ಕರಾವಳಿ

 ಎಸ್.ಎಸ್.ಸಿ.ಯಲ್ಲಿ ಶೇಖಡಾ 98.20 ಅಂಕ ಗಳಿಸಿ ರಾಜ್ಯದಲ್ಲಿನ ತುಳು ಕನ್ನಡಿಗರ ಪೈಕಿ ಪ್ರಥಮ ಸ್ಥಾನ ಗಳಿಸಿದ ಸೃಷ್ಟಿ ಹಳೆಯಂಗಡಿ 

Pinterest LinkedIn Tumblr

scs_exam_toper

(ಈಶ್ವರ ಎಂ. ಐಲ್)
ಮಹಾನಗರದ ಖ್ಯಾತ ಅಂತರಾಷ್ಟೀಯ ಟೇಬಲ್ ಟೆನ್ನಿಸ್ ಕ್ರೀಡಾ ಪಟು ಸೃಷ್ಟಿ ಹಳೆಯಂಗಡಿ ಎಸ್. ಎಸ್. ಸಿ. ಪರೀಕ್ಷೆಯಲ್ಲಿ ಮಹತ್ತರ ಸಾಧನೆಗೈದು ಶೇಖಡಾ 98.20 ಅಂಕ ಗಳಿಸಿ ರಾಜ್ಯದಲ್ಲಿನ ತುಳು ಕನ್ನಡಿಗರ ಪೈಕಿ ಪ್ರಥಮ ಸ್ಥಾನ ಗಳಿಸಿದ್ದಾಳೆ ಎನ್ನಬಹುದಾಗಿದೆ. ಈಕೆ ನಗರದ ಬ್ಯಾಂಕೊಂದರಲ್ಲಿ ಹಿರಿಯ ಪ್ರಭಂದಕರಾಗಿರುವ, ಸಮಾಜ ಸೇವಕ ದಹಿಸರಿನ ಸುರೇಂದ್ರನಾಥ ಹಳೆಯಂಗಡಿ ಮತ್ತು ಹೇಮಲತಾ ದಂಪತಿಯ ಪುತ್ರಿ.

ಟೇಬಲ್ ಟೆನ್ನಿಸ್ ನಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ ಈಕೆ ಕಳೆದ ವರ್ಷ ಮುಂಬಯಿ ಮಹಾ ನಗರದಲ್ಲಿ ಜರಗಿದ ಮುಂಬಯಿ ಸೂಪರ್ ಲೀಗ್ ನಲ್ಲಿ ಟೋಪ್ 8 ರ್ರ್ಯಾಂಕಿನಲ್ಲಿ 8 ಟೀಂನ ಮಾಲಕರು ಹರಾಜುನಡೆಸಿದ್ದು ದಹಿಸರ್ ಪೂರ್ವ ವಿದ್ಯಾ ಮಂದಿರ ಶಾಲೆಯ ಹತ್ತನೆಯ ತರಗತಿವಿದ್ಯಾರ್ಥಿನಿ ಸೃಷ್ಟಿ ಹಳೆಯಂಗಡಿಗೆ ಅತ್ಯದಿಕ ಬಿಡ್ ದೊರಕಿದೆ.

ದೆಹಲಿಯಲ್ಲಿ ಜರಗಿದ ಸೌತ್ ಏಶ್ಯನ್ ಚಾಂಪಿಯನ್ ಶಿಫ್ ನಲ್ಲಿ ಈಕೆ ಭಾರತವನ್ನು ಪ್ರತಿನಿಧೀಕರಿಸಿದ್ದು ಭಾರತವು ಗೊಲ್ಡ್ ಮೆಡಲನ್ನು ಗಳಿಸಿದೆ ಮಾತ್ರವಲ್ಲದೆ ಸೃಷ್ಟಿ ಯು ಕೂಡಾ ಗೋಲ್ಡ್ ಮೆಡಲನ್ನು ಗಳಿಸಿ ಹದಿನೈದರಕೆಳಗಿನ ಸೌತ್ ಏಶ್ಯನ್ ಚಾಂಪಿಯನ್ ಆಗಿದ್ದಾಳೆ.

ಏಳನೆಯ ತರಗತಿಯಲ್ಲಿ ಓದುತ್ತಿರುವಾಗಲೇ ದಹಿಸರ್ ಸ್ಪೋಟ್ಸ್ಪೌಂಡೇಶನನಿನಲ್ಲಿ ಕ್ರೀಡಾಬ್ಯಾಸ ತೊಡಗಿದ ಕೇವಲ ಆರು ತಿಂಗಳಲ್ಲೇ ಜುಹುಜಿಮ್ಖಾನದಲ್ಲಿ ಜರಗಿದ ಟೂರ್ನಮೆಂಟ್ ನಲ್ಲಿ ಮೆಡಲನ್ನು ಗಳಿಸಿದ್ದು ಮುಂದೆ ಇದು ಈ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಹಾಗೂ ಸ್ಪೂರ್ತಿ ದೊರಕಿತು. ಟೇಬಲ್ಟೆನಿಸ್ ನಲ್ಲಿ ಈಕೆಯ ಸಾಧನೆ ಬಗ್ಗೆ ಕೆಲವನ್ನು ಹೆಸರಿಸುದಾದರೆ, ತನ್ನ ಮೊದಲನೇ ವರ್ಷದಲ್ಲಿ ಮುಂಬಯಿಯ ಟೇಬಲ್ ಟೆನಿಸ್ ಟೀಮಿನ ಪ್ರತಿನಿಧಿಯಾಗಿ ಸಾಂಗ್ಲಿಗೆ ಆಯ್ಕೆಯಾಗಿದ್ದಳು. ಆ ನಂತರ ಮಹಾರಾಷ್ಟ್ರದಪ್ರತಿನಿಧಿಯಾಗಿ ಆಯ್ಕೆಯಾಗಿ ಇಂಡೊರ್ ನಲ್ಲಿ ರಾಷ್ಟ್ರಮಟ್ಟದಲ್ಲಿಭಾಗವಹಿಸಿದ್ದಳು. ಅಂದಿನಿಂದ ನಿರಂತರವಾಗಿ ಮಹಾರಾಷ್ಟ್ರದ ಟೀಮನ್ನುಪ್ರತಿನಿಧೀಕರಿಸುತ್ತಿದಾಳೆ. ಹದಿನೈದು ವರ್ಷಗಳ ಕೆಳಗಿನವರಲ್ಲಿರಾಷ್ಟ್ರಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿ ಎರಡನೇ ಸ್ಥಾನ ಗಳಿಸಿದಸೃಷ್ಟಿ ಹಳೆಯಂಗಡಿ ಥಾಯ್ಲೇಂಡ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಇಂಡಿಯಾ ಟೀಮಿಗೆ ಆಯ್ಕೆಯಾಗಿ ಭಾರತವನ್ನು ಪ್ರತಿನಿಧಿಕರಿಸಿದ್ದು ಭಾರತ ಟೀಮ್ ಬ್ರೋನ್ಸ್ಮೆಡಲನ್ನು ತನ್ನದಾಗಿಸಿದೆ.

ದೇಶದ ವಿವಿಧೆಡೆಯಲ್ಲಿ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಈತನಕ ನೂರಾರು ಮೆಡಲ್ ಗಳನ್ನು ಪಡೆದಿರುವ ಈಕೆಯ ಕೋಚ್ ಕೋಚ್ ಸಚಿನ್ ಶೆಟ್ಟಿ . ವಿದೇಶ, ಮುಂಬಯಿ ಮಾತ್ರವಲ್ಲದೆ, ಮಹಾರಾಷ್ಟ್ರದ ವಿವಿದೆಡೆ, ದುರ್ಗಾಪುರ, ಗಾಂಧಿಧಾಮ, ಆಲೆಪ್ಪಿ ಹಾಗೂ ಇನ್ನಿತರ ಕಡೆಗಳಲ್ಲಿಮಾತ್ರವಲ್ಲದೆ ಅಂತರ್ ಶಾಲಾ ಮಟ್ಟದಲ್ಲಿ 15 ವರ್ಷದ ಕೆಳಗಿನ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಭಾಗವಹಿಸಿ ಕೆಲವು ಗೋಲ್ಡ್, ಸಿಲ್ವರ್, ಗಳಿಸಿದ ಕೀರ್ತಿಸೃಷ್ಟಿ ಹಳೆಯಂಗಡಿ ಗೆ ಸಲ್ಲುತ್ತದೆ.

ಕ್ರೀಡೆಯಿಂದಾಗಿ ಓದಲು ಹೆಚ್ಚಿನ ಸಮಯವನ್ನು ವಿನಿಯೋಗಿಸಲು ಆಸಾಧ್ಯವಾಗಿದ್ದರು ಟ್ಯುಷನ್ ಪಡೆಯದೆ ತನ್ನ ಸ್ವಪಯತ್ನದಿಂದ ಸಾಧನೆ ಮಾಡಿ, ಕೇವಲ ಎರಡು ತಿಂಗಳ ಅವಧಿಯಲ್ಲಿ ಅಭ್ಯಾಸ ನಡೆಸಿ ಎಸ್. ಎಸ್. ಸಿ. ಪರೀಕ್ಷೆಯಲ್ಲಿ 98.20 ಗಳಿಸಿದ್ದು ಸೃಷ್ಟಿ ಹಳೆಯಂಗಡಿ ಒರ್ವ ಪ್ರತಿಭಾವಂತ ವಿದ್ಯಾರ್ಥಿನಿ ಅನ್ನುದರಲ್ಲಿ ಸಂದೇಹವಿಲ್ಲ. ಫಲಿತಾಂಶದ ಮರುದಿನ ಶಾಲೆಯ ಪ್ರಾಂಶುಪಾಲರು ಆಕೆಯ ಮನೆಯಲ್ಲೇ ಸನ್ಮಾನಿಸಿದ್ದಾರೆ. ಮುಂದಿನ ಬಗ್ಗೆ ಸರಿಯಾದ ನಿರ್ಧಾರವನ್ನು ಈ ವರೆಗೂ ಕೈಗೊಳ್ಳದಿರಲು ವಾಣಿಜ್ಯವನ್ನು ಆರಿಸಿ ಸಿ.ಎ. ಆಗುವ ಮನಸ್ಸುನ್ನು ಹೊಂದಿದ್ದಾಳೆ.

Comments are closed.