ಕರಾವಳಿ

ಕುಂದಾಪುರದ ಹೊಸಾಡು ಕಡಬು ಕೆರೆಯ ಹೂಳು ಎತ್ತಿಲ್ಲ, ಗೇಟು ಸರಿಮಾಡಿಲ್ಲ…ಮಳೆಗಾಲ ಬಂದಾಯ್ತು..ಆತಂಕದಲ್ಲಿ ಕೃಷಿಕರು

Pinterest LinkedIn Tumblr

ವರದಿ,ಚಿತ್ರ- ಯೋಗೀಶ್ ಕುಂಭಾಸಿ

ಕುಂದಾಪುರ: ಈ ಊರಲ್ಲೊಂದು ಬಾರೀ ದೊಡ್ಡ ಗಾತ್ರದ ಕೆರೆಯಿದೆ. ವರ್ಷದಲ್ಲಿ ಮೂರು ಬಾರಿ ಕೃಷಿ ಮಾಡಲು ಅಕ್ಕಪಕ್ಕದ ಕೃಷಿಕರು ಈ ಕೆರೆ ನೀರನ್ನು ಬಳಸಿಕೊಳ್ತಾರೆ. ಆದರೇ ಕಳೆದ ಬಾರೀ ನೀರಿನ ಬಂಡು ಒಡೆದು ಒಂದಷ್ಟು ಅವಾಂತರ ಸೃಷ್ಟಿಯಾಗಿತ್ತು. ಇನ್ನೇನು ಈ ವರ್ಷದ ಮಳೆಗಾಲ ಆರಂಭವಾಗ್ತಾ ಇದೆ. ಆದರೇ ಇನ್ನೂ ಕೂಡ ಕೆರೆಗೆ ಕಾಯಕಲ್ಪ ನೀಡುವ ಕಾರ್ಯಕ್ಕೆ ಸಂಬಂದಪಟ್ಟ ಸಣ್ಣನೀರಾವರಿ ಇಲಾಖೆ ಮಾತ್ರ ಮುಂದಾಗಿಲ್ಲ.

Kundapura_Kadabu Kere_Problem (1) Kundapura_Kadabu Kere_Problem (5) Kundapura_Kadabu Kere_Problem (2) Kundapura_Kadabu Kere_Problem (3) Kundapura_Kadabu Kere_Problem (9) Kundapura_Kadabu Kere_Problem (10) Kundapura_Kadabu Kere_Problem (8) Kundapura_Kadabu Kere_Problem (6) Kundapura_Kadabu Kere_Problem (7) Kundapura_Kadabu Kere_Problem (4)

ಕುಂದಾಪುರ ತಾಲೂಕಿನ ಹೊಸಾಡು ಗ್ರಾಮಪಂಚಾಯತಿ ವ್ಯಾಪ್ತಿಯ ಅತೀ ವೀಸ್ತೀರ್ಣದ ಐತಿಹಾಸಿಕ ಹಿನ್ನೆಲೆಯುಳ್ಳ ಕೆರೆಯೇ ಕಡಬುಕೆರೆ. ಮುಳ್ಳಿಕಟ್ಟೆ, ಅರಾಟೆ ಪರಿಸರದ ಸಾವಿರಾರು ಎಕರೆ ಕೃಷಿಭೂಮಿಗೆ ನೀರುಣಿಸುವ ಸುಮಾರು ಏಳೂವರೆ ಎಕ್ರೆ ವಿಸ್ತೀರ್ಣದ ಕಡಬು ಕೆರೆಗೆ ಇನ್ನು ಕಾಯಕಲ್ಪ ಸಿಕ್ಕಿಲ್ಲ. ಕಳೆದ ಬಾರೀ ಮಳೆ ನೀರು ಜಾಸ್ಥಿಯಾಗಿ ನೀರು ತಡೆಯಲು ಹಾಕಿದ್ದ ಬಂಡುಗಳು ಒಡೆದು ಕೃಷಿಭೂಮಿಗೆ ನುಗ್ಗುವ ಹಂತಕ್ಕೆ ತಲುಪಿತ್ತು. ಈಗಾಗಲೇ 2-3 ಕೋಟಿ ಅಂದಾಜು ವೆಚ್ಚದ ಪ್ರಸ್ತಾವನೆಯನ್ನು ಹೋಸಾಡು ಪಂಚಾಯತಿಯವರು ನಿರ್ಣಯ ಮಾಡಿ ಶಾಸಕರ ಮೂಲಕ ಸಣ್ಣನೀರಾವರಿ ಇಲಾಖೆಗೆ ನೀಡುವ ಕಾರ್ಯ ಮಾಡಿದ್ದರೂ ಯಾವುದೇ ಪ್ರಯೋಜನವೂ ಆಗಿಲ್ಲ. ಆದರೇ ತುರ್ತು ಪರಿಹಾರಕ್ಕಾಗಿ ಗ್ರಾಮ ಪಂಚಾಯತಿ ಅನುದಾನದಲ್ಲಿ ಮೋರಿಯೊಂದನ್ನು ಅಳವಡಿಸಿ ನೀರು ಹೊರಹೋಗಲು ಅವಕಾಶ ಮಾಡಿಕೊಡುವ ಯೋಜನೆಯನ್ನು ಪಂಚಾಯತಿ ಹಾಕಿಕೊಂಡಿದೆಯಾದರೂ ಕೂಡ ಶಾಶ್ವತ ಪರಿಹಾರವನ್ನು ಸಣ್ಣ ನೀರಾವರಿ ಇಲಾಖೆ ಮಾಡಿಕೊಡಬೇಕಿದೆ. ಅತೀ ಶೀಘ್ರ ಈ ಕಾರ್ಯ ಆದರೇ ರೈತರಿಗೆ ಅನುಕೂಲವಾಗ್ತದೆ ಎನ್ನುತ್ತಾರೆ ಹೊಸಾಡು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಪೂಜಾರಿ.

ಇನ್ನು ಇಷ್ಟು ದೊಡ್ಡ ಕೆರೆ ಸಂಪೂರ್ಣ ಹೂಳುತುಂಬಿದ ಪರಿಸ್ಥಿತಿಯಲ್ಲಿದೆ. ಈ ಹಿಂದೆ ಶಾಸಕರ 10 ಲಕ್ಷ ಅನುದಾಮದಲ್ಲಿ ಸುತ್ತಲಿನ ರಿವಿಟ್ ಮೆಂಟ್ ಕಾರ್ಯ ಆಗಿದ್ದು ಬಿಟ್ಟರೇ ಇಷ್ಟರವರೆಗೆ ಬೇರ್ಯಾವುದೇ ಕಾಮಗಾರಿ ನಡೆದಿಲ್ಲ. ಹೂಳೆತ್ತುವ ಕೆಲಸವಂತೂ ಇಲ್ಲಿ ನಡೇಸಲೇ ಇಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ. ಯಾವ ವರ್ಷವೂ ಬತ್ತದ ಕಡಬು ಕೆರೆ ಈ ವರ್ಷ ಮಾತ್ರ ನೀರಿಲ್ಲದೇ ಬರಡಾಗಿದೆ. ವಿಶಾಲವಾದ ಕೆರೆ ಬಟ್ಟ ಬಯಲಾಗಿದ್ದು ಜಾನುವಾರುಗಳು ಮೇಯಲು ಬರುತ್ತಿದೆ. ಪ್ರತಿವರ್ಷ ಇದೇ ಕೆರೆ ನೀರನ್ನು ಉಪಯೋಗಿಸಿಕೊಂಡು ಸವಿರಾರು ಎಕರೆ ಪ್ರದೇಶದಲ್ಲಿ ಸುಗ್ಗಿ ಹಾಗೂ ಕೊಳ್ಕೆ ಬೇಸಾಯ ಮಾಡುತ್ತಿದ್ದ ರೈತರು ಈ ಬಾರಿ ನೀರಿಲ್ಲದ ಕಾರಣ ಕೃಷಿ ಮಾಡಿಲ್ಲ. ಇನ್ನು ರಿವಿಟ್‌ಮೆಂಟ್ ಕಾಮಗಾರಿಗೆ ಹಾಕಿದ ಶಿಲೆಗಲ್ಲುಗಳು ಕಿತ್ತುಹೋಗುತ್ತಿದ್ದು ಕಳಪೆ ಕಾಮಗಾರಿ ನಡೆದಿರುವುದು ಮೇಲ್ನೋತಕ್ಕೆ ಕಂಡುಬರುತ್ತಿದೆ. ಇನ್ನು ನೀರು ಹೊರಗೆ ಹೋಗಲು ಅಳವಡಿಸಿದ ಗೇಟು ಕಳೆದ ಬಾರಿ ಮಳೆ ನೀರಿಗೆ ಕೊಚ್ಚಿಹೋಗಿದ್ದಲ್ಲದೇ ಶಿಲೆಗಲ್ಲುಗಳು ಕೊಚ್ಚಿಹೋಗಿದೆ. ಇನ್ನೇನು ಮಳೆಗಾಲ ಆರಂಭವಾಗ್ತಿದೆ. ಕೆರೆಯ ಹೂಳು ಎತ್ತಿ ನೀರು ಹೊರಹೋಗುವ ಜಾರುಬಂಡಿ ಹಾಗೂ ಗೇಟ್ ರಿಪೇರಿ ಮಾಡುವ ಕೆಲಸ ಸಣ್ಣ ನೀರಾವರಿ ಇಲಾಖೆಯಿಂದ ಶೀಘ್ರವೇ ಆಗಬೇಕಿದೆ.

ಇನ್ನಾದರೂ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಗಮನಹರಿಸಿ ಕಡಬುಕೆರೆಗೆ ಸೂಕ್ತ ಕಾಯಕಲ್ಪ ನೀಡುವುದೇ ಕಾದುನೋಡಬೇಕಿದೆ.

Comments are closed.