ಕರಾವಳಿ

ಮಲ್ಪೆಯಲ್ಲಿ 7 ಕಡೆ ಸಿಸಿ ಕ್ಯಾಮೆರಾ; ಮಲ್ಪೆ ಬೀಚ್ ನಲ್ಲಿ ನಡೆದಿದೆ 4 ಕೋಟಿ ಅಭಿವೃದ್ದಿ ಕಾರ್ಯ

Pinterest LinkedIn Tumblr

ಉಡುಪಿ: ರಾಜ್ಯದ ಸುಂದರ ಬೀಚ್ ಗಳಲ್ಲಿ ಒಂದಾದ ಮಲ್ಪೆ ಬೀಚ್ಇಗೆ ಲಕ್ಷಾಂತರ ಮಂದಿ ಮೋಜು ಮಸ್ತಿಗೆ ಬರ್ತಾರೆ. ಈ ಸುಂದರ ಪ್ರವಾಸಿ ತಾಣಕ್ಕೆ ಬರುವ ಪ್ರವಾಸಿಗರಿಗೆ ತಮ್ಮ ಬ್ಯಾಗ್ ಸೇರಿದಂತೆ ವಸ್ತುಗಳ ಬಗ್ಗೆ ಆತಂಕ ಇರೋದು ಸಹಜ. ಆದ್ರೆ ಇದೀಗ ಪ್ರವಾಸಿಗರ ಅನುಕೂಲ ಹಾಗೂ ಸುರಕ್ಷತೆಗೆ ಇಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.

Malpe Beach_CC Camera_Developement (2) Malpe Beach_CC Camera_Developement (3) Malpe Beach_CC Camera_Developement (1)

ಮಲ್ಪೆ ಬೀಚ್ ಇದು ಉಡುಪಿ ಜಿಲ್ಲೆಯ ಮಾತ್ರವಲ್ಲ ರಾಜ್ಯದ ಸುಂದರ ಬೀಚ್ ಗಳಲ್ಲಿ ಒಂದು ಈ ಬೀಚ್ ಗೆ ವರ್ಷದಿಂದ ವರ್ಷಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಪ್ರವಾಸಿಗರು ಇಲ್ಲಿ ಮೋಜು ಮಸ್ತಿಯನ್ನ ನಡೆಸುತ್ತಾರೆ. ಸುಂದರ ತಾಣಗಳನ್ನು ವೀಕ್ಷಿಸಿತ್ತಾರೆ. ಮಲ್ಪೆಯ ಬೀಚ್ ಗೆ ಬರುವ ಪ್ರವಾಸಿಗರಿಗೆ ತಮ್ಮ ಬ್ಯಾಗ್ ಸಹಿತ ಅನೇಕ ವಸ್ತುಗಳ ಬಗ್ಗೆ ಆತಂಕ ಇರೋದು ಸಾಮಾನ್ಯ. ಅಲ್ಲದೇ ಕಳ್ಳರ ಹಾವಲಿಯ ಕಾರಣ ತಮ್ಮ ಅಮೂಲ್ಯ ವಸ್ತುಗಳು ಕಲೇದು ಹೋದರೆ ಎಂಬ ಭೀತಿ ಇರುವುದರಿಂದ ತಮ್ಮ ಮೋಜು ಮಸ್ತಿಗೆ ಹಿಂದೇಟು ಹಾಕುತ್ತಾರೆ. ಆದ್ರೆ ಇದೀಗ ಪ್ರವಾಸಿಗರ ಸುರಕ್ಷತೆಗಾಗಿ ಮಲ್ಪೆಯಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

ಈ ಹಿಂದೆಯೇ ಬ್ಯಾಗ್ ಗಳನ್ನು ಇಡಲು ಲಗೇಜ್ ರೂಂ ಗಳನ್ನು ನಿರ್ಮಿಸಲಾಗಿದ್ದು ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಸಿಸಿ ಟಿವಿಯನ್ನ ಅಳವಡಿಸಿ ಪ್ರವಾಸಿಗರ ಸುರಕಾಷತೆಗೆ ಆದ್ಯತೆ ನೀಡಲಾಗುತ್ತಿದೆ. ಮಲ್ಪೆ ಬೀಚ್ ನಲ್ಲಿ ಈ ಬಾರಿ 4 ಕೋಟಿಯಷ್ಜ್ಟು ವಿವಿಧ ಅಭಿವೃದ್ದಿ ಕಾಮಗಾರಿ ನಡೆದಿದ್ದು ಪ್ರವಾಸಿಗರ ಅನುಕೂಲತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ.

Comments are closed.