ಕರಾವಳಿ

ಕುಂದಾಪುರ ಮಿನಿ ವಿಧಾನಸೌಧದಲ್ಲಿ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಪ್ರಮೋದ ಮಧ್ವ್ವರಾಜ್ ಅಹವಾಲು ಸ್ವೀಕಾರ

Pinterest LinkedIn Tumblr
ಕುಂದಾಪುರ: ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ಜಿಲ್ಲೆಯ ಎಲ್ಲಾ ಇಲಾಖೆಗೆ ಭೇಟಿ ನೀಡುತ್ತಿದ್ದೇನೆ. ಸರಕಾರಿ ಇಲಾಖೆಗೆ ಬರುವ ಸಾರ್ವಜನಿಕರಲ್ಲಿ ಶೇ.70 ರಷ್ಟು ಜನ ಕಂದಾಯ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಾಗಿವೆ.  ಈ ಇಲಾಖೆಗಳಲ್ಲಿ ಸಕಾರಣವಿಲ್ಲದೇ  ಕಡತಗಳನ್ನು  ಬಾಕಿ ಉಳಿಸಿರುವ ಅಧಿಕಾರಿಗಳನ್ನು  ಅಮಾನತು ಗೊಳಿಸಲಾಗುವುದು  ಎಂದು  ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ , ಶಾಸಕ  ಪ್ರಮೋದ ಮಧ್ವ್ವರಾಜ್  ಎಚ್ಚರಿಕೆ ನೀಡಿದರು.
ಅವರು ಕುಂದಾಪುರ ಮಿನಿ ವಿಧಾನಸೌಧದಲ್ಲಿ ನಡೆದ ಅಹವಾಲು ಸ್ವೀಕಾರ ಮಾಡಿ  ಮಾತನಾಡಿದರು.
Kundapura_Pramodh Madhvaraj_Ahavalu Sweekara (2) Kundapura_Pramodh Madhvaraj_Ahavalu Sweekara (3) Kundapura_Pramodh Madhvaraj_Ahavalu Sweekara (4) Kundapura_Pramodh Madhvaraj_Ahavalu Sweekara (5) Kundapura_Pramodh Madhvaraj_Ahavalu Sweekara (6) Kundapura_Pramodh Madhvaraj_Ahavalu Sweekara (7) Kundapura_Pramodh Madhvaraj_Ahavalu Sweekara (8) Kundapura_Pramodh Madhvaraj_Ahavalu Sweekara (9) Kundapura_Pramodh Madhvaraj_Ahavalu Sweekara (10) Kundapura_Pramodh Madhvaraj_Ahavalu Sweekara (11) Kundapura_Pramodh Madhvaraj_Ahavalu Sweekara (1)
ಈಗಾಗಲೇ ಉತ್ತರ ಕನ್ನಡ,ಕೊಡಗು,ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಭೇಟಿ ನೀಡಿದ್ದು,  ಇಲ್ಲಿನ ಕಂದಾಯ ಇಲಾಖೆಯ ಕಡತಗಳಲ್ಲಿ  ಹಲವು ಸಮಯದಿಂದ ಸಮರ್ಪಕ ಕಾರಣವಿಲ್ಲದೇ ಬಾಕಿ ಉಳಿದಿವೆ. ಮುಂದಿನ ಆರು ತಿಂಗಳುಗಳೊಗೆ  ಒಂದು  ವರ್ಷಕ್ಕಿಂತ ಹಿಂದಿನ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದರು.
ಈ ಕಾರ್ಯಕ್ರಮದಲ್ಲಿ  ಕುಂದಾಪುರ ತಾ.ಪಂ. ಅಧ್ಯಕ್ಷೆ ಜಯಶ್ರೀ  ಮೊಗವೀರ, ಕುಂದಾಪುರ ಪುರಸಭಾ ಅಧ್ಯಕ್ಷೆ  ವಸಂತಿ ಸಾರಂಗ,  ಮೀನುಗಾರಿಕೆ ನಿಗಮದ  ಅಧ್ಯಕ್ಷ ಬಿ.ಹಿರಿಯಣ್ಣ,  ನಗರಾಭಿವೃದ್ಧಿ  ಪ್ರಾ್ಧಿಕಾರದ ಅಧ್ಯಕ್ಷ ಜಾಕೋಬ್  ಡಿಸೋಜಾ , ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್., ಅಪರ ಜಿಲ್ಲಾಽಕಾರಿ ಜಿ.ಅನುರಾಧಾ,  ತಾಲೂಕು ತಹಶೀಲ್ದಾರ್  ಗಾಯತ್ರಿ ನಾಯಕ್ ಹಾಗೂ  ಕಂದಾಯ  ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ  ತಾಲೂಕು ವ್ಯಾಪ್ತಿಯಲ್ಲಿ ಆಗಮಿಸಿದ ಸಾರ್ವಜನಿಕರ  ಅಹವಾಲುಗಳನ್ನು  ಸ್ವಿಕರಿಸಿದರು.

Comments are closed.