ಅಂತರಾಷ್ಟ್ರೀಯ

ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಲು ಹೀಗೆ ಮಾಡಿ…

Pinterest LinkedIn Tumblr

AM049Y senior woman blowing her nose with tissue

ನೀವು ಸಹ ಕಳೆದ ಹಲವಾರು ವರ್ಷಗಳಿಂದ ಹಾಕುತ್ತಿದ್ದ ಕನ್ನಡಕವನ್ನು ತೆಗೆಯಲು ಇಷ್ಟಪಡುತ್ತೀರಾ..? ಅದಕ್ಕಾಗಿ ಕಣ್ಣಿನ ಆಪರೇಶನ್ ಮಾಡಬೇಕು ಅಥವಾ ವೈದ್ಯರ ಬಳಿ ಹೋಗಬೇಕು ಎಂದು ನೀವು ಯೋಚನೆ ಮಾಡುತ್ತಿರಬಹುದು. ಆದರೆ ಇದರ ಅಗತ್ಯ ಇಲ್ಲ. ಪೌಷ್ಟಿಕ ಆಹಾರಗಳ ಸೇವನೆ ಮತ್ತು ನಿಮ್ಮ ಜೀವನ ಶೈಲಿಯಲ್ಲಿ ಬದಲಾವಣೆ ತಂದರೆ ನಿಮ್ಮ ಕಣ್ಣಿನ ಆರೋಗ್ಯ ಕಾಪಾಡಬಹುದು.

ಕ್ಯಾರೆಟ್ : ಕ್ಯಾರೆಟ್ ಕಣ್ಣಿನ ಆರೋಗ್ಯಕ್ಕೆ ಅತ್ಯುತ್ತಮ ಆಹಾರವಾಗಿದೆ ಎಂದು ನಾವು ಕೇಳಿದ್ದೇವೆ. ಹೌದು ಇದು ವಾಸ್ತವದಲ್ಲಿ ಸತ್ಯ. ಇದನ್ನು ನೀವು ನಿಮ್ಮ ಡಯಟ್‌ನಲ್ಲಿ ಅನುಸರಿಸಬೇಕು. ಇದನ್ನು ಪ್ರತಿ ದಿನ ಸೇವನೆ ಮಾಡುವ ಮೂಲಕ ಕನ್ನಡಕದಿಂದ ಮುಕ್ತಿ ಹೊಂದಬಹುದು.

ಹಸಿರು ತರಕಾರಿಗಳು : ಲೂಟಿನ್ ಮತ್ತು ಜಿಯಾಕ್ಸ್‌ಥೀನ್ ನಮ್ಮ ಕಣ್ಣಿಗೆ ಅತ್ಯುತ್ತಮ ಆಹಾರವಾಗಿದೆ. ಇದು ಹೆಚ್ಚಾಗಿ ಹಸಿರು ತರಕಾರಿಗಳಲ್ಲಿರುತ್ತದೆ. ಇದನ್ನು ಹೆಚ್ಚಾಗಿ ಸೇವನೆ ಮಾಡುವುದರಿಂದ ಕಣ್ಣಿಗೆ ಶಕ್ತಿ ದೊರಕಿ ದೃಷ್ಟಿ ಉತ್ತಮವಾಗುತ್ತದೆ.

ಮೊಟ್ಟೆ : ಮೊಟ್ಟೆಯಲ್ಲಿ ಸಹ ಸತು ಮತ್ತು ಲೂಟಿನ್ ಹೆಚ್ಚಿನ ಪ್ರಮಾಣದಲ್ಲಿದೆ. ಇದರಿಂದ ಕಣ್ಣಿನ ಎಲ್ಲಾ ದೃಷ್ಟಿ ದೋಷ ನಿವಾರಣೆಯಾಗುತ್ತದೆ.

ನೇರಳೆ ಹಣ್ಣು : ನೇರಳೆ ಹಣ್ಣಿನಲ್ಲಿ ವಿಟಾಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿದೆ. ಇದು ಕಣ್ಣನ್ನು ರಕ್ಷಿಸುವುದರ ಜೊತೆಗೆ ಕಣ್ಣಿಗೆ ಪೊರೆ ಬರುವುದನ್ನು ಕಡಿಮೆ ಮಾಡುತ್ತದೆ.

ಬಾದಾಮ್ : ವಿಟಾಮಿನ್ ಈ ಕಣ್ಣಿನ ದೃಷ್ಟಿದೋಷ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ಕಣ್ಣಿನ ರೋಗ ಮೆಕ್ಯೂಲರ್ ಡಿಜನರೇಶನ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Comments are closed.