ಕರಾವಳಿ

16 ಗಂಟೆ ಓದುತ್ತಿದ್ದ ಕಾರ್ಕಳ ನಿಟ್ಟೆಯ ನೇಹಾ ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ

Pinterest LinkedIn Tumblr

ಉಡುಪಿ: ಬುಧವಾರ ಪ್ರಕಟಗೊಂಡಿರುವ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶದಲ್ಲಿ ವಿಜ್ಞಾನ ವಿಭಾಗದಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆಯ ನೇಹಾ.ಡಿ.ಶೆಟ್ಟಿ ರಾಜ್ಯಕ್ಕೇ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

PUC_Karkala_Topper (2) PUC_Karkala_Topper (1)

600 ಅಂಕಗಳ ಪೈಕಿ 595 ಅಂಕಗಳಿಸಿರುವ ನೇಹಾ ಕಾರ್ಕಳದ ಗಣಿತ ನಗರದಲ್ಲಿರುವ ಜ್ಞಾನ ಸುಧಾ ಪದವಿಪೂರ್ವಕಾಲೇಜಿನ ವಿದ್ಯಾರ್ಥಿನಿ. ದಯಾನಂದಶೆಟ್ಟಿ ಹಾಗೂ ಸವಿತಾ ಅವರ ಪ್ರಥಮ ಪುತ್ರಿಯಾಗಿರುವ ನೇಹಾ ಸಾಧನೆಗೆ ಹೆತ್ತವರು ಹೆಮ್ಮೆ ಪಟ್ಟಿದ್ದಾರೆ. ದಿನಕ್ಕೆ 16 ಗಂಟೆಗಳ ಕಾಲ ಓದಿಗಾಗಿ ಮೀಸಲಿಡುತ್ತಿದ್ದ ನೇಹಾ ಈ ಸಾಧನೆಗೆ ಕಾರಣವಾಗಿದೆ.

ಮುಂದೆ ಕೆಮಿಕಲ್ ಇಂಜಿನಿಯರ್ ಆಗುವ ಕನಸು ಹೊತ್ತಿರುವ ನೇಹಾಗೆ ಇಡೀ ಕುಟುಂಬ ಬೆಂಬಲಕ್ಕೆ ನಿಂತಿದೆ.

Comments are closed.