ರಾಷ್ಟ್ರೀಯ

ಮಗುವಿನ ಮೇಲೆ ಪೈಶ್ಚಾಚಿಕವಾಗಿ ಅತ್ಯಾಚಾರವೆಸಗಿ ಬರ್ಬರ ಹತ್ಯೆ ಮಾಡಿದ ಕಾಮುಕ

Pinterest LinkedIn Tumblr

rape

ಹೈದರಾಬಾದ್: ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ವ್ಯಕ್ತಿಯೊಬ್ಬ 10 ವರ್ಷದ ಮಗುವನ್ನು ಅಪಹರಿಸಿ, ಅತ್ಯಾಚಾರವೆಸಗಿ, ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಂದಿರುವ ಘಟನೆ ಹೈದರಾಬಾದ್‌ನ ಬೊಲ್ಲರಂ ಪ್ರದೇಶದಲ್ಲಿ ನಡೆದಿದೆ.

ಆರೋಪಿ ಅನಿಲ್‌ಕುಮಾರ್ ತಾಯಿಯೊಂದಿಗೆ ಹೊರಗೆ ಬಂದಿದ್ದ 3ನೇ ತರಗತಿಯ ಬಾಲಕಿಯನ್ನು ಚಾಕೊಲೇಟ್‌’ನ ಆಮಿಷ ಒಡ್ಡಿ ಶನಿವಾರ ಸಂಜೆ ಅಪಹರಿಸಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಮಾಡಿ, ತಲೆಗೆ ಕಲ್ಲಿನಿಂದ ಹೊಡೆದು ಅಮಾನುಷವಾಗಿ ಕೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಕಾಣೆಯಾದ ಬಗ್ಗೆ ದೂರು ದಾಖಲಾಗಿತ್ತು. ನಿರ್ಜನ ಪ್ರದೇಶದಲ್ಲಿ ಮೃತದೇಹ ಪತ್ತೆಯಾಗಿದೆ. ಆರೋಪಿಯ ಸೆರೆಹಿಡಿಯಲು ತಂಡ ರಚಿಸಲಾಗಿದೆ ಎಂದು ಹೇಳಿದ್ದಾರೆ.

Comments are closed.