ಅಂತರಾಷ್ಟ್ರೀಯ

ಅಮೆರಿಕದಿಂದ ಐಎಸ್ ಮುಖಂಡ ಅಲ್ ಬಾಗ್ದಾದಿ ಹತ್ಯೆ?

Pinterest LinkedIn Tumblr

bagdaadi

ರೋಮ್ (ಐಎಎನ್ಎಸ್): ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್‍ನ ಮುಖಂಡ ಅಲ್ ಬಕ್‍ರ್‍ ಬಾಗ್ದಾದಿ ಅಮೆರಿಕ ನಡೆಸಿದ ವಾಯುದಾಳಿಯಲ್ಲಿ ಹತ್ಯೆಗೀಡಾಗಿದ್ದಾರೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಭಾನುವಾರ ಅಮೆರಿಕ ಪಡೆ ಸಿರಿಯಾದಲ್ಲಿ ವಾಯು ದಾಳಿ ನಡೆಸಿದ್ದು, ಇದರಲ್ಲಿ ಬಾಗ್ದಾದಿ ಹತರಾಗಿದ್ದಾರೆ ಎಂದು ಇಸ್ಲಾಮಿಕ್ ಸ್ಟೇಟ್‍‍ನ ಸುದ್ದಿ ಸಂಸ್ಥೆಯಾದ ಅಮಾಕ್ ಹೇಳಿದೆ.

ಅಬು ಬಕ್‍ರ್ ಅಲ್ ಬಾಗ್ದಾದಿ ಅವರು ರಂಜಾನ್ ನ ಐದನೇ ದಿನ ಭಾನುವಾರ ರಾಖ್ಖಾದಲ್ಲಿ ನಡೆದ ವಾಯುದಾಳಿಯಲ್ಲಿ ಸಾವಿಗೀಡಾಗಿದ್ದಾರೆ ಎಂದು ಅಮಾಕ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ಈ ಬಗ್ಗೆ ಅಮೆರಿಕ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ

Comments are closed.