ಕರಾವಳಿ

ಸೇನಾ ಘಟಕದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾದ ವ್ಯಕ್ತಿ ನಾಪತ್ತೆ

Pinterest LinkedIn Tumblr

ಮಂಗಳೂರು, ಜೂ.06:  ರಜೆಯಲ್ಲಿ ತನ್ನೂರು ಮಂಗಳೂರಿಗೆ ಬಂದು ಕರ್ತವ್ಯದ ಸ್ಥಳಕ್ಕೆಂದು ಮರಳಿದ್ದ ಸೇನಾ ಸಿಬ್ಬಂದಿಯೋರ್ವರು ಅಲ್ಲಿಗೆ ತೆರಳದೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿದೆ.

ನಗರದ ಬೋಳೂರು ನಿವಾಸಿ ಜಯರಾಜ್ ಬಿ. ನಾಪತ್ತೆಯಾಗಿರುವ ವ್ಯಕ್ತಿ. ಹರಿದ್ವಾರದಲ್ಲಿ ಭೂಸೇನೆಯಲ್ಲಿರುವ ಅವರು ರಜೆಯಲ್ಲಿ ಎಪ್ರಿಲ್ 21ರಂದು ಊರಿಗೆ ಬಂದಿದ್ದರು. ಮೇ 30ರಂದು ವಾಪಸ್ ಹರಿದ್ವಾರಕ್ಕೆ ಹೊರಟಿದ್ದು, ಸ್ನೇಹಿತರಾದ ಮನೀಷ್ ಮತ್ತು ಸಾಗರ್ ಅವರು ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣದವರೆಗೆ ಜೊತೆಯಲ್ಲಿ ತೆರಳಿ ಬೀಳ್ಕೊಟ್ಟಿದ್ದರು. ಜೂನ್ 1ರಂದು ಹರಿದ್ವಾರದ ಸೇನಾ ಘಟಕದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಾಗಿದ್ದ ಜಯರಾಜ್ ಬಿ. ಅಲ್ಲಿಗೆ ತಲುಪದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Comments are closed.