*ಯೋಗೀಶ್ ಕುಂಭಾಸಿ
ಕುಂದಾಪುರ: ನಾನೆಂದೂ ಹುದ್ದೆಗಳ ಬಗ್ಗೆ ಆಸೆ ಪಟ್ಟವನಲ್ಲ. ಮುಂದೆಯೂ ಕೂಡಾ ಕ್ಷೇತ್ರದ ಅಭಿವೃದ್ಧಿ, ಪಕ್ಷದ ಬಲವರ್ಧನೆಗೆ ಆಸ್ಕರ್ ಫೆರ್ನಾಂಡೀಸ್ ಅವರ ಮಾರ್ಗದರ್ಶನದಲ್ಲಿ ದುಡಿಯುತ್ತೇನೆ ಎಂದು ಬೈಂದೂರು ಕ್ಷೇತ್ರದ ಶಾಸಕ ಗೋಪಾಲ ಪೂಜಾರಿ ತಿಳಿಸಿದ್ದಾರೆ.
ಜೂ.24 ರಂದು ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಕಟ್‌ಬೇಲ್ತೂರಿನಲ್ಲಿರುವ ಶಾಸಕ ಗೋಪಾಲ ಪೂಜಾರಿಯವರ ಮನೆಗೆ ಭೇಟಿ ನೀಡಿದ್ದ ಬಗ್ಗೆ ಸುದ್ಧಿಗಾರರ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.



ಸಚಿವ ಪ್ರಮೋದ್ ಮದ್ವರಾಜ್ ಅವರು ಸೌಹಾರ್ದಯುತವಾಗಿ ಭೇಟಿ ನೀಡಿದ್ದಾರೆ. ಅಭಿವೃದ್ಧಿ ವಿಚಾರಗಳಲ್ಲಿ ಸಹಕಾರ ಕೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ನಾನು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ್ದೇನೆ ಎಂದರು.ನಾವೆಲ್ಲಾ ಜಿಲ್ಲೆಯ ಹಿರಿಯ ಶಾಸಕರುಗಳು ಸಚಿವ ಪ್ರಮೋದ್ ಮದ್ವರಾಜ್ ಅವರಿಗೆ ಸಂಪೂರ್ಣ ಸಹಕಾರ ನೀಡುತ್ತೇವೆ. ನನಗೆ ಅಭಿವೃದ್ಧಿ ಕೆಲಸಗಳು ಆಗಬೇಕು ಮತ್ತು ಪಕ್ಷ ಬಲಿಷ್ಠವಾಗಬೇಕು. ನಾನು ಮೊದಲಿನಿಂದಲೂ ಪಕ್ಷನಿಷ್ಠಾನಾಗಿದ್ದವ ಮುಂದೆಯೂ ಕೂಡಾ ನಾನು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಲಿದ್ದೇವೆ. ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಅವರ ಮಾರ್ಗದರ್ಶನದಲ್ಲಿ ಹಿಂದಿನಂತೆ ನಾನು ದುಡಿಯುತ್ತೇನೆ ಎಂದರು.
ಬೇರೆ ಹುದ್ದೆಗಾಗಿ ಬೇಡಿಕೆ ಇವೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾವುದೇ ಹುದ್ದೆಯನ್ನು ಕೇಳುವುದಿಲ್ಲ. ಯಾವುದೇ ಜವಾಬ್ದಾರಿ ಕೊಟ್ಟರು ನಿರ್ವಹಿಸುವ ಸಾಮಾರ್ಥ್ಯ ನನಗಿದೆ ಎಂದರು.
ಭಾನುವಾರದ ಸಭೆ ರದ್ದು
ಜೂ.26ರಂದು ಹೆಮ್ಮಾಡಿಯಲ್ಲಿ ಸಚಿವ ಸ್ಥಾನ ನೀಡದ ಬಗ್ಗೆ ಗೋಪಾಲ ಪೂಜಾರಿ ಅವರ ಅಭಿಮಾನಿಗಳು ಕರೆಯಲಾದ ಸಭೆಯನ್ನು ರದ್ದು ಗೊಳಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಹೈಕಮಾಂಡ್ ಸೂಚನೆಯಂತೆ ನಮ್ಮೆಲ್ಲ ಅಭಿಮಾನಿಗಳು, ಕಾರ್ಯಕರ್ತರು ನಡೆಸಲು ಉದ್ದೇಶಿಸಿದ ಸಭೆಯನ್ನು ರದ್ದು ಗೊಳಿಸಿದ್ದಾರೆ. ಎಲ್ಲರೂ ನನ್ನೊಂದಿಗೆ ಪಕ್ಷನಿಷ್ಠಾರಾಗಿ ದುಡಿಯಲಿದ್ದಾರೆ ಎಂದರು.
Comments are closed.