ಕರಾವಳಿ

ಗಗನಕ್ಕೇರಿದ ಈರುಳ್ಳಿ, ಆಲೂಗಡ್ಡೆ, ಟೊಮಾಟೋ ಬೆಲೆ; ಗ್ರಾಹಕರ ಜೇಬಿಗೆ ಕತ್ತರಿ

Pinterest LinkedIn Tumblr

tomato

ನವದೆಹಲಿ: ಒಮ್ಮೊಮ್ಮೆ ಈರುಳ್ಳಿ ಬೆಲೆ ಏರಿಕೆಯಿಂದಾಗಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತೆ. ಇನ್ನೊಮ್ಮೆ ಆಲೂಗಡ್ಡೆ ಬೆಲೆ ಏರಿಕೆಯಾಗುತ್ತೆ. ಆದರೆ ಈ ಬಾರಿ ಹಾಗಲ್ಲ ಬೆಳೆ, ಟೊಮೋಟೋ ಮತ್ತು ಆಲೂಗಡ್ಡೆ ಬೆಲೆಗಳು ಗಗನಕ್ಕೇರಿ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿವೆ.

ಕಳೆದ ಎರಡು ವರ್ಷಗಳಲ್ಲಿ ಆಹಾರಗಳ ಬೆಲೆ ಎರಡು ಪಟ್ಟು ಹೆಚ್ಚಿದೆ. ಉದ್ದಿನ ಬೇಳೆ ಬೆಲೆ ಶೇ.120ರಷ್ಟು ಹೆಚ್ಚಾಗಿದೆ. ಬೆಳೆಗಳನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಬರ ಪರಿಸ್ಥಿತಿಯಿಂದಾಗಿ ಬೆಳೆಗಳ ಉತ್ಪಾದನೆ ಕುಂಠಿತಗೊಂಡಿದ್ದು, ಬೆಲೆಗಳು ಗಗನಮುಖಿಯಾಗಿವೆ. ಸರ್ಕಾರ ಸಾಕಷ್ಟು ಪ್ರಯತ್ನ ನಡೆಸುತ್ತಿದ್ದರೂ ಬೆಲೆ ಇಳಿಕೆ ಸಾಧ್ಯವಾಗುತ್ತಿಲ್ಲ.

ಆದರೆ ಆಲೂಗಡ್ಡೆ ಮತ್ತು ಟೊಮೋಟೋ ಬೆಳೆಗಳು ಹಾಗಲ್ಲ. ಇವೆರಡೂ ಕಡಿಮೆ ಅವಧಿಯಲ್ಲಿ ಬೆಳೆಯುವಂತಹದ್ದಾಗಿದೆ. ಆದರೂ ಹೆಚ್ಚಿನ ಬೆಳೆಯಿಲ್ಲದೆ ಇವುಗಳ ಬೆಲೆಯಲ್ಲೂ ಏರಿಕೆ ಕಂಡಿದೆ. 60-79 ದಿನಗಳಲ್ಲಿ ಟೊಮೋಟೋ ಹಾಗೂ 75ರಿಂದ 120 ದಿನಗಳಲ್ಲಿ ಆಲೂಗಡ್ಡೆ ಬೆಳೆ ಬೆಳೆಯಬಹುದು. ಆದರೆ ಅಧಿಕ ಉಷ್ಣಾಂಶದ ಪರಿಣಾಮ ಈ ಎರಡೂ ಬೆಳೆಗಳು ಹಾಳಾಗಿದ್ದು, ಈ ಬೆಲೆ ಏರಿಕೆಗೆ ಕಾರಣವಾಗಿದೆ.

ದೇಶದ ಎಲ್ಲಾ ಭಾಗಗಳಲ್ಲೂ ಬೆಲೆ ಏರಿಕೆಯಾಗಿಲ್ಲ. ಕೆಲವೇ ಭಾಗಗಳಲ್ಲಿ ಮಾತ್ರವೇ ಬೆಲೆ ಗಗನಕ್ಕೇರಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 2015-16ನೇ ಸಾಲಿನಲ್ಲಿ 18.2 ದಶಲಕ್ಷ ಮೆಟ್ರಿಕ್ ಟನ್‍ನಷ್ಟು ಹೆಚ್ಚಿಗೆ ಟೊಮೋಟೋ ಬೆಳೆಯಾಗಿದೆ.

ಆಲೂಗಡ್ಡೆ ಬೆಳೆ ಪ್ರಸಕ್ತ ವರ್ಷ 46 ದಶಲಕ್ಷ ಟನ್‍ನಷ್ಟು ಉತ್ಪಾದನೆಯಾಗಿದೆ. ಕಳೆದ ಬಾರಿ 48 ದಶಲಕ್ಷ ಟನ್ ಉತ್ಪಾದನೆಯಾಗಿತ್ತು. ಬೆಳೆ ಕೊರತೆಯ ಹಿನ್ನೆಲೆ ಬೇಡಿಕೆ ಹೆಚ್ಚಿದ್ದು, ಬೆಲೆಯೂ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

Comments are closed.