ಕನ್ನಡ, ಹಿಂದಿ ಸೇರಿದಂತೆ ಬಹುತೇಕ ಎಲ್ಲಾ ಭಾಷೆಗಳ ಚಿತ್ರಗಳಲ್ಲಿ ಹಾಡಿರುವ ಶ್ರೇಯಾ ಘೋಶಾಲ್ ಈಗ ತುಳು ಭಾಷೆಯ ಚಿತ್ರವೊಂದಕ್ಕೆ ಧ್ವನಿ ನೀಡಿದ್ದಾರೆ.
ಪಿಲಿಬೈಲ್ ಯುಮುನಕ್ಕ ಎಂಬ ಚಿತ್ರದ ಮೂಲಕ ಶ್ರೇಯಾ ತುಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ‘ತುಳು ಭಾಷೆಯಲ್ಲಿ ಮೊದಲ ಬಾರಿ ಹಾಡಿದ್ದೇನೆ. ಹಾಡಿನ ಸಾಹಿತ್ಯ ಚನ್ನಾಗಿದೆ. ಕಿಶೋರ್ ಕುಮಾರ್ ಶೆಟ್ಟಿ ಸಂಗೀತ ನಿರ್ದೇಶನದಲ್ಲಿ ಹಾಡು ಸುಂದರವಾಗಿದೆ. ತುಳು ಭಾಷೆಯಲ್ಲಿ ಇನ್ನಷ್ಟು ಹಾಡು ಹಾಡುವ ಬಯಕೆಯಿದೆ’ ಎಂದು ಶ್ರೇಯಾ ಘೋಶಾಲ್ ಹೇಳಿದ್ದಾರೆ.

Comments are closed.