ಉಡುಪಿ: ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನತೆ ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಗ್ರಾಮೀಣ ಕ್ರೀಡಾಕೂಟದ ಮಹತ್ವ ಹೆಚ್ಚುತ್ತದೆ ಎಂದು ಮೀನುಗಾರಿಕ ಮತ್ತು ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆ ಅಂಗಡಿ ಮತ್ತು ಕರ್ನಾಟಕ ಸರ್ಕಾರ ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಮತ್ತು ಜಿಲ್ಲಾ ಪಂಚಾಯಿತ್ ಇದರ ಸಂಯುಕ್ತ ಆಶ್ರಯಲ್ಲಿ ಆಯೋಜಿಸಿಲಾದ ‘ಕೆಸರ್ಡ್ ಒಂಜಿ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿ ಕೆಸರು ಗೆದ್ದೆಯಲ್ಲಿ ಮನುಷ್ಯರಿಗೆ ಬರುವ ನಾನಾ ಬಗ್ಗೆಯ ಚರ್ಮ ರೋಗಗಳನ್ನು ಗುಣ ಪಡಿಸುವ ಔಷಧವನ್ನು ಹೊಂದಿದ್ದೆ.ಮುಂದಿನ ದಿನಗಳಲ್ಲಿ ಸರ್ಕಾರದಿಂದ ಗ್ರಾಮೀಣ ಕ್ರೀಡಾಕೂಟಕ್ಕೆ ಬರುವ ಅನುದಾನಕ್ಕೆ ಶಿಫಾರಸು ಮಾಡುದಾಗಿ ಭರವಸೆ ನೀಡಿದ್ದಾರೆ.
ಕ್ರೀಡಾಕೂಟದಲ್ಲಿ ಕೆಸರು ಗೆದ್ದೆ ಓಟ ,ಹಗ್ಗ-ಜಗ್ಗಾಟ ,ಹಿಮ್ಮಖ ಓಟ,ಭಾರ ಎತ್ತಿ ಓಟ ,ಮಾನವ ಪಿರಮಿಡ್ ರಚಿಸಿ ಮಡಿಕೆ ಒಡಿಯುವ ಸ್ಪರ್ಧೆ ಅನೇಕ ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಂಡಿದ್ದು.ವಿಜೇತರಿಗೆ ಗಣೇಶೋತ್ಸವ ಸಂಧರ್ಭದಲ್ಲಿ ನಗದು ಬಹುಮಾನ ನೀಡಿಲಾಗುತ್ತದೆ. ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗುಡ್ಡೆ ಅಂಗಡಿ ಕಳೆದ ಹನ್ನೂಂದು ವರ್ಷಗಳಿಂದ ಕೆಸರ್ಡ್ ಒಂಜಿ ದಿನ ಗ್ರಾಮೀಣ ಕೆಸರು ಗೆದ್ದೆ ಕ್ರೀಡಾಕೂಟವನ್ನು ಆಯೋಜಿಸುತ್ತಾ ಬಂದಿದ್ದೆ.ಪ್ರತಿವರ್ಷದಂತೆ ಈ ಬಾರಿ ನೂರಾರು ಮಂದಿ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ಯುವ ಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದೇರ್ಶಕ ಡಾ.ರೋಶನ್ ಕುಮಾರ್ ಶೆಟ್ಟಿ, ತೆಂಕು ಮನೆ ಸುರೇಶ್ ಕೆ.ಶೆಟ್ಟಿ, ಗೋವಿಂದ ಶೆಟ್ಟಿ, ಶ್ರೀಧರ್ ಶೆಟ್ಟಿ, ಹರೀಶ್ ಕಿಣಿ, ಶ್ರೀಕಾಂತ್ ನಾಯ್ಕ , ರಾಘವ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
Comments are closed.