ಅಂತರಾಷ್ಟ್ರೀಯ

ಶ್ರೀಲಂಕಾ ಹುಡುಗಿ, ಕಾರ್ಕಳದ ಹುಡುಗನ ಲವ್ವು; ಪ್ರೀತಿಸಿ ಮದುವೆಯಾದ ಆಕೆಗೆ ಸಿಕ್ಕಿದ್ದು ಕೇವಲ ನೋವು; ‘ನನ್ಗೆ ಗಂಡ ಬೇಕು’ ಅಂತಾಳೆ ಆಕೆ

Pinterest LinkedIn Tumblr

ಉಡುಪಿ: ಇದು ಇಂಡೋ- ಲಂಕಾ ಪ್ರೇಮ ಕಹಾನಿ…. ಇಬ್ಬರ ಲವ್ ಸ್ಟೋರಿ ಮದುವೆಯ ರೂಪ ಪಡೆದದ್ದು ಕುವೈಟ್ ನಲ್ಲಿ.. ಈಗ ಮಾತ್ರ ಲವ್ ಸ್ಟೋರಿ ಡೈವರ್ಸ್ ಹಂತ ತಲುಪಿದೆ. ಲವ್ ನಾಟಕವಾಡಿ ಮದುವೆ‌ ಆದಾತ ಕೈಕೊಟ್ಟು ಇನ್ನೊಂದುಮದುವೆಯಾಗಿ ಒಂದು ಮಗುವಿನ ತಂದೆಯಾಗಿದ್ದಾನೆ. ವ್ಯಕ್ತಿಯೊಬ್ಬನಿಂದ ಮೋಸ ಹೋದ ಲಂಕಾದ ಯುವತಿಯೊಬ್ಬಳ ಕಣ್ಣೀರಿನ ಕಥೆ ಇದು..

Indian_Shrilanka_Love Story (2) Indian_Shrilanka_Love Story (4)

ಆಫಿಯಾಗೆ ಅಟಕಾಯಿಸಿಕೊಂಡ ಮುಬೀನ್…
ಈಕೆಯ ಹೆಸರು ಆಫಿಯಾ. ಮೂಲತಃ ಶ್ರೀಲಂಕಾದವಳು. ಈಕೆ ಕಳೆದ ೮ ವರ್ಷಗಳಿಂದ ಕುವೈತ್ ನಲ್ಲಿ ಬ್ಯೂಟಿಷನ್ ಆಗಿ ಕೆಲಸ ಮಾಡುತ್ತಿದ್ದಾಳೆ. ಈಕೆಗೆ ಸ್ವಂತ ಬ್ಯೂಟೀಷನ್ ಶಾಪ್ ಇದೆ. ತನ್ನದೇ ಆದ ಕೆಲಸಗಾರರು ಇದ್ದಾರೆ, ಉತ್ತಮ ದುಡಿಮೆಯೂ ಇದೆ ಆಕೆಗೆ. ಆದ್ರೆ ಪೀತಿಯೆಂಬ ಮಾಯೆಗೆ ಸಿಲುಕಿ ಇದೀಗ ಒಂಟಿ ಹಕ್ಕಿಯಾಗಿದ್ದಾರೆ ಆಫಿಯಾ. ಹೌದು ಕುವೈತ್ ನಲ್ಲಿ 10 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಕಳ ಜೋಡುಕಟ್ಟೆಯ ನಿವಾಸಿ ಮುಬೀನ್ ಎಂಬಾತನಿಗೆ ಬರ್ತ್ ಡೇ ಪಾರ್ಟಿಯೊಂದರಲ್ಲಿ ಕುವೈತ್ ನಲ್ಲಿ ಆಫಿಯಾ ಪರಿಚಯವಾಗುತ್ತಾಳೆ. ಪರಿಚಯ ಪೇಮಕ್ಕೆ ತಿರುಗಿ ಮದುವೆಯ ತನಕವೂ ಸಾಗುತ್ತದೆ. ಕುವೈಟ್ ನಲ್ಲೇ ಅಲ್ಲಿನ ಕಾನೂನು ಪ್ರಕಾರ ಮದುವೆಯಾಗುವ ಈ ಜೋಡಿ ಹನಿಮೂನನ್ನೂ ಆಚರಿಸುತ್ತದೆ. ಆದರೆ ಊರಿಗೆ ಹೋಗಿ ಬರುತ್ತೇನೆಂದ ಗಂಡ ಮುಬೀನ್ ಮಾತ್ರ ಹಿಂತುರುಗಿ ಬರದೇ ಹಿನ್ನಲೆಯಲ್ಲಿ ಕಕ್ಕಾಬಿಕ್ಕಿಯಾಗುವ ಆಫಿಯಾ ಗಂಡನನ್ನು ಹುಡುಕಿ ಕಾರ್ಕಳಕ್ಕೆ ಬರುತ್ತಾಳೆ ಆದ್ರೆ ಗಂಡ ಸಿಗದೇ ಆಫಿಯಾ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ವಾಪಾಸ್ ಆಗುತ್ತಾಳೆ.

Indian_Shrilanka_Love Story (3)

ಪ್ರೀತಿಸಿ ಮದುವೆಯಾದವ ಕೈಕೊಟ್ಟಾಗ….
ಅಂದ ಹಾಗೆ ಮುಬೀನ್ ಆಫಿಯಾ ಜೊತೆಗೆ ಸ್ವಲ್ಪ ಸಮಯ ಸಂಸಾರ ಮಾಡಿ ಆಕೆಗೆ ಕೈ ಕೊಟ್ಟು ಬೇರೆ ಮದುವೆಯಾಗುತ್ತಾನೆ. ಕಾಪು ಮೂಲದ ಯುವತಿಯನ್ನು ಮದುವೆಯಾದ ವಿಷಯ ಆಫಿಯಾಗೆ ತಿಳಿಯುತ್ತದೆ. ಮತ್ತೆ ಕಾರ್ಕಳಕ್ಕೆ ಬರುವ ಆಫಿಯಾ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರನ್ನೂ ದಾಖಲು ಮಾಡುತ್ತಾಳೆ. ಆದ್ರೆ ಆಫಿಯಾ -ಮುಬೀನ್ ಕುವೈತ್ ನಲ್ಲಿ ಮದುವೆಯಾದ ಹಿನ್ನಲೆಯಲ್ಲಿ ಪೊಲೀಸರಿಗೆ ಕಾನೂನಿನ ತೊಡಕು ಎದುರಾಗುತ್ತದೆ. ಮುಬೀನ್ ಮೇಲೆ ಕ್ರಮ ಜರಗಿಸಲು ಪೊಲೀಸರೂ ವಿಫಲರಾಗುತ್ತಾರೆ.

ಕಾನೂನು ತೊಡಕು……
ಆದ್ರೆ ಆಫಿಯಾ ತನ್ನ ಪ್ರಯತ್ನವನ್ನು ಬಿಡದೇ ಗಂಡ ತನಗೆ ಬೇಕು ಎಂದು ಮಾದ್ಯಮ, ಸಾಮಾಜಿಕ ಕಾರ್ಯಕರ್ತರ ಬಳಿ ನೆರವು ಬೇಡುತ್ತಾಳೆ. ತನ್ನ ಗಂಡಾನ್ನು ಸಂಪರ್ಕ ಮಾಡಲು ಹರಸಾಹಸ ಪಡುತ್ತಿರುವಾಗಲೇ ಇದೀಗ ಶಾಕಿಂಗ್ ಸುದ್ದಿ ಆಫಿಯಾಳಿಗೆ ಸಿಗುತ್ತದೆ. ಅದೇನಂದರೆ ಗಂಡ ಮುಬೀನ್ ಡೈವರ್ಸ್ ಗಾಗಿ ಕುವೈತ್ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿದ್ದಾನೆ. ಮುಬೀನ್ ತನ್ನ ಸಹೋದರನ ಸಹಾಯ ಪಡೆದು ನಕಲಿ ಜಿಪಿಯು( ಜನರಲ್ ಪವರ್ ಆಫ್ ಅಟರ್ನಿ) ಸೃಷ್ಟಿಸಿ ವಿಛ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ. ಆದ್ರೆ ಈ ಅರ್ಜಿಗೆ ಭಾರತದಲ್ಲಿ ಯಾವುದೇ ಮಾನ್ಯತೆ ಇಲ್ಲ. ಆದರೆ ಕುವೈತ್ ನಲ್ಲಿ ಮದುವೆಯಾದ ಕಾರಣ ಭಾರತದಲ್ಲಿ ಯಾವುದೇ ನ್ಯಾಯವನ್ನು ಆಫಿಯಾಗೆ ಕೊಡಲು ಅಸಾದ್ಯವಾಗಿದೆ.

ಒಟ್ಟಿನಲ್ಲಿ ಇಂಡೋ-ಲಂಕಾ ಜೋಡಿಯ ಲವ್ ಸ್ಟೋರಿ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದೆ. ಪ್ರೀತಿಸಿ ಮದುವೆಯಾದ ಆಫಿಯಾ ತನಗೆ ಎಲ್ಲಾ ಸವಲತ್ತು ಇದ್ದರೂ ಗಂಡನಿಲ್ಲದೇ ಒಬ್ಬಂಟಿಯಾಗಿದ್ದಾಳೆ. ಈಕೆಗೆ ನ್ಯಾಯ ಭಾರತದಲ್ಲಿ ಮರೀಚಿಕೆ ಇನ್ನು ಕುವೈತ್ ನಲ್ಲೇ ತನ್ನ ಹೋರಾಟ ಮುಂದುವರೆಸಿ ನ್ಯಾಯ ಸಿಗುತ್ತೋ ಕಾದು ನೋಡಬೇಕಾಗಿದೆ.

Comments are closed.