ಕರಾವಳಿ

ವಾಟ್ಸಪ್‍ನಲ್ಲಿ ಬರುವ ಮೆಸೇಜ್ ಗಳನ್ನು ಫಾರ್ವಡ್ ಮಾಡೋ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ….ವಿಕೃತ ಮನಸ್ಥಿತಿಯ ಜನ ಈಗಲೂ ಇದ್ದಾರೆ ಎಂಬುದಕ್ಕೆ ಇದೇ ಸಾಕ್ಷಿ !

Pinterest LinkedIn Tumblr

WhatsApp-1

ಬೆಂಗಳೂರು: “ಕುಂದಾಪುರದಲ್ಲಿ ಅಪಘಾತಗೊಂಡ ಮಕ್ಕಳಿಗೆ ತುರ್ತಾಗಿ ರಕ್ತ ಬೇಕಿದೆ. ಕೂಡಲೇ ಈ ಕೆಳಗಿನ ನಂಬರಿಗೆ ಕರೆ ಮಾಡಿ, ಮಕ್ಕಳ ಜೀವ ಉಳಿಸಿ” ಎನ್ನುವ ಮೆಸೇಜ್ ಸೋಮವಾರ ಬಹುತೇಕ ಮಂದಿಯ ವಾಟ್ಸಪ್‍ಗೆ ಬಂದಿತ್ತು.

ಈ ಮೆಸೇಜ್ ಬಂದಿದ್ದೆ ತಡ ಸಹಾಯ ಹಸ್ತ ಚಾಚುವ ಮಂದಿ ಪಾಪ ಮಕ್ಕಳು ಸಾವು ಬದುಕಿನಲ್ಲಿ ಹೋರಾಡುತ್ತಿದ್ದಾರೆ ಎಂದು ತಿಳಿದು ಸಿಕ್ಕ ಸಿಕ್ಕಿದ ಗ್ರೂಪ್‍ನಲ್ಲಿ ಶೇರ್ ಮಾಡಿ ದೊಡ್ಡ ಎಡವಟ್ಟು ಮಾಡಿದ್ದಾರೆ.

ನಿಜವಾಗಿ ಆ ರೀತಿ ಬಂದಿರುವ ನಂಬರ್ ಸಹಾಯ ಮಾಡುವ ಉದ್ದೇಶದಿಂದ ಬಂದಿರುವ ಮೆಸೇಜ್ ಅಲ್ಲವೇ ಅಲ್ಲ. ಯಾರೋ ಕಿಡಿಗೇಡಿಗಳು ಯಾವುದೇ ಹಳೇಯ ಮೆಸೇಜ್‍ನ್ನು ಎಡಿಟ್ ಮಾಡಿ ಕುಂದಾಪುರದ ಮಕ್ಕಳಿಗೆ ಸಹಾಯ ಮಾಡಿ ಎನ್ನುವ ಹೆಡ್‍ಲೈನ್ ಹಾಕಿ ವಾಟ್ಸಪ್‍ನಲ್ಲಿ ಹರಿಯ ಬಿಟ್ಟು ವಿಕೃತ ಸುಖವನ್ನು ಅನುಭವಿಸಿದ್ದಾರೆ. ಈ ನಂಬರ್‍ಗಳಿಗೆ ಕರೆ ಮಾಡಿದರೆ ಕೆಲ ನಂಬರ್ ಸ್ವಿಚ್ ಆಫ್ ಆಗಿದ್ದಾರೆ, ಉಳಿದ ನಂಬರ್‍ಗಳು ಟ್ರೂ ಕಾಲರ್‍ನಲ್ಲಿ ಬಹಳಷ್ಟು ಜನ ಅದನ್ನು ಸ್ಪಾಮ್ ಎಂದು ರಿಜಿಸ್ಟಾರ್ ಮಾಡಿದ್ದಾರೆ.

ಯಾವುದೋ ಸಮಯದಲ್ಲಿ ನಡೆದ ಘಟನೆಗಳ ಫೋಟೊಗಳನ್ನು ಇನ್ಯಾವುದೋ ಘಟನೆಯ ಚಿತ್ರವೆಂದು ಹಾಕಿ, ಅಪಘಾತದ ಸ್ಥಳದ, ಗಾಯಾಳುಗಳ ಭೀಕರ ಫೋಟೊ, ವೀಡಿಯೊಗಳನ್ನು ಹಾಕುವುದು, ತುರ್ತಾಗಿ ರಕ್ತ ಬೇಕು ಎನ್ನುವ ಸುಳ್ಳು ಸಂದೇಶಗಳನ್ನು ಕಳುಹಿಸುವ ವಿಕೃತ ಪ್ರವೃತ್ತಿ ಮುಂದುವರೆಯುತ್ತಲೇ ಇದೆ. ಇಂತಹ ಸಂದೇಶಗಳಿಂದಾಗಿ ಇದೀಗ ನಿಜವಾಗಿಯೂ ರಕ್ತದ ಅವಶ್ಯಕತೆ ಇರುವವರು ಕಳುಹಿಸಿದ ಸಂದೇಶಗಳನ್ನೂ ನಂಬಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ವಾಟ್ಸಾಪ್, ಫೇಸ್‌ಬುಕ್ ಅದೆಷ್ಟೋ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡಿ ಬಲಿತೆಗೆದುಕೊಂಡಿವೆ. ಆದರೂ ಇಂತಹ ವಿಚಿತ್ರ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ.

Comments are closed.