ಕುಂದಾಪುರ: ತ್ಯಾಗ, ಪ್ರೀತಿ ಹಾಗೂ ನಿಸ್ವಾರ್ಥ ಸೇವೆಯಿಂದ ಎಲ್ಲರೂ ದೇವರ ಪ್ರೀತಿ ಹಾಗೂ ಕೃಪೆಗೆ ಪಾತ್ರರಾಗಬಹುದು. ಆದರೇ ಇತ್ತೀಚಿನ ದಿನಗಳಲ್ಲಿ ಇಂತಹ ಮನೋಭಾವನೆ ಕುಟುಂಬ ಜೀವನದಲ್ಲಿ ಕಡಿಮೆಯಾಗುತ್ತಿದ್ದು ಬೆಳೆವ ಮಕ್ಕಳಲ್ಲಿ ಸೇವಾ ಮನೋಭಾವನೆ ಬೆಳೆಸುವ ಕಾರ್ಯವನ್ನು ಫೋಷಕರು ಮಾಡಬೇಕಾದ ಜವಬ್ದಾರಿಯಿದೆ ಎಂದು ಎಂದು ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಡಾ. ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಹೇಳಿದರು.
ಅವರು ಹೊಸಂಗಡಿ ಸಮೀಪದ ಕೆರೆಕಟ್ಟೆ ಸಂತ ಅಂತೋಣಿಯವರ ಪುಣ್ಯಕ್ಷೇತ್ರದಲ್ಲಿ ನಡೆದ ವಾರ್ಷಿಕ ಮಹೋತ್ಸವದಲ್ಲಿ ಬಲಿಪೂಜೆ ನೆರೆವೇರಿಸಿ ಆಶೀರ್ವಚನದೊಂದಿಗೆ ಸಂದೇಶ ನೀಡಿದರು.






ಅತೀ ಕಿರಿಯ ವಯಸ್ಸಿನಲ್ಲಿಯೇ ಧರ್ಮ ಪ್ರಚಾರದ ಕೆಲಸಕ್ಕಾಗಿ ತಮ್ಮನ್ನು ಅರ್ಪಿಸಿಕ್ಕೊಳ್ಳುವ ಮೂಲಕವಾಗಿ ಸಂತ ಅಂತೋಣಿಯವರು ಜೀವನ ಬದಲಾವಣೆಯ ಕ್ರಮದ ಅನುಸರಣೆಗೆ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಮಾತೆ ಮರಿಯಮ್ಮರಲ್ಲಿ ವಿಶೇಷ ಭಕ್ತಿ ಹೊಂದಿದ್ದರು. ಅಲ್ಲದೇ ಪವಾಡ ಸಂತರೆಂದು ಪ್ರಖ್ಯಾತರಾಗಿದ್ದ ಇವರು ಒಂದು ವರ್ಷದ ಅವಧಿಯಲ್ಲಿ ಸಂತ ಪದವಿ ಪಡೆಯುವ ಮೂಲಕ ಎಲ್ಲಾ ಭಕ್ತರಿಗೂ ಪ್ರೇರಣೆಯಾಗಿದ್ದವರು ಎಂದು ಕೂಡ ಬಿಷಪ್ ಅವರು ಈ ಸಂದರ್ಭ ತಿಳಿಸಿದರು.
ಬಡವರು, ನಿರ್ಗತಿಕರು, ಸಮಾಜದಲ್ಲಿನ ಅಶಕ್ತರ ಬಗ್ಗೆ ಕಾಳಜಿ ಇರಬೇಕು. ಇದರಿಂದ ಮಾತ್ರವೇ ದೇವರನ್ನು ಒಲಿಸಿಕೊಳ್ಳಲು ಸಾಧ್ಯವಿದೆ. ಪೋಪ್‌ನವರ ಸಂದೇಶಗಳನ್ನು ಜೀವನದಲ್ಲಿ ಆದರ್ಶವಾಗಿಟ್ಟುಕೊಂಡು ಉತ್ತಮ ಜೀವನಕ್ರಮವನ್ನು ಮೈಗೂಡಿಸಿಕೊಂಡಗ ಆದರ್ಶ ಜೀವನ ನಡೆಸಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಸಂತ ಜೋಸೆಫ್ ಸೆಮಿನೆರಿ ಇದರ ನಿರ್ದೇಶಕರಾದ ಜೋಸೇಫ್ ಮಾರ್ಟಿಸ್ ಪ್ರವಚನ ನೀಡಿದರು.
ಫಾ. ಅನಿಲ್ ಡಿಸೋಜಾ ವಿಗಾರ್‌ವಾರ್ (ವಲಯ) ಕುಂದಾಪುರ, ಕೆರೆಕಟ್ಟೆ ಕ್ಷೇತ್ರದ ನಿರ್ದೇಶಕರು, ಧರ್ಮಗುರುಗಳಾದ ಫಾ. ಜೇವಿಯರ್ ಫಿಂಟೋ ಹಾಗೂ ಕುಂದಾಪುರ ಮತ್ತು ಉಡುಪಿ ಪ್ರಾಂತ್ಯದ ಧರ್ಮಗುರುಗಳು ಬಲಿಪೂಜೆಗೆ ಸಹಕರಿಸಿದರು.
ಇದೇ ಸಂದರ್ಭದಲ್ಲಿ ಕನ್ನಡ ನೊವೇನಾ ಪುಸ್ತಕ ಮತ್ತು ಪಾದುವಾ ಧ್ಯಾನ್-ವನ್ (Padua Theme Park) ಇದನ್ನು ಬಿಷಪ್ ಡಾ. ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಅವರು ಬಿಡುಗಡೆಗೊಳಿಸಿದರು.
ಕೆರೆಕ್ಕಟ್ಟೆ ಧರ್ಮಗುರು ಫಾ. ಜೇವಿಯರ್ ಫಿಂಟೋ ಸ್ವಾಗತಿಸಿ ವಂದಿಸಿದರು. ಜೋಯ್‌ಸ್ಟನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.
ಸೋಮವಾರ ಬೆಳಿಗ್ಗೆನಿಂದಲೇ ಮಳೆಯ ನಡುವೆಯೂ ಪುಣ್ಯಕ್ಷೇತ್ರಕ್ಕೆ ಸಾವಿರಾರು ಭೇಟಿ ನೀಡಿದರು. ಅಲ್ಲದೇ ಭಕ್ತಾಧಿಗಳು ಮೊಂಬತ್ತಿ ಹಚ್ಚಿ, ಹೂ ಸಮರ್ಪಣೆ ಮಾಡುವ ಮೂಲಕ ಅಂತೋಣಿಯವರಿಗೆ ಪೂಜೆ ಸಲ್ಲಿಸಿದರು.
Comments are closed.