ಕರಾವಳಿ

ಹಳಸಿದ ಆಹಾರ ಕೊಟ್ಟ ಮಣಿಪಾಲ ಕೆ.ಎಫ್.ಸಿ.; ಗ್ರಾಹಕರ ನ್ಯಾಯಾಲಯದಿಂದ ದಂಡ

Pinterest LinkedIn Tumblr

download

ಉಡುಪಿ: ಗ್ರಾಹಕರಿಗೆ ಹಳಸಿದ ಆಹಾರ ಪೂರೈಸಿದ ರೆಸ್ಟೋರೆಂಟ್‌ಗೆ ಉಡುಪಿಯ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿದ್ದು, ಗ್ರಾಹಕರಿಗೆ ಪರಿಹಾರವನ್ನೂ ನೀಡಲು ಆದೇಶಿಸಿದೆ.

ಮಣಿಪಾಲದಲ್ಲಿ ಕಾರ್ಯಾಚರಿಸುತ್ತಿರುವ ಕೆ‌.ಎಫ್.ಸಿ ರೆಸ್ಟೋರೆಂಟ್‌ಗೆ ಒಂದೂವರೆ ವರ್ಷದ ಹಿಂದೆ ಗ್ರಾಹಕ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ಹೋಗಿ ಆಹಾರ ಆರ್ಡರ್ ಮಾಡಿದ್ದರು. ಆಹಾರ ತಿನ್ನುವಾಗ ಅದು ಹಳಸಿದ್ದು ಗೊತ್ತಾಗಿತ್ತು.

ಗುಣಮಟ್ಟದ ಆಹಾರ ನೀಡುತ್ತೇವೆಂದು ಹೇಳಿ ಹಳಸಿದ ಆಹಾರ ನೀಡಿ ವಂಚಿಸಿದ್ದಾರೆ ಎಂದು ಆಪಾದಿಸಿ ಕಿಶನ್ ಹೆಗ್ಡೆ ಅವರು ರೆಸ್ಟೋರೆಂಟ್ ವಿರುದ್ಧ ಉಡುಪಿಯ ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಈ ಬಗ್ಗೆ ವಿಚಾರಣೆ ನಡೆಸಿ ಸಾಕ್ಷ್ಯಾಧಾರ ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಕೆ‌.ಎಫ್.ಸಿ ಸಂಸ್ಥೆ ಹಳಸಿದ ಆಹಾರ ನೀಡಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಗ್ರಾಹಕರಿಗೆ 10,000 ರೂ. ಪರಿಹಾರ, 4,000 ರೂ. ಅವರ ಕೋರ್ಟ್ ಖರ್ಚು ಹಾಗೂ 1242 ರೂ. ಅವರ ವೈದ್ಯಕೀಯ ವೆಚ್ಚ ಪಾವತಿಸುವಂತೆ ಆದೇಶಿಸಿದೆ.

Comments are closed.