ನವದೆಹಲಿ: ಲಕ್ಷ ಲಕ್ಷ ರೂಪಾಯಿಗಳ ವೇತನ ಹೊಂದಿದ ಉದ್ಯೋಗಿಗಳು ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿರುವುದನ್ನು ಕೇಳಿದ್ದೇವೆ. ಇಲ್ಲೊಬ್ಬ ಮಹಾನುಭಾವರು ವಾರ್ಷಿಕ 500 ಕೋಟಿ ರೂಪಾಯಿ ವೇತನ ಹೊಂದಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಅಚ್ಚರಿ ಮೂಡಿಸಿದ್ದಾರೆ.
ಅತಿ ಹೆಚ್ಚು ವೇತನ ಹೊಂದಿರುವ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದ ಸಾಫ್ಟ್‌ಬ್ಯಾಂಕ್ ಗ್ರೂಪ್ ಅಧ್ಯಕ್ಷರಾಗಿದ್ದ ನಿಕೇಶ್ ಅರೋರಾ, ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ.
48 ವಯಸ್ಸಿನ ನಿಕೇಶ್ ಅರೋರಾ, 2014 ರ ಸಾಲಿನಲ್ಲಿ ಸಾಫ್ಟ್‌ಬ್ಯಾಂಕ್ ಗ್ರೂಪ್‌ನಲ್ಲಿ ಉದ್ಯೋಗಕ್ಕೆ ಸೇರ್ಪಡೆಯಾಗಿದ್ದು, ಪ್ರತಿ ವರ್ಷ 73 ಮಿಲಿಯನ್ (ಸರಾಸರಿ 500 ಕೋಟಿ) ವೇತನ ಹೊಂದಿದ್ದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ 200 ಮಿಲಿಯನ್ ಡಾಲರ್ ವಿತ್ತೀಯ ಪರಿಹಾರವನ್ನು ಪಡೆದುಕೊಂಡಿದ್ದರು.
ಅರೋರಾ, ಕೋಟಿ ಕೋಟಿ ವೇತನ ಪಡೆಯುತ್ತಿದ್ದರೂ ಆರ್ಥಿಕ ಸಂಖಷ್ಟಕ್ಕೆ ಸಿಲುಕಿದ್ದಾಗ 500 ಮಿಲಿಯನ್ ಡಾಲರ್‌ಗಳ ಕಂಪೆನಿ ಶೇರುಗಳನ್ನು ಮುಖ್ಯ ಕಾರ್ಯನಿರ್ವಾಹಕ ಮಸಾಯೋಶಿ ಸನ್ ಅವರಿಗೆ ಮಾರಾಟ ಮಾಡಿದ್ದರು ಎಂದು ಕಂಪೆನಿಯ ಮೂಲಗಳು ತಿಳಿಸಿವೆ.
ಕಂಪೆನಿಯ ಅಧ್ಯಕ್ಷ ಮತ್ತು ಸಿಇಒ ಮಸಾಯೋಶಿ ಸನ್ ತಮ್ಮ ಹುದ್ದೆಯಲ್ಲಿ ಮುಂದಿನ 5-10 ವರ್ಷಗಳವರೆಗೆ ಮುಂದುವರಿಯಲು ಬಯಸಿದ ಹಿನ್ನೆಲೆಯಲ್ಲಿ ನಿಕೇಶ್ ಅರೋರಾ ಜೂನ್ 21 ರಂದು ಏಕಾಏಕಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
Comments are closed.