ಕರಾವಳಿ

ಮಂಗಳೂರು ವಿಮಾನ ನಿಲ್ದಾಣಕ್ಕೆ ಸಾರ್ವಜನಿಕರ ಪ್ರವೇಶ ನಿಶೇಧ

Pinterest LinkedIn Tumblr

Airport_Mangalore_1

ಮಂಗಳೂರು : ಇತ್ತೀಚಿನ ದಿನಗಳಲ್ಲಿ ವಿಮಾನ ನಿಲ್ದಾಣಗಳಲ್ಲಿ ಬಾಂಬ್ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗರುತ ಕ್ರಮವಾಗಿ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ಬಿಗಿ ಮಾಡಲಾಗಿದೆ.

ಮುಂಜಾಗರುತ ಕ್ರಮವಾಗಿ ಮಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡ್ಡಕ್ಕೆ ಸಾರ್ವಜನಿಕರ ಪ್ರವೇಶವನ್ನು ಮುಂದಿನ ಏಳು ದಿನಗಳ ಕಾಲ ನಿಶೇಧಿಸಲಾಗಿದ್ದು, ಇದು ಜೂನ್ ೩30ರಿಂದ ಜಾರಿಗೆ ಬಂದಿದೆ.

ಈ ಏಳು ದಿನಗಳ ಕಾಲ ಸಂದರ್ಶಕರಿಗೆ ಟಿಕೆಟ್‌ಗಳನ್ನು ನೀಡಲಾಗುವುದಿಲ್ಲ. ಸಂದರ್ಶಕರು ಮುಂದಿನ ಸೂಚನೆ ಬರುವವರೆಗೆ ಸಹಕರಿಸ ಬೇಕು ಎಂದು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ಜೆ ಟಿ ರಾಧಾಕೃಷ್ಣ ಹೇಳಿದ್ದಾರೆ.

ಇತ್ತೀಚಿಗೆ ಟರ್ಕಿ ವಿಮಾನ ನಿಲ್ದಾಣದಲ್ಲಿ ಆತ್ಮಹುತಿ ಬಾಂಬ್ ದಾಳಿಯಲ್ಲಿ 44 ಮಂದಿ ಮೃತಪಟ್ಟು, ನೂರಾರು ಮಂದಿ ಗಾಯಗೊಂಡ ಘಟನೆ ನಡೆದ್ದಿದ್ದು, ಜಗತ್ತೆ ತಲ್ಲಣಗೊಳ್ಳುವಂತೆ ಮಾಡಿದೆ.

Comments are closed.