ಮನೋರಂಜನೆ

ಬಾಕ್ಸಿಂಗ್ ದಂತಕಥೆ ಮೊಹಮ್ಮದ್ ಅಲಿ ವಿಧಿವಶ

Pinterest LinkedIn Tumblr

Mohammed Ali

ನ್ಯೂಯಾರ್ಕ್: ಶುಕ್ರವಾರದಂದು ಉಸಿರಾಟ ಸಮಸ್ಯೆಯಿಂದ ಅರಿಜೋನಾ ನಗರದ ಫೀನಿಕ್ಸ್ ಪ್ರದೇಶದ ಆಸ್ಪತ್ರೆಗೆ ದಾಖಲಾಗಿದ್ದ ಬಾಕ್ಸಿಂಗ್ ದಿಗ್ಗಜ ಮಹಮ್ಮದ್ ಅಲಿ(74) ಶನಿವಾರ ಕೊನೆಯುಸಿರೆಳೆದಿದ್ದಾರೆ.

ಹಲವು ದಿನಗಳಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಮೊಹಮ್ಮದ್ ಅಲಿ ಅಮೆರಿಕದ ಫಿಯೋನಿಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಾಕ್ಸಿಂಗ್ ನಲ್ಲಿ ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಮೊಹಮ್ಮದ್ ಅಲಿ ಕಳೆದ ಮೂರು ವರ್ಷಗಳಿಂದ ಪಾರ್ಕಿನ್ಸನ್ ಖಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳಿಂದ ಅಲಿ ಅವರ ಉಸಿರಾಟದ ಸಮಸ್ಯೆ ಉಲಬಣವಾದ ಪರಿಣಾಮ ಫಿಯೋನಿಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಾದರೂ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿತ್ತು.

ಅಲಿ ಅವರ ನಿಧನವನ್ನು ಕುಟುಂಬಸ್ಥರು ಸ್ಪಷ್ಟಪಡಿಸಿದ್ದು ಹುಟ್ಟುರಾದ ಕೆಂಟುಕಿಯ ಲೂಯಿಸ್ವಿಲ್ಲೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೊಹಮ್ಮದ್ ಅಲಿ ಪುತ್ರ ಅಲಿ ಜೂನಿಯರ್ ಹೇಳಿದ್ದಾರೆ.

1971 ರ ಮಾರ್ಚ್ 8 ರಂದು ಅಮೆರಿಕದ ನ್ಯೂಯಾರ್ಕ್ ನಲ್ಲಿ ನಡೆದ ಬಾಕ್ಸರ್ ಜೋ ಫ್ರೇಜರ್ ಹಾಗೂ ಚಾಲೆಂಜರ್ ಮೊಹಮ್ಮದ್ ಅಲಿ ನಡುವಿನ ಪಂದ್ಯ ಫೈಟ್ ಆಫ್ ದಿ ಸೆಂಚುರಿ ಎಂದೇ ಪ್ರಸಿದ್ಧವಾಗಿದೆ.

Comments are closed.