ಕರಾವಳಿ

ದನವನ್ನು ಜೀವಂತವಾಗಿ ಹೂತು ಹಾಕಿದ ಕಟುಕ : ಕುಂದಾಪುರದಲ್ಲೊಂದು ಅಮಾನವೀಯ ಘಟನೆ; ಆರೋಪಿ ಅಂದರ್ (updated)

Pinterest LinkedIn Tumblr

Kundapura_Crime_1

ಕುಂದಾಪುರ, ಜೂನ್.1: ತೋಟಕ್ಕೆ ನುಗ್ಗಿದ ದನವೊಂದನ್ನು ಜೀವಂತವಾಗಿ ಹೂತು ಹಾಕಿದ ಅಮಾನವೀಯ ಘಟನೆಯೊಂದು ಮಂಗಳವಾರ ಸಂಜೆ ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ.

 

ಘಟನೆ ವಿವರ : ಕುಂದಬಾರಂದಾಡಿ ನಿವಾಸಿ ಶ್ರೀಮತಿ ಲಕ್ಷ್ಮೀ ಪೂಜಾರಿ ಎಂಬವರ ದನವೊಂದು ಪ್ರತಿದಿನ ಹುಲ್ಲು ಮೇಯಲು ಬಿಟ್ಟಾಗ ಮನೆಯ ಪಕ್ಕದಲ್ಲೇ ಇರುವ ಸ್ಥಳೀಯ ನಿವಾಸಿ ಕೃಷಿಕ ಪರಮೇಶ್ವರ ಗಾಣಿಗ ಎಂಬವರ ತೋಟಕ್ಕೆ ಹೋಗುತ್ತಿತ್ತು. ನಿನ್ನೆ ಸಂಜೆ ಕೂಡ ಎಂದಿನಂತೆ ಪರಮೇಶ್ಚರ ಅವರ ತೋಟದತ್ತ ತೆರಳಿದ ದನ ಸಂಜೆಯಾದರೂ ಮನೆಗೆ ಹಿಂತಿರುಗಿ ಬರಲಿಲ್ಲ. ಇದರಿಂದ ಸಂಶಯಗೊಂಡ ಲಕ್ಷ್ಮೀ ಪೂಜಾರಿಯವರು ತಮ್ಮ ಮನೆಯವರು ಹಾಗೂ ಕೆಲವು ಸ್ಥಳೀಯ ವ್ಯಕ್ತಿಗಳೊಂದಿಗೆ ಪರಮೇಶ್ಚರ್ ಅವರ ತೋಟಾದಲ್ಲಿ ಹುಡುಕಾಟ ನಡೆಸಿದ್ದಾರೆ.

ಈ ಸಂದರ್ಭ ತೋಟದ ಒಂದು ಪ್ರದೇಶದಲ್ಲಿ ಮಣ್ಣು ತೇವಾವಾಗಿರುವುದು ಕಂಡು ಬಂದಿದ್ದು, ತಕ್ಷಣ ಅ ಸ್ಥಳವನ್ನು ಅಗೆಯಲಾಗಿದೆ. ಸ್ವಲ್ಪ ಅಗೆಯುವವಾಗಲೇ ಅ ಸ್ಥಳದಲ್ಲಿ ಜೀವಂತವಾಗಿ ಹೂತು ಹಾಕಲಾಗಿದ್ದ ದನ ಜೀವನ್ಮರಣ ಸ್ಥಿತಿಯಲ್ಲಿ ಪತ್ತೆಯಾಗಿದೆ. ದನವನ್ನು ಕೆಲವೇ ಹೊತ್ತುಗಳ ಮೊದಲು ಹೆಚ್ಚು ಆಳವಿರದ ಹೊಂಡದಲ್ಲಿ ಹೂತು ಹಾಕಿದ್ದರಿಂದ ದನ ಜೀವಂತವಾಗಿಯೇ ಇತ್ತು. ಆದರೆ ಮೇಲೆತ್ತುವ ಸಂದರ್ಭ ಉಸಿರಾಡಲು ಹೆಣಗಾಡುತ್ತಿದ್ದ ದನ ಮೇಲೆತ್ತಿದ್ದ ಕೆಲವೇ ಕ್ಷಣಗಳ ಬಳಿಕ ಅಸು ನೀಗಿದೆ.

ಆಗಾಗ ತೋಟಕ್ಕೆ ಬರುತ್ತಿದ್ದ ದನಕ್ಕೆ ಮೊದಲೇ ಉರುಳು ರೆಡಿ ಮಾಡಿಟ್ಟಿದ್ದ ಆರೋಪಿ ಪರಮೇಶ್ವರ ಗಾಣಿಗ ಉರುಳಿಗೆ ಬಿದ್ದ ದನವನ್ನು ಜೀವಂತವಾಗಿ ಹೂತು ಹಾಕಿದ್ದಾನೆ ಎನ್ನಲಾಗಿದ್ದು, ಬಳಿಕ ಅ ದನವನ್ನು ಅಲ್ಲಿಂದ ಜೀವಂತವಾಗಿ ಸಾಗಿಸುವ ಯೋಜನೆ ಹಾಕಿದ್ದ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

Kundapura_Crime_2 Kundapura_Crime_3 Kundapura_Crime_4 Kundapura_Crime_5 Kundapura_Crime_7 Kundapura_Crime_8 Kundapura_Crime_9 Kundapura_Crime_10 Kundapura_Crime_11 Kundapura_Crime_12 Kundapura_Crime_13 Kundapura_Crime_14 Kundapura_Crime_16 Kundapura_Crime_17 Kundapura_Crime_18

ಈ ಪ್ರಕರಣದಿಂದ ಸ್ಥಳದಲ್ಲಿ ಸ್ವಲ್ಪ ಹೊತ್ತು ಬಿಗುವಿನ ವಾತಾವರಣ ಸೃಷ್ಠಿಯಾಗಿದ್ದು, ಈ ಸಂದರ್ಭ  ಸ್ಥಳೀಯರು ಆಕ್ರೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಬಳಿಕ ದನವನ್ನು ಮರಣ್ಣೋತ್ತರ ಪರೀಕ್ಷೆಗೊಳಪಡಿಸಲು ಕೊಡೊಯ್ಯಲಾಗಿದ್ದು, ಇಂದು ಬೆಳಿಗ್ಗೆ ಪೊಲೀಸರು ಸಾರ್ವಜನಿಕರ ಸಹಕಾರದೊಂದಿಗೆ ದನದ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಿರುದ್ಧ ಪ್ರಾಣಿ ಹಿಂಸೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಮುಗಿಲು ಮುಟ್ಟಿದ ಬಡ ಮಹಿಳೆಯ ರೋಧನ : ಸಾರ್ವಜನಿಕರಿಂದ ಧನ ಸಹಾಯ

ಹೈನುಗಾರಿಕೆಯಲ್ಲಿ ತೊಡಗಿದ್ದ ಬಡ ಮಹಿಳೆ ಲಕ್ಷ್ಮೀ ಪೂಜಾರಿಯವರ ಈ ದನ ಕೆಲವು ದಿನಗಳ ಹಿಂದೆಯಷ್ಟೇ ಕರುವಿಗೆ ಜನ್ಮ ನೀಡಿದ್ದು, ಇದೀಗ ಹಾಲು ಕೊಡಲ ಆರಂಭಿಸಿದೆ. ಹೈನುಗಾರಿಕೆ ನಡೆಸುವ ಉದ್ದೇಶದಿಂದ ಈ ದನವನ್ನು ಖರೀದಿ ಮಾಡಲಾಗಿದ್ದು, ಇದೀಗ ಕುಟುಂಬ ನಿರ್ವಾಹಣೆಗೆ ಅಧಾರ ಸ್ಥಂಭವಾಗಿದ್ದ ಈ ದನದ ಸಾವಿನಿಂದ ಕಂಗೆಟ್ಟ ಲಕ್ಷ್ಮೀ ಪೂಜಾರಿಯವರ ರೋಧನೆ ಮುಗಿಲು ಮುಟ್ಟಿದೆ.

ಕುಟುಂಬ ನಿರ್ವಾಹಣೆಯಲ್ಲಿ ಪ್ರಮುಖವಾಗಿದ್ದ ದನವನ್ನು ಕಳೆದುಕೊಂಡು ಚೀರಾಡುತ್ತಿದ್ದ ಮಹಿಳೆಯ ಕಣ್ಣೀರಿಗೆ ಕರಗಿದ ಕೆಲವು ಸ್ಥಳೀಯ ವ್ಯಕ್ತಿಗಳು ಹಣ ಸಂಗ್ರಹ ಮಾಡಿ ಸುಮಾರು ರೂ.12650/- ಅನ್ನು ಹೊಸ ದನ ಖರೀದಿಸುವಂತೆ ಹೇಳಿ ಲಕ್ಷ್ಮೀ ಪೂಜಾರಿಯವರಿಗೆ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇನ್ನು ಮರಣೋತ್ತರ ಪರೀಕ್ಷೆ ನಡೆದ ಬಳಿಕ ಹಸುವನ್ನು ಹೂಳಲು ಸಹಕಾರ ಸಿಗದೇ ಇದ್ದಾಗ ಗಂಗೊಳ್ಳಿ ಪೊಲೀಸರೇ ಈ ಕೆಲಸಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆದರು.

ಹೆಚ್ಚಿನ ವಿವರ…

ಆರೋಪಿ ಗಂಗಪ್ಪ ಅಂದರ್..!
ಇನ್ನು ಹಸುವು ಉರುಳಿಗೆ ಸಿಕ್ಕು ಸಾವನ್ನಪ್ಪಿದೆಯೆನ್ನಲಾಗಿದ್ದು ಆ ಹಸುವನ್ನು ದಫನ್ ಮಾಡಲು ಮಾಲೀಕರ ಅಣತಿಯಂಯೆ ಕೆಲಸದಾಳು ಗಂಗಪ್ಪ ಅಲ್ಲಏ ಸಮೀಪದಲ್ಲಿ ಹೊಂದ ತೆಗೆದು ಹೂತಿದ್ದನೆನ್ನಲಾಗಿದೆ. ಹಸುವಿನ ಮಾಲೀಕರು ನೀಡಿದ ದೂರಿನನ್ವಯ ಗಂಗಪ್ಪನನ್ನು ಈಗಾಗಲೆ ಗಂಗೊಳ್ಳಿ ಪೊಲೀಸರು ಬಂಧಿಸಿದ್ದುೀ ವೇಳೆ ಈತನಿಗೆ ಸಹಕರಿಸಿದರೆನ್ನಲಾದ ಇತರೇ ಕೆಲಸಗಾರರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.

Hakladi_Gangappa_Arest

(ಆರೋಪಿ ಗಂಗಪ್ಪ)

ಇನ್ನು ತನ್ನದೇ ತೋಟವಾದರೂ ಕೂಡ ಬೇಜವಬ್ದಾರಿ ವರ್ತನೆ ತೋರಿದ ತೋಟದ ಮಾಲೀಕನ ವಿರುದ್ಧ ಯಾವ ಕೇಸು ಆಗಿಲ್ಲವೆನ್ನಲಾಗಿದೆ.

Comments are closed.