ಅಂತರಾಷ್ಟ್ರೀಯ

ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿಗೆ ಹೋಗಬೇಡಿ….ಮನೆ ಮದ್ದುಗಳನ್ನು ಬಳಸಿ ಆರೋಗ್ಯವಂತರಾಗಿ

Pinterest LinkedIn Tumblr

21

ಭಾರತೀಯರು ಮೊದಲಿನಿಂದಲೂ ಮನೆ ಮದ್ದು ಬಳಸುವಲ್ಲಿ ಹೆಸರುವಾಸಿ. ಸಣ್ಣ ಪುಟ್ಟ ಸಮಸ್ಯೆಗಳಿಗೆ ವೈದ್ಯರ ಬಳಿಗೆ ಹೋಗುವ ಬದಲು ಮನೆ ಮದ್ದುಗಳನ್ನು ಬಳಸುವುದು ಪರಂಪರಾಗತವಾಗಿ ಬಂದಿರುವ ಸಂಪ್ರದಾಯ. ಈ ಎಲ್ಲಾ ಮನೆ ಮದ್ದುಗಳು ಸುಲಭವಾಗಿ ಸಿಗುತ್ತವೆ. ಅದರಲ್ಲೂ ಬಹುತೇಕ ಮನೆಮದ್ದು ಅಡುಗೆ ಮನೆಯಲ್ಲೇ ಲಭ್ಯ.

ಇಂದಿಗೂ ಹಲವು ಮಂದಿ ಮನೆಮದ್ದು ಬಳಕೆಯಲ್ಲಿ ಸದಾ ಮುಂದು. ಈ ಮನೆ ಮದ್ದುಗಳು ವೈದ್ಯ ಲೋಕವನ್ನು ಅಚ್ಚರಿಗೊಳಿಸುವ ಹಳ್ಳಿ ಮದ್ದಿನ ಕಮಾಲು ಸಹ ಅಚ್ಚರಿಯೇ.

ನೂರಾರು ವರ್ಷಗಳಿಂದ ಬಳಸುತ್ತಿರುವ ಕೆಲ ಮದ್ದುಗಳು ಹೀಗಿದೆ. ರೋಸ್ಮರಿ ಹೂವು ಮನೆ ಮದ್ದಾಗಿ ಬಳಕೆಯಲ್ಲಿದೆ. ರೋಸ್ಮರಿ ಹೂವು ಅಥವಾ ಎಲೆಗಳಿಂದ ತಯಾರಾದ ಟೀ ಕುಡಿಯುವ ಮೂಲಕ ಸ್ನಾಯುಗಳ ನೋವು, ಸೆಳೆತ ಕಡಿಮೆಯಾಗುವುದು ಹಾಗೂ ರಕ್ತ ಪರಿಚಲನೆಯೂ ಉತ್ತಮಗೊಳ್ಳುತ್ತದೆ. ಅಲ್ಲದೇ ದೇಹದ ಕಲ್ಮಶಗಳನ್ನು ಹೊರ ಹಾಕಲು ನೆರವಾಗುತ್ತದೆ.

ಹಸಿ ಶುಂಠಿ ಸಹ ಒಂದು ಉತ್ತಮ ಮನೆ ಮದ್ದಾಗಿದೆ. ಹಸಿ ಶುಂಠಿ ಉತ್ತಮ ಉರಿಯೂತ ನಿವಾರಕವಾಗಿದ್ದು, ಹತ್ತು ಹಲವು ರೀತಿಯಲ್ಲಿ ಆರೋಗ್ಯಕ್ಕೆ ಪೂರಕವಾಗಿದೆ. ಪ್ರಮುಖವಾಗಿ ಜೀರ್ಣಶಕ್ತಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಆಗಾಗಿ ಟೀಯಲ್ಲಿ ಶುಂಠಿ ಸೇವಿಸಿ ಕುಡಿಯುವುದು ಒಳ್ಳೆಯದು. ಆಹಾರದಲ್ಲೂ ಶುಂಠಿ ಬಳಕೆ ಒಳ್ಳೆಯದು.

ನೀಲಗಿರಿ ಎಣ್ಣೆ,
ಗಂಟಲ ಬೇನೆ, ಜ್ವರ, ಕೆಮ್ಮು, ತಲೆನೋವು, ಮೈ-ಕೈ ನೋವು ಮೊದಲಾದ ತೊಂದರೆಗಳಿಗೆ ನೀಲಗಿರಿ ಎಣ್ಣೆ ಅತ್ಯುತ್ತಮವಾಗಿದೆ. ಎಷ್ಟೋ ಔಷಧಿಗಳಲ್ಲಿ ನೀಲಗಿರಿ ಎಣ್ಣೆಯನ್ನು ಬಳಸಲಾಗುತ್ತದೆ.

ಕಪ್ಪು ರಾಸ್ಪೆರಿ
ಈ ಹಣ್ಣಿನ ಗಿಡ‌ದ ಬೇರುಗಳು ಅತಿಸಾರವನ್ನು ನಿಲ್ಲಿಸುವಲ್ಲಿ ಅತ್ಯುತ್ತಮವಾಗಿದೆ. ಜತೆಗೆ ಕೆಮ್ಮು, ಕರುಳಿನಲ್ಲಿ ಹುಣ್ಣು ಮೊದಲಾದ ತೊಂದರೆಗಳಿಗೂ ಉತ್ತಮ ಪರಿಹಾರ ನೀಡುತ್ತವೆ.

ಯಷ್ಠಿಮಧು, ಒಂದು ಒಣಗಿದ ಬೇರಾಗಿದ್ದು, ಈ ಬೇರನ್ನು ಕುದಿಸಿ, ಕುಡಿಯುವ ಮೂಲಕ ಕೆಮ್ಮು, ಶೀತ ಗಂಟಲ ಭೇನೆ, ಮೈ-ಕೈ ನೋವು ಕಡಿಮೆಯಾಗುತ್ತದೆ. ಹಲ್ಲು ನೋವಿದ್ದರೆ ಈ ಬೇರನ್ನು ಜಗಿಯುತ್ತಾ ಇದ್ದರೆ ನೋವು ಕಡಿಮೆಯಾಗುತ್ತದೆ.

ಅದೇ ಅಲೋವೇರಾ ಅಥವಾ ಲೋಳಸರ ಪ್ರಸಿದ್ಧ ಮನೆ ಮದ್ದಾಗಿದೆ. ಲೋಳೆಸರದಿಂದ ಹಲವು ಪ್ರಯೋಜನಗಳಿವೆ. ಗಾಯ ಒಣಗಿಸಲು ಲೋಳೆಸರ ಬಳಸಲಾಗುತ್ತದೆ. ಕೀಟಗಳ ಕಡಿತಕ್ಕೂ ಇದು ಪರಿಹಾರ ನೀಡುತ್ತದೆ. ಅಲ್ಲದೆ ಲೋಳೆಸರವನ್ನು ಮುಖಕ್ಕೆ ನಿಯಮಿತವಾಗಿ ಹಚ್ಚಿದರೆ ಚರ್ಮದ ಕಾಂತಿ ಹೆಚ್ಚಿ ಮುಖ ಹೊಳಪು ಪಡೆಯುತ್ತದೆ.

Comments are closed.