ಕರಾವಳಿ

ಗದ್ದೆ ಉಳುತ್ತಾರೆ, ನಾಟಿ ಮಾಡುತ್ತಾರೆ; ಕೃಷಿಯನ್ನು ನೆಚ್ಚಿಕೊಂಡ ಉದ್ಯಾವರದ ವಿದ್ಯಾವಂತ ಮಹಿಳೆಯರು

Pinterest LinkedIn Tumblr

ವಿಶೇಷ ವರದಿ

ಉಡುಪಿ: ಇವರೆಲ್ಲರೂ ಉತ್ತಮ ಶಿಕ್ಷಣ ಪಡೆದ ವಿದ್ಯಾವಂತರು. ಒಬ್ಬರು ಶಿಕ್ಷಕಿಯಾದ್ರೆ, ಒಬ್ಬರು ಲಾಯರ್, ಇನ್ನೊಬ್ಬರು ಇಂಜಿನಿಯರಿಂಗ್ ಪದವೀಧರೆ . ಆದ್ರೆ ಇವರು ಗದ್ದೆಗೆ ಇಳಿದ್ರೆ ರೈತನನ್ನೇ ನಾಚಿಸುತ್ತಾರೆ. ನಾವು ಪುರುಷರಿಗಿಂತ ಕಮ್ಮಿ ಇಲ್ಲ ಅಂತ ತಮ್ಮ ಕೆಲಸದ ಮೂಲಕ ತೋರಿಸುತ್ತಾರೆ. ಕೃಷಿಯಿಂದ ದೂರ ಹೋಗುವ ಯುವಕರಿಗಂತೂ ಇವರ ಕೆಲಸ ಮಾದರಿಯೇ ಸರಿ. ಹಾಗಾದ್ರೆ ಆ ಎಜುಕೇಟೆಡ್ ಮಹಿಳೆಯರು ಮಾಡುವ ಕೆಲಸ ಏನು?.. ಯಾಕಾಗಿ ಮಾಡ್ತಾರೆ? ಎಲ್ಲಾ ಡೀಟೇಲ್ಸ್ ಗೊತ್ತಾಗಬೇಕಾದರೇ ಈ ವರದಿ ಓದಿ..

Udupi_Udyavara_agriculture (5) Udupi_Udyavara_agriculture (2) Udupi_Udyavara_agriculture (3) Udupi_Udyavara_agriculture (8) Udupi_Udyavara_agriculture (7) Udupi_Udyavara_agriculture (1) Udupi_Udyavara_agriculture (6) Udupi_Udyavara_agriculture (4)

ಕೃಷಿ ಕಾರ್ಯಗಳಿಂದ ಯುವಜನಾಂಗ ಹಿಂದೆ ಸರಿಯುತ್ತಿರುವ ಈ ಜಮಾನದಲ್ಲಿ ಮೂವರು ಮಹಿಳೆಯರು ಕೃಷಿಯನ್ನು ನೆಚ್ಚಿಕೊಂಡಿದ್ದಾರೆ. ಕೃಷಿ ಕೆಲಸ ಕಾರ್ಯಗಳು ಪುರುಷರದ್ದು ಎಂಬ ಕಾಲ ಹೋಯ್ತು. ಇನ್ನು ಮಹಿಳೆಯರಿಗೂ ಕೃಷಿ ಮಾಡಲು ಸಾದ್ಯ ಎಂಬುದನ್ನ ತೋರಿಸಿಕೊಟ್ಟಿದೆ ಈ ಪ್ಯಾಮಿಲಿ. ಹೌದು.. ಉಡುಪಿಯ ಉದ್ಯಾವರದಲ್ಲಿರುವ ಈ ಕುಟುಂಬ ಪಟ್ಟಣಕ್ಕೆ ಉದ್ಯೋಗಕ್ಕಾಗಿ ಓಡಿ ಹೋಗೋ ಪುರುಷರಿಗೆ ಮಾದರಿಯೇ ಸರಿ. ನೀವು ನೋಡುತ್ತಿರುವ ಈ ಮೂವರು ಮಹಿಳೆಯರು ಹೈಲೀ ಎಜುಕೇಟೆಡ್ . ಎಲ್ಲರೂ ಪದವಿ ಮುಗಿಸಿದ್ದಾರೆ. ಒಬ್ಬರು ಲಾಯರ್ ಆಗಿ ಪ್ರಾಕ್ಟೀಸ್ ಮಾಡ್ತಾ ಇದ್ರೆ ಒಬ್ಬರು ಇಂಜಿನಿಯರಿಂಗ್ ಪದವಿ ಪಡೆಯುವ ಹೊಸ್ತಿಲಲ್ಲಿದ್ದಾರೆ. ಆದ್ರೂ ಕೂಡಾ ಈ ಕೃಷಿ ಚಟುವಟಿಕೆಯಲ್ಲಿ ಉತ್ಸಾಹದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತೀ ವರ್ಷ ಬರೋಬ್ಬರಿ 17 ಎಕ್ರೆ ಜಾಗದಲ್ಲಿ ಕೃಷಿ ಮಾಡಿ , ಕೃಷಿ ಮಾಡದೇ ಗದ್ದೆಯನ್ನು ಹಡಿಲು ಬಿಡುತ್ತಿರುವ ರೈತರಿಗೆ ಮಾದರಿಯಾಗಿದ್ದಾರೆ. ಉದ್ಯಾವರದ ವಾಸವಾಗಿರುವ ಹೆಗ್ಗಿನ್ಸ್ ರೋಡ್ರಿಗಸ್ ಹಿಂದಿನಿಂದಲ್ಲೂ ತನ್ನ ಏಳು ಎಕ್ರೆ ಭೂಮಿಯಲ್ಲಿ ಕೃಷಿ ಮಾಡ್ತಾ ಬಂದಿದ್ದಾರೆ. ಆದ್ರೆ ಯಾಂತ್ರಿಕೃತ ಕೃಷಿ ಯಾವಾಗ ಪ್ರಾರಂಭವಾಯಿತೋ ಆಗಲೇ ಹೆಗ್ಗಿನ್ಸ್ ಅವರ ಇಬ್ಬರು ಪುತ್ರಿಯರಾದ ಪ್ರಿಯಾಂಕಾ ರಾಡ್ರಿಗಸ್ , ಸ್ಮಿತಾ ರಾಡ್ರಿಗಸ್ ಹಾಗೂ ಇಬ್ಬರು ದತ್ತು ಮಕ್ಕಳಾದ ದೀಪಾ ಹಾಗೂ ವಿನೋದ್ ಕೃಷಿಯಲ್ಲಿ ಆಸಕ್ತಿಯನ್ನು ವಹಿಸಿ ಕಳೆದ 7 ವರ್ಷಗಳಿಂದ ಕೃಷಿ ಚಟುವಟಿಕೆಯನ್ನು ನಡೆಸಿ ಇಡೀ ಜವಾಬ್ಧಾರಿಯನ್ನೇ ವಹಿಸಿಕೊಂಡಿದ್ದಾರೆ.

ಸ್ಮಿತಾ ರೋಡ್ರಿಗಸ್ ಎಂಬಿ‌ಎ ಪಧವೀಧರೆ ಒಂದು ವರ್ಷದ ಹಿಂದೆ ಮದುವೆಯಾಗಿದ್ದು ನಾಸಿಕ್ ನಲ್ಲಿ ನೆಲೆಸಿದ್ದಾರೆ. ಆದರೂ ಸಹ ಕೃಷಿಯ ಸಂದರ್ಬದಲ್ಲಿ ಊರಿಗೆ ಬಂದು ಕೃಷಿ ಕಾರ್ಯದಲ್ಲಿ ತೊಡಗುತ್ತಿದ್ದು ಇವರಿಗೆ ಗಂಡನೂ ಬೆಂಬಲ ನೀಡುತ್ತಿದ್ದಾರೆ. ಇನ್ನು ಪ್ರಿಯಾಂಕಾ ರಾಡ್ರಿಗಸ್ ಉಡುಪಿಯ ನ್ಯಾಯಾಲಯದಲ್ಲಿ ಎಡ್ವಕೇಟ್ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ದೀಪಾ ರಾಡ್ರಿಗಸ್ ಗೆ ಕೂಡಾ ಕಳೆದ ವರ್ಷ ಮದುವೆಯಾಗಿದ್ದು ಅವರು ಕೂಡಾ ಕೃಷಿ ಚಟುವಟಿಕೆಯ ಸಂದರ್ಬದಲ್ಲಿ ಬಂದು ಸಹೋದರಿಯರ ಜೊತೆಗೂಡಿ ಕೃಷಿನ್ನು ಮಾಡುತ್ತಿದ್ದಾರೆ. ಈ ಬಾರಿ ಹೆಗ್ಗಿನ್ಸ್‌ರವರ ಸಹೋದರನ ಮಗಳು ನಿಕೋಲ್ ಪಿಂಟೋ ಹಾಗೂ ದತ್ತು ಪುತ್ರ ವಿನೋದ್ ಕೂಡಾ ಕೃಷಿಗೆ ಸಾಥ್ ನೀಡುತ್ತಿದ್ದು ಒಟ್ಟಿಗೆ ಸೇರಿ ಸುಮಾರು 17 ಎಕ್ರೆ ಭೂಮಿಯಲ್ಲಿ ಕೃಷಿ ಚಟುವಟಿಕೆಯನ್ನು ಉತ್ಸಾಹದಿಂದ ಮಾಡುತ್ತಿದ್ದಾರೆ. ಬೆಳಗ್ಗೆ ಬೇಗ ಎದ್ದು ಉಳುಮೆ ಮಾಡುವ ಹಾಗೂ ನಾಟಿ ಕಾರ್ಯ ಮಾಡುವ ಇವರು ಕಳೆದ 7 ವರ್ಷಗಳಿಂದ ಎಲ್ಲಾ ಕೆಲಸವನ್ನು ಮಾಡಿ ಲಾಭವನ್ನೂ ಗಳಿಸುತ್ತಿದ್ದಾರೆ. ಎಲ್ಲಾ ಯಾಂತ್ರಿಕೃತವಾದ ಕೆಲಸವಾದ ಕಾರಣ ಕಾರ್ಮಿಕರ ಸಮಸ್ಯೆಗೆ ಮುಕ್ತಿ ಸಿಕ್ಕಿದೆ. ಈ ಮೂಲಕ ಕಾರ್ಮಿಕರಿಗೆ ನೀಡುವ ಖರ್ಚು ಉಳಿಕೆಯಾಗಿ ಕೃಷಿಯಲ್ಲಿ ಆದಾಯಗಳಿಸುವಂತಾಗಿದೆ ಎನ್ನುತ್ತಾರೆ ಕೃಷಿಕ ಹೆಗ್ಗಿನ್ಸ್ ರೋಡ್ರಿಗಸ್.

ಕೃಷಿಯಿಂದ ದೂರ ಹೋಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಅದರಲ್ಲೂ ಮಹಿಳೆಯರು ಗದ್ದೆಯಲ್ಲಿ ಕೃಷಿ ಕಾರ್ಯ ಮಾಡುವುದು ನಿಜಕ್ಕೂ ಹೆಮ್ಮೆಯ ಸಂಗತಿ.. ಇವರ ಕೃಷಿ ಕಾರ್ಯ ಊರಿನ ಹಲವರಿಗೆ ಸ್ಪೂರ್ತಿಯನ್ನ ನೀಡಿದೆ. ಅವರೂ ಇವರ ಕೆಲಸ ಕಾರ್ಯದಿಂದ ಪ್ರೇರಣೆಗೊಂಡು ಗದ್ದೆಯಲ್ಲಿ ಕೃಷಿ ಮಾಡಲು ಮುಂದೆ ಬರುತ್ತಿದ್ದಾರೆ. ಇವರ ಈ ಕಾರ್ಯ ಇತರರಿಗೂ ಪ್ರೇರಣೆಯಾಗಲಿ ಎನ್ನುವುದು ಈ ವರದಿಯ ಉದ್ದೇಶ.

Comments are closed.