ಕರಾವಳಿ

ಐಕ್ಯತೆಗೆ ಬಪ್ಪನಾಡು ವಿಶ್ವಕ್ಕೆ ಮಾದರಿ : ಶ್ರೀ ಚಂದ್ರಶೇಖರ ಸ್ವಾಮೀಜಿ

Pinterest LinkedIn Tumblr

Bappanadu_temple_pic

ಮಂಗಳೂರು: ಹಿಂದೂ-ಮುಸ್ಲಿಂ ಬಾಂಧವ್ಯದ ಪ್ರತೀಕವಾದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಐಕ್ಯತೆಗಾಗಿ ವಿಶ್ವಕ್ಕೆ ಮಾದರಿಯಾಗಿದೆ, ನಮ್ಮೆಲ್ಲ ಮನಸ್ಸಿನ ಅಶಾಂತಿಯನ್ನು ಶಾಂತೀ ಸ್ವರೂಪಿಣಿಯಾಗಿ ಶ್ರೀ ದೇವಿ ಆಲಿಸಿ ನೆಮ್ಮದಿಯನ್ನು ನೀಡುತ್ತಾ, ತ್ಯಾಗ ಮನೋಭಾನೆಯನ್ನು ಹೆಚ್ಚಿಸುವಂತಾಗಬೇಕು, ಲೌಕಿಕ ಜಗತ್ತಿನಲ್ಲಿ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲರೂ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ ಜ್ಯೋತಿಷ್ಯರಾದ, ಆಧ್ಯಾತ್ಮಿಕ ಗುರುಗಳಾಗಿ ವಿಶ್ವಮಟ್ಟದಲ್ಲಿ ಧಾರ್ಮಿಕತೆಯ ಚಿಂತಕರಾಗಿರುವ ಶ್ರೀ ಚಂದ್ರಶೇಖರ ಸ್ವಾಮೀಜಿಯವರು ಹೇಳಿದರು.

ಅವರು ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ವಿಶೇಷ ಭೇಟಿ ನೀಡಿ ಮಾಧ್ಯಮದೊಂದಿಗೆ ಮಾತನಾಡಿದರು. ಸಾಮರಸ್ಯದ ನಾಡಿನ ಈ ಪವಿತ್ರವಾದ ಕ್ಷೇತ್ರವು ಅಭಿವೃದ್ಧಿ ಹೊಂದಲು ಸೇವಾಶ್ರಮದ ಮೂಲಕ ವಿಶೇಷ ಸಹಕಾರ ನೀಡಲಾಗುವುದು, ಧಾರ್ಮಿಕ ಕ್ಷೇತ್ರಗಳು ಕಾಲಕಾಲಕ್ಕೆ ಅಭಿವೃದ್ಧಿ ಹೊಂದಲು ಭಕ್ತರ ಒಮ್ಮನಸ್ಸು ಅಗತ್ಯವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರಶೇಖರ ಸ್ವಾಮೀಜಿಯವರನ್ನು ದೇವಸ್ಥಾನದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ್ ಶೆಟ್ಟಿ, ಶಾರದಮ್ಮ ಗೋವಿಂದ ಭಟ್, ಆಶ್ರಮದ ನಿರ್ದೇಶಕಿ ರಜನಿ ಸಿ. ಭಟ್, ರಾಜೇಶ್ ಭಟ್, ಸಂಚಾಲಕ ಗಿರೀಶ್ ಕಾಮತ್, ದೇವಳದ ಜೀರ್ಣೋದ್ಧಾರ ಸಮಿತಿಯ ಅರವಿಂದ ಪೂಂಜ, ನಾಗೇಶ್ ಬಪ್ಪನಾಡು, ದೇವಳದ ಅರ್ಚಕರಾದ ಶ್ರೀಪತಿ ಉಪಾಧ್ಯಾಯ, ನರಸಿಂಹ ಭಟ್, ಕೃಷ್ಣದಾಸ್ ಭಟ್, ಕೊಲಕಾಡಿ ವಾದಿರಾಜ ಉಪಾಧ್ಯಾಯ, ಶಿವಶಂಕರ್ ವರ್ಮ, ಚಂದ್ರಶೇಖರ ಸುವರ್ಣ ಇನ್ನಿತರರು ಉಪಸ್ಥಿತರಿದ್ದರು.

Comments are closed.