ಅಂತರಾಷ್ಟ್ರೀಯ

ನೀವು ಆಂಡ್ರಾಯ್ಡ್ ಫೋನ್ ನಲ್ಲಿ ಪೋರ್ನ್‌(ಅಶ್ಲೀಲ) ವೀಡಿಯೊ ನೋಡುವವರಾಗಿದ್ದರೆ ಇದನ್ನು ಓದಿ…ಇನ್ನು ಮುಂದೆ ಜಾಗೃತರಾಗಿ

Pinterest LinkedIn Tumblr

Android

ಕಂಪ್ಯೂಟರ್‌ನಲ್ಲಿ ಅಲ್ಲದಿದ್ದರು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಅಶ್ಲೀಲ ಚಿತ್ರಗಳು, ವೀಡಿಯೋಗಳನ್ನು ನೋಡುವುದು ಭಾರತದಲ್ಲಿ ಹೆಚ್ಚಾಗೆ ಇದೆ. ಅಲ್ಲದೇ ಗೂಗಲ್‌ ಪ್ಲೇ ಸ್ಟೋರ್‌ನಲ್ಲೂ ಸಹ ಹಲವಾರು ಅಶ್ಲೀಲ ಆಂಡ್ರಾಯ್ಡ್‌ ಆಪ್‌ಗಳು ಸಹ ಇವೆ. ಈ ವಿಷಯಕ್ಕೆ ಯಾರು ಸಹ ನಿರ್ಬಂಧ ಹೇರಲು ಆಗುವುದಿಲ್ಲ. ಕಾರಣ ಅಶ್ಲೀಲ ಚಿತ್ರ ಮತ್ತು ವೀಡಿಯೋಗಳನ್ನು ನೋಡುವುದು ಸಂಪೂರ್ಣ ವಯಕ್ತಿಕ ವಿಷಯ.

ಪೋರ್ನ್‌(ಅಶ್ಲೀಲ) ವೀಡಿಯೊಗಳನ್ನು ನೋಡುವುದಕ್ಕೆ ಯಾರು ಸಹ ಅಡ್ಡಿ ಮಾಡದಿದ್ದರೂ, ಇಂದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ಚಿತ್ರಗಳು ಮತ್ತು ವೀಡಿಯೊಗಳನ್ನು ನೋಡುವವರು ಸ್ವತಃ ತಾವೆ ಪ್ರಮುಖ 4 ಕಾರಣದಿಂದ ಈ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ.

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ನಲ್ಲಿ ಇಂಟರ್ನೆಟ್‌ ಸಂಪರ್ಕದಿಂದ ಅಶ್ಲೀಲ ವೀಡಿಯೋಗಳನ್ನು ನೋಡುವುದು ಉಚಿತವಾಗಿರಬಹುದು. ಆದರೆ ಅದು ನಿಜವಾಗಿಯೂ ದುಬಾರಿ. ಕೆಲವೊಮ್ಮೆ ಪ್ರಖ್ಯಾತ ವೆಬ್‌ಸೈಟ್‌ಗಳಿಗೆ ಆಕಸ್ಮಿಕವಾಗಿ ಭೇಟಿ ನೀಡುವುದರಿಂದ ಸ್ವಯಂಚಾಲಿತವಾಗಿ, ಕಾನೂನು ಬಾಹಿರವಾಗಿ ನಿಮಗೆ ತಿಳಿಯದಂತೆ “value-added service (VAS)” ಸೇವೆಯನ್ನು ಬ್ಯಾಗ್ರೌಂಡ್‌ನಲ್ಲಿ ವೆಬ್‌ಸೈಟ್‌ಗಳು ಆಕ್ಟಿವೇಟ್‌ ಮಾಡಿಕೊಳ್ಳುತ್ತವೆ.

VAS ಚಂದಾದಾರರು ನೀವು ಆಗುವುದರಿಂದ ಜ್ಯೂಸ್‌ಅಪ್‌ ಪ್ಯಾಕ್‌ (Juiceup packs), ಹೊರೋಸ್ಕೋಪ್‌ (horoscope), ಡ್ರೀಮ್‌ ಗರ್ಲ್‌ ಪ್ಯಾಕ್‌ಗಳು (Dream girl packs) ಮತ್ತು ಇತರೆ ಸ್ವಯಂಚಾಲಿತವಾಗಿ ಆಕ್ಟಿವೇಟ್‌ ಆಗಿ ತಿಂಗಳಿಗೊಮ್ಮೆ ಅಥವಾ ದಿನನಿತ್ಯ ಚಾರ್ಜ್‌ ಸ್ಯಯಂಚಾಲಿತವಾಗಿ ಆಕ್ಟಿವೇಟ್‌ ಆಗುತ್ತದೆ. ಮೊದಮೊದಲು ಹಣ ಬ್ಯಾಲೆನ್ಸ್‌ನಲ್ಲಿ ಕಟ್‌ ಆಗುತ್ತಿರುವುದು ಬಳಕೆದಾರರ ಗಮನಕ್ಕೆ ಬರದಂತೆ ಇರಲು ತಿಂಗಳಿಗೆ 35 ರೂಪಾಯಿ ಅಥವಾ ದಿನಕ್ಕೆ 5 ರೂಪಾಯಿ ಇರುತ್ತದೆ.

ನಿಮಗೆ ಅರಿವಿಲ್ಲದಂತೆ ಮೊಬೈಲ್‌ ಬ್ಯಾಲೆನ್ಸ್‌ಕಡಿಮೆ ಆಗುತ್ತಿದ್ದಲ್ಲಿ ಮತ್ತು ನಿಮ್ಮ ಅನುಮತಿ ಇಲ್ಲದೇ ಮೊಬೈಲ್‌ ಬ್ಯಾಲೆನ್ಸ್‌ ಕಡಿತಗೊಳ್ಳುತ್ತಿದ್ದಲ್ಲಿ “STOP” ಎಂದು ಟೈಪ್‌ ಮಾಡಿ 155223 ನಂಬರ್‌ಗೆ ಸಂದೇಶ ಕಳುಹಿಸಿ. ಈ ನಂಬರ್‌ ಅನ್ನು “ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (Trai)” ಟೋಲ್ ಫ್ರೀ ಸಂಖ್ಯೆಯಾಗಿ ಮಂಜೂರು ಮಾಡಿದೆ. ಸಂದೇಶ ಕಳುಹಿಸಿ ಸೂಚನೆ ಪಾಲಿಸಿ ಅಶ್ಲೀಲ ವೀಡಿಯೋಗಳ ಚಂದಾದಾರರಾಗಿರುವುದನ್ನು ಡಿಆಕ್ಟಿವೇಟ್‌ ಮಾಡಿಕೊಳ್ಳಿ.

ನೀವು ಅಶ್ಲೀಲ ಚಿತ್ರ ನೋಡುವುದೇ ಆದಲ್ಲಿ ಉತ್ತಮ ತಂತ್ರವೆಂದರೆ ಮೊಬೈಲ್‌ನಲ್ಲಿ ಏರ್‌ಪ್ಲೇನ್‌ ಮೋಡ್‌ ಸ್ವಿಚ್‌ ಆಫ್‌ ಮಾಡಿ ವೈಫೈ ಮುಖಾಂತರ ಅಶ್ಲೀಲ ವೀಡಿಯೋ ಸೈಟ್‌ಗಳಿಗೆ ಭೇಟಿ ನೀಡಿ. ಮೊಬೈಲ್ ಇಂಟರ್ನೆಟ್‌ ಬಳಸುವುದನ್ನು ತಪ್ಪಿಸಿ. ಎಲ್ಲಾ ಖರ್ಚುಗಳಿಂದ ಪಾರಾಗಿ.

ಆಂಡ್ರಾಯ್ಡ್‌ ಮೊಬೈಲ್‌ನಲ್ಲಿ ಅಶ್ಲೀಲ ಟಿಕ್ಕರ್‌ಗಳು ಹೆಚ್ಚು ಕಿರಿಕಿರಿ ಉಂಟುಮಾಡುತ್ತವೆ. ಅಂದರೆ ಕೆಲವು ಪೋರ್ನ್‌ ಟಿಕ್ಕರ್‌ಗಳು ಅಸಲಿ ಆಂಡ್ರಾಯ್ಡ್‌ ಅಪ್ಲಿಕೇಶನ್‌ಗಳ ಟಿಕ್ಕರ್‌ಗಳ ಮೂಲಕ ಪೇಕ್‌ ಆಗಿರುತ್ತವೆ.

ನೀವು ಆಂಡ್ರಾಯ್ಡ್‌ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋಗಳನ್ನು ನೋಡಲು ಬಯಸುವುದಾದರೆ ಪ್ಲೇ ಸ್ಟೋರ್‌ನಲ್ಲಿ ಪ್ರಖ್ಯಾತ ಆಪ್‌ಗಳನ್ನು ಡೌನ್‌ಲೋಡ್ ಮಾಡಲು ಹೋಗಿ. ಅಲ್ಲಿ ಕೆಲವು ಅಶ್ಲೀಲ ವೀಡಿಯೋ ಆಪ್‌ಗಳು “Temple Run, Hay Day” ಆಪ್‌ಗಳ ಟಿಕ್ಕರ್‌ಗಳ ವೇಷವನ್ನು ಧರಿಸಿರುತ್ತವೆ. ಅಧರ ಬಗ್ಗೆ ತಿಳಿಯದೆ ಟ್ಯಾಪ್‌ ಮಾಡಿದರೆ ಅವು ಪ್ರಾಥಮಿಕವಾಗಿ ಟ್ರೋಜನ್‌ ಅನ್ನು ಡೌನ್‌ಲೋಡ್‌ ಮಾಡುತ್ತವೆ.

ಪ್ರಖ್ಯಾತ ಆಪ್‌ಗಳು ಕೆಲವು ಭಾರಿ ಅಜ್ಞಾತವೇಷದಲ್ಲಿ “Do not allow websites to track” ಬ್ರೌಸರ್‌ ಟೈಟಲ್‌ನೊಂದಿಗೆ ಅಶ್ಲೀಲ ಅಂಶಗಳನ್ನು ಬ್ರೌಸ್‌ ಮಾಡಲು ಯಾವಾಗಲು ಸಲಹೆ ನೀಡುತ್ತವೆ. ಆದ್ದರಿಂದ ಆಂಡ್ರಾಯ್ಡ್ ಬಳಕೆದಾರರು ಸ್ಪಷ್ಟ ಸಂಗ್ರಹದೊಂದಿಗೆ ಆಪ್‌ ಪರಿಚಯ ಓದಿ ತಿಳಿಯದೆ ಡೌನ್‌ಲೋಡ್‌ ಮಾಡಬೇಡಿ.

3 ದೊಡ್ಡ ಅಪಾಯಕಾರಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುವುದರಿಂದ ನಿಮ್ಮ ಪ್ರಾಥಮಿಕ ಜಿಮೇಲ್‌ ಖಾತೆ ಮತ್ತು ಬ್ಯಾಂಕಿಂಗ್‌ ಅಪ್ಲಿಕೇಶನ್‌ಗೆ ಅಪಾಯಕಾರಿ. ಅಲ್ಲದೇ ನಿಮ್ಮ ಆ ಆಂಡ್ರಾಯ್ಡ್‌ ಮೊಬೈಲ್‌ ಮುಖಾಂತರ ಸೈಬರ್‌ ಅಪರಾಧವು ಗಮನಾರ್ಹವಾಗುತ್ತದೆ.

ಆನ್‌ಲೈನ್‌ನಲ್ಲಿ ಯಾವುದು ಸಹ ಉಚಿತವಲ್ಲ. ಎಲ್ಲವೂ ಸಹ ಹಣ ವೆಚ್ಚ ಮಾಡುವ ಚಟುವಟಿಕೆಗಳಾಗಿವೆ. ನೇರ ಹಣ ಅಥವಾ ಡೇಟಾ ಮುಖಾಂತರ ನೀವು ಹಣ ಖರ್ಚು ಮಾಡಿದಂತೆ ಆಗುತ್ತದೆ. ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಹೆಚ್ಚು ಪೋರ್ನ್‌ ವೀಡಿಯೋ ವೀಕ್ಷಿಸುವುದರಿಂದ ಮಾಲ್‌ವೇರ್‌ ಆಂಟಿವೈರಸ್‌ಗಳು ದಾಳಿ ಮಾಡುತ್ತವೆ.

Ransomwares ದಾಳಿಯಿಂದ ಸಂಪೂರ್ಣವಾಗಿ ನಿಮ್ಮ ಡಿವೈಸ್ ಅನ್ನು ಅವರು ಆಕ್ಸೆಸ್‌ ಮಾಡುವ ಅವಕಾಶ ಸಿಗುತ್ತದೆ. ಅಲ್ಲದೇ ಅನ್‌ಲಾಕ್‌ ಮಾಡಲು ನೀಮ್ಮನ್ನು ಬ್ಲಾಕ್‌ಮೇಲ್‌ ಮಾಡುವ ಸಾಧ್ಯತೆಗಳು ಹೆಚ್ಚು.

ಸೈಬರ್‌ ದಾಳಿಕೋರರು ನಿಮ್ಮ ಡಿವೈಸ್ ಅನ್ನು ಅನ್‌ಲಾಕ್‌ ಮಾಡಲು ಹಣ ತೆಗೆದುಕೊಂಡ ನಂತರವು ಕರುಣೆ ಇಲ್ಲದೇ ಡಿವೈಸ್ ಅನ್ನು ಅನ್‌ಲಾಕ್‌ ಮಾಡುವ ಸಾಧ್ಯತೆ ಇರುವುದಿಲ್ಲಾ. ಹಲವು ಅಶ್ಲೀಲ ವೀಡಿಯೋ ಸೈಟ್‌ಗಳು ಇಂತಹ ಚುಟುವಟಿಕೆಯಲ್ಲಿ ಈಗಾಗಲೇ ಹೆಚ್ಚು ನಿಪುಣವಾಗಿವೆ. ಮೇಲಿನ ಎಲ್ಲಾ ಅಪಾಯಗಳು ಇರುವುದರಿಂದ ಆಂಡ್ರಾಯ್ಡ್‌ ಬಳಕೆದಾರರು ತಮ್ಮ ಡಿವೈಸ್‌ಗಳಲ್ಲಿ ಅಶ್ಲೀಲ ವೀಡಿಯೋ, ಚಿತ್ರಗಳನ್ನು ನೋಡುವುದನ್ನು ತಪ್ಪಿಸುವುದು ಉತ್ತಮ.

Comments are closed.