ಕರಾವಳಿ

ದೇವಾಲಯ ಮತ್ತು ವಿದ್ಯಾಲಯಗಳು ನಾಡಿನ ಎರಡು ಮುಖ್ಯ ಅಂಗಗಳು – ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿ

Pinterest LinkedIn Tumblr

mbai_temple_pooja_1

ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೊದ್ಧಾರ ನಿಮಿತ್ತ ಧಾರ್ಮಿಕ ಸಭೆ
ವರದಿ : ಈಶ್ವರ ಎಂ. ಐಲ್/ಚಿತ್ರ : ದಿನೇಶ್ ಕುಲಾಲ್
ಮುಂಬಯಿ : ಉಡುಪಿ ಜಿಲ್ಲೆಯ ಕಾಪು ಇನ್ನಂಜೆ ಯಲ್ಲಿ ಪ್ರಸಿದ್ದವಾದ ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಜೀರ್ಣೊದ್ಧಾರದ ಮುಂಬಯಿ ಸಮಿತಿಯು ಜುಲೈ 3 ರಂದು ಅಪರಾಹ್ನ ಸಯಾನ್ ನಿತ್ಯಾನಂದ ಸಭಾಗೃಹದಲ್ಲಿ ಹಮ್ಮಿಕೊಂಡ ಧಾರ್ಮಿಕ ಸಭೆಗೆ ಉಡುಪಿಯ ಅಷ್ಠ ಮಠಗಳಲ್ಲಿ ಒಂದಾಗಿರುವ ಶ್ರೀ ಸೋದೆ ಮಠದ ಮಠಾಧೀಶ ಶ್ರೀ ವಿಶ್ವವಲ್ಲಭತೀರ್ಥ ಸ್ವಾಮೀಜಿಯವರು ಪಾಲ್ಗೊಂಡು ಆಶೀರ್ವದಿಸಿದರು.

ಬಳಿಕ ಆಶೀರ್ವಚನ ನೀಡುತ್ತ ಸ್ವಾಮೀಜಿಯವರು ಇನ್ನಂಜೆಯಲ್ಲಿ ದೇವಾಲಯ ಮತ್ತು ವಿದ್ಯಾಲಯ ಒಂದೇ ಮಠಕ್ಕೆ ಸೇರಿದ್ದು. ದೇವಾಲಯವು ಹೃದಯವಾದರೆ ಮೆದುಳು ವಿದ್ಯಾಲಯ. ಈ ಎರಡೂ ಸರಿಯಾಗಿದ್ದಲ್ಲಿ ಎಲ್ಲವೂ ಸರಿಯಾಗುವುದು. ಅದುದರಿಂದ ದೇವಾಲಯ ಮತ್ತು ವಿದ್ಯಾಲಯಗಳು ನಾಡಿನ ಎರಡು ಮುಖ್ಯ ಅಂಗಗಳಂತೆ. ನಮ್ಮ ನಾಡಿನ ಈ ಕ್ಷೇತ್ರದ ಜೀರ್ಣೊದ್ಧಾರದ ಈ ಕಾರ್ಯದಲ್ಲಿ ಎಲ್ಲರೂ ಕೈ ಜೋಡಿಸಬೇಕೆಂದರು.

mbai_temple_pooja_2 mbai_temple_pooja_3

ದೇವಸ್ಥಾನದ ಜೀರ್ಣೊದ್ಧಾರದ ಮುಂಬಯಿ ಸಮಿತಿಯ ಅಧ್ಯಕ್ಷ ಪ್ರಭಾಕರ ಎಲ್. ಶೆಟ್ಟಿ ಯವರು ಸ್ವಾಮೀಜಿಯವರನ್ನು ಭಕ್ತಿ ಪೂರ್ವಕವಾಗಿ ಸ್ವಾಗತಿಸುತ್ತಾ ಊರಿನ ಪ್ರಗತಿಗೆ ದೇವಾಲಯ ಹಾಗೂ ವಿದ್ಯಾಲಯಗಳು ಪೂರಕ ಎಂದರು. ಗೌರವ ಅಧ್ಯಕ್ಷ ಸುಂದರ ಶೆಟ್ಟಿ ಸಾಯನ್ ಅವರು ಮಾತನಾಡುತ್ತಾ ನಮ್ಮೆಲ್ಲರ ಒಗ್ಗಟ್ಟಿನ ಸೇವೆ ಶ್ರೀ ಕ್ಷೇತ್ರದ ಜೀರ್ಣೊದ್ಧಾರಕ್ಕೆ ಅಗತ್ಯ ಎಂದರು.

ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷ ಪದ್ಮನಾಭ ಪಯ್ಯಡೆಯವರು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾ ನಾಡಿನ ಯಾವುದೇ ಕಾರ್ಯಕ್ಕೆ ಮುಂಬಯಿಗರ ದೇಣಿಗೆ ಇದ್ದೇ ಇದೆ. ನಮ್ಮ ಗಳಿಕೆಯ ಒಂದಂಶವನ್ನು ದೇವರ ಕಾರ್ಯಕ್ಕೆ ಉಪಯೋಗಿಸೋಣ ಎಂದರು. ಗುರುದೇವಾ ಸೇವಾ ಬಳಗ ಮಹಾರಾಷ್ಟ್ರ ದ ಅಧ್ಯಲ್ಷ ಪ್ರಕಾಶ್ ಎಲ್. ಶೆಟ್ಟಿಯವರು ಮಾತನಾಡುತ್ತಾ ಸ್ವಾಮಿಜಿಯವರ ಆಶೀರ್ವಾದದಿಂದ ಶ್ರೀ ಕ್ಷೇತ್ರದ ಜೋರ್ಣೋದ್ಧಾರ ಶೀಘ್ರ ವಾಗಿ ಸಂಪನ್ನಗೊಳ್ಳುತ್ತದೆ ಎಂದರು.

ಮುಂಬಯಿ ಸಮಿತಿಯ ಕಾರ್ಯದರ್ಶಿ ಇನ್ನಂಜೆ ಚಂದ್ರಹಾಸ ಗುರುಸ್ವಾಮಿಯವರು ಮುಂಬಯಿ ಸಮಿತಿಯ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಡಾ. ಅನಿಲ್ ಶೆಟ್ಟಿ, ಅಣ್ಣಾವರ ಶಂಕರ್ ಶೆಟ್ಟಿ, ವಿ.ಜಿ. ಶೆಟ್ಟಿ, ಶ್ರೀಶ ಭಟ್, ನಂದನ್ ಭಟ್, ಅರುಣ್ ಪ್ರಕಾಶ್, ವೇಣೋಧರ ಶೆಟ್ಟಿ, ಹಯವದನ ಭಟ್, ರವಿ ವರ್ಮ ಮೊದಲಾದವರು ಉಪಸ್ಥಿತರಿದ್ದರು. ನಿತ್ಯಾನಂದ ಕ್ಯಾಟರರ್ಸ್ ನ ಐಕಳ ವಿಶ್ವನಾಥ ಶೆಟ್ಟಿ ಹಾಗೂ ಇತರ ಭಕ್ತರನ್ನು ಸ್ವಾಮೀಜಿಯವರು ಗೌರವಿಸಿದರು.

ಸಾಹಿತಿ ಬಿ.ಎಸ್. ಕುರ್ಕಾಲ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಂಬಯಿ ಸಮಿತಿಯ ಕೋಶಾಧಿಕಾರಿ ಶಶಿಧರ ಶೆಟ್ಟಿ, ದಯಾನಂದ ಶೆಟ್ಟಿ, ಗೋಪಾಲಕೃಷ್ಣ ಭಟ್, ಯೋಗೀಶ್ ಶೆಟ್ಟಿ, ಶ್ರೀಪತಿ ರಾವ್, ರಾಜೇಶ್ ಭಟ್, ಶೇಖರ ಆಚಾರ್ಯ, ದಿವಾಕರ ಶೆಟ್ಟಿ, ಎಸ್. ಕೆ. ಶಿವಾನಂದ, ಕಿಶೋರ್ ಸಾಲ್ಯಾನ್, ಕುಟ್ಟಿ ಪೂಜಾರಿ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸುಕನ್ಯಾ ಭಟ್ ಬಳಗದವರಿಂದ ನೃತ್ಯ ಕಾರ್ಯಕ್ರಮ, ಹಾರೂ ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್, ಅವರಿಂದ ಭಕ್ತ ಸುಧಾಮ,ಹರಿಕಥೆ ಸಾಧರ ಪಡಿಸಲಾಯಿತು.

Comments are closed.