ಕರಾವಳಿ

ಉಡುಪಿ; ಜಿಲ್ಲೆಯಲ್ಲಿ ಕರ್ತವ್ಯಕ್ಕೆ ಹಾಜಾರಾದ ಪೊಲೀಸರು; ಪೊಲೀಸರ ಪರ ಸಂಘಟನೆಗಳು, ನಿವೃತ್ತ ಪೊಲೀಸರು, ಪೊಲೀಸ್ ಕುಟುಂಬಸ್ಥರ ಪ್ರತಿಭಟನೆ

Pinterest LinkedIn Tumblr

* ಭಾಗಿಯಾಗದ ಪೊಲೀಸರು * ಪ್ರತಿಭಟನಾ ಮೆರವಣಿಗೆ *ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ವೇತನ, ಆರೋಗ್ಯ, ವಸತಿ ಹೀಗೆ 30 ವಿವಿಧ ಬೇಡಿಕೆಯನ್ನು ಇಡೇರಿಸುವಂತೆ ಒತ್ತಾಯಿಸಿ ಹಮ್ಮಿಕೊಂಡಿರುವ ಪೊಲೀಸರ ಪ್ರತಿಭಟನೆಗೆ ಉಡುಪಿ ಜಿಲ್ಲೆಯಲ್ಲಿ ಪೊಲೀಸರು ಭಾಗಿಯಾಗಿರಲಿಲ್ಲ. ಆದರೆ ಪೊಲೀಸರ ಪರ ವಿವಿಧ ಸಂಘಟನೆಗಳು, ನಿವೃತ್ತ ಪೊಲೀಸರು ಪ್ರತಿಭಟನೆ ನಡೆಸಿದರು.

Udupi_Police_Protest (1) Udupi_Police_Protest (2) Udupi_Police_Protest (3)

ರಾಜ್ಯದಾದ್ಯಂತ ಕುತೂಹಲಕ್ಕೆ ಕಾರಣವಾಗಿದ್ದ ಪೊಲೀಸರ ಪ್ರತಿಭಟನೆಗೆ ಉಡುಪಿ ಜಿಲ್ಲೆಯಲ್ಲಿ ನೀರಸ ಪ್ರತಿಕ್ರೀಯೆ ಕಾರಣವಾಗಿದೆ. ಒಂದೆಡೆ ಪ್ರತಿಭಟನೆ ನಡೆಸುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂಬ ಕಾರಣ ಹಾಗೂ ಸರಕಾರದಿಂದ ದೊರಕಿರುವ ಭರವಸೆಯ ಹಿನ್ನಲೆಯಲ್ಲಿ ಉಡುಪಿಯಲ್ಲಿ ಪೊಲೀಸರು ಎಂದಿನಂತೆ ಕಾರ್ಯನಿರ್ವಹಿಸಿದ್ದಾರೆ. ಆದರೆ ಪೊಲೀಸರ 30 ವಿವಿಧ ಬೇಡಿಕೆಯನ್ನು ಮುಂದಿಟ್ಟು ಪೊಲೀಸರ ಪರ ನಿವೃತ್ತ ಪೊಲೀಸರು, ವಿವಿಧ ಸಂಘಟನೆಗಳ ಕಾರ್ಯಕರ್ತರು ಉಡುಪಿ ಅಜ್ಜರಕಾಡಿನ ಮಾಜಿ ಸೈನಿಕರ ಹುತಾತ್ಮ ವೇದಿಕೆಯ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಮೆರವಣಿಗೆಯ ಮೂಲಕ ಸಾಗಿ ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದರು.

Comments are closed.