಯಾಗಿದ್ದಲ್ಲದೇ ತನ್ನ ನ್ಯಾಯವಾದಿಗಳ ಮೂಲಕ ನೋಟಿಸೊಂದನ್ನು ಕಳುಹಿಸಿ ಅದನ್ನೇ ವಿವಾಹ ವಿಚ್ಚೇದನೆ ಎಂದು ತಿಳಿಸಿದ್ದಳು. ಆದರೆ ಕಾನೂನಿಗನುಸಾರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿಯೇ ವಿವಾಹ ವಿಚ್ಚೇದನ ಪಡೆಯಬೇಕು. ಅದರಂತೆ ಪತಿಯು ನ್ಯಾಯಾಲಯದ ಮೊರೆಹೋಗಿ ಪತ್ನಿಯ ದುರ್ನಡತೆ ರುಜುವಾತು ಮಾಡಿ ಡೈವೋರ್ಸ್ ಪಡೆದಿದ್ದಾನೆ.

ಪತಿಯ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ವಾದಿಸಿದ್ದರು.

Comments are closed.