ಕರಾವಳಿ

ದುಬಾಯಿಯಲ್ಲಿ ನಡೆದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ; ಭಕ್ತಿ ಪರವಶರಾದ ಭಕ್ತ ಸಮೂಹ

Pinterest LinkedIn Tumblr

Sathyanarayana pooje dubai-May22-2016-012

ಶ್ರೀ ಸತ್ಯನಾರಾಯಣ ಪೂಜಾ ಸಮಿತಿ, ದುಬಾಯಿ ಯು.ಎ.ಇ. ಆಶ್ರಯದಲ್ಲಿ 2016 ಮೇ 20 ತಾರೀಕು ಶುಕ್ರವಾರ ಸಂಜೆ 4.30 ಗಂಟೆಗೆ ದುಬಾಯಿ ಅಲ್ ಸಫಾದಲ್ಲಿರುವ ಜೆ.ಎಸ್.ಎಸ್. ಪ್ರವೈಟ್ ಸ್ಕೂಲ್ ಸಭಾಂಗಣದಲ್ಲಿ 8ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ವಿದ್ಯುಕ್ತವಾಗಿ ನೆರವೇರಿತು.

Sathyanarayana pooje dubai-May22-2016-001

Sathyanarayana pooje dubai-May22-2016-002

Sathyanarayana pooje dubai-May22-2016-003

Sathyanarayana pooje dubai-May22-2016-004

Sathyanarayana pooje dubai-May22-2016-005

Sathyanarayana pooje dubai-May22-2016-006

Sathyanarayana pooje dubai-May22-2016-007

Sathyanarayana pooje dubai-May22-2016-008

Sathyanarayana pooje dubai-May22-2016-009

Sathyanarayana pooje dubai-May22-2016-010

Sathyanarayana pooje dubai-May22-2016-011

ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ವಿವಿಧ ಸಮುದಾಯ ಸಂಘಟನೆಯ ಸಹಕಾರದೊಂದಿಗೆ ನಡೆದ ಶ್ರೀ ಸತ್ಯನಾರಾಯಣ ಪೂಜೆ ಶ್ರೀ ರಘುರಾಜ್ ಭಟ್ ರವರ ಪೌರೋಹಿತ್ಯದಲ್ಲಿ ನಡೆಯಿತು. ಪೂಜಾಕಾರ್ಯದಲ್ಲಿ ಸರ್ವರ ಪರವಾಗಿ ಶ್ರೀ ಸತೀಶ್ ಉಳ್ಳಾಲ್ ಮತ್ತು ಶ್ರೀಮತಿ ಜಯಂತಿ ಉಳ್ಳಾಳ್ ದಂಪತಿಗಳು ಭಾಗವಹಿಸಿ ಪೂಜೆಯನ್ನು ಸಲ್ಲಿಸಿದರು.

Sathyanarayana pooje dubai-May22-2016-013

Sathyanarayana pooje dubai-May22-2016-014

Sathyanarayana pooje dubai-May22-2016-015

Sathyanarayana pooje dubai-May22-2016-016

Sathyanarayana pooje dubai-May22-2016-017

Sathyanarayana pooje dubai-May22-2016-018

Sathyanarayana pooje dubai-May22-2016-019

Sathyanarayana pooje dubai-May22-2016-020

Sathyanarayana pooje dubai-May22-2016-021

Sathyanarayana pooje dubai-May22-2016-022

Sathyanarayana pooje dubai-May22-2016-023

Sathyanarayana pooje dubai-May22-2016-024

ಬಾಲ ಭಜನಾ ಮಂಡಳಿ ಪುಟ್ಟ ಮಕ್ಕಳ ತಂಡದಿಂದ ಭಜನೆ ಪ್ರಾರಂಭವಾಗಿ ವಿವಿಧ ಸಮುದಾಯಗಳಿಂದ ಪ್ರತಿನಿಧಿಸಿದ್ದ ಭಜನಾ ತಂಡದವರಿಂದ ಗಾಯಕರು ಸುಶ್ರಾವ್ಯ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀ ರಾಘವೇಂದ್ರ ಏರ್ಮಾಲ್ ಹಾರ್ಮೋಣಿಯಂ ಮತ್ತು ತಬಲಾ ಸಾಥ್ ನಲ್ಲಿ ಶ್ರೀ ರಾಜೇಶ್ ಕುತ್ತಾರ್ ಸಹಕರಿಸಿದ್ದು, ಶ್ರೀ ಬಿ. ಎಂ. ದಿನೇಶ್ ಆಚಾರ್ ತಂಡ ಜವಬ್ಧಾರಿಯನ್ನು ವಹಿಸಿದ್ದರು. ಇಸ್ಕಾನ್ ದುಬಾಯಿ – ಹರೇ ರಾಮ ಹರೇ ಕೃಷ್ಣ – ಗೌರಂಗಾದೇಶ್ ಅಧ್ಯಕ್ಷರಾದ ಶ್ರೀ ವಲ್ಲಭ ದಾಸ್ ಪ್ರಭು ಮತ್ತು ತಂಡದವರಿಂದ ಭಜನೆ, ಕೀರ್ತನೆ ನೃತ್ಯ ಸರ್ವ ಭಕ್ತಾಧಿಗಳನ್ನು ಭಕ್ತಿ ಪರವಶಗೊಳ್ಳುವಂತೆ ಮಾಡಿತ್ತು.

ಮಹಾಮಂಗಾಳಾರತಿಯ ನಂತರ ಸುವಾಸಿಯರಿಗೆ ಬಾಗಿನ ಸಮರ್ಪಣೆ ನಡೆಯಿತು. ಭಕ್ತಾಧಿಗಳು ತೀರ್ಥ ಪ್ರಸಾದ, ಸಪಾತ ಭಕ್ಷ್ಯ ಸ್ವೀಕರಿಸಿದ ನಂತರ ಮಹಾಪ್ರಸಾದವನ್ನು ಸ್ವೀಕರಿಸಿದರು.

Sathyanarayana pooje dubai-May22-2016-025

Sathyanarayana pooje dubai-May22-2016-026

Sathyanarayana pooje dubai-May22-2016-027

Sathyanarayana pooje dubai-May22-2016-028

Sathyanarayana pooje dubai-May22-2016-029

Sathyanarayana pooje dubai-May22-2016-030

Sathyanarayana pooje dubai-May22-2016-031

Sathyanarayana pooje dubai-May22-2016-032

Sathyanarayana pooje dubai-May22-2016-033

Sathyanarayana pooje dubai-May22-2016-034

Sathyanarayana pooje dubai-May22-2016-035

Sathyanarayana pooje dubai-May22-2016-036

Sathyanarayana pooje dubai-May22-2016-037

Sathyanarayana pooje dubai-May22-2016-038

ಸಭಾಕಾರ್ಯಕ್ರಮದಲ್ಲಿ ಇಸ್ಕಾನ್ ದುಬಾಯಿ – ಹರೇ ರಾಮ ಹರೇ ಕೃಷ್ಣ – ಗೌರಂಗಾದೇಶ್ ತಂಡದ ಮುಖ್ಯಸ್ಥರಾದ ಶ್ರೀ ವಲ್ಲಭ ದಾಸ್ ಪ್ರಭು ಮತ್ತು ವೇದಿಕೆಯಲ್ಲಿ ಸುಂದರ ಅಲಂಕೃತ ಮಂಟಪ ನಿರ್ಮಿಸಿದ ಶ್ರೀಯುತ ಸದಾಶಿವ ಆಚಾರ್ಯ, ಶ್ರೀ ರಾಜೇಶ್ ಕುತ್ತಾರ್, ಪೂಜಾ ಸೇವಾಕಾರ್ಯದಲ್ಲಿ ಸಹಕರಿಸಿದ ಶ್ರೀ ವರಮಾಹಲಕ್ಷ್ಮೀ ಸಮಿತಿಯ ಮುಖ್ಯಸ್ಥೆ ಶ್ರೀಮತಿ ಸುವರ್ಣಾ ಸತೀಶ್, ನಾರಾಯಣ ಸೇವಾ ಸಮಿತಿ ದುಬಾಯಿ ಮುಖ್ಯಸ್ಥರಾದ ಶ್ರೀ ಅನಿಲ್ ಕಾಮತ್ ಇವರುಗಳನ್ನು ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯವರು ಶಾಲು ಹೊದಿಸಿ ಸನ್ಮಾನಿಸ್ ಗೌರವಿಸಿದರು. ಶ್ರೀಯುತರುಗಳಾದ ವಾಸು ಶೆಟ್ಟಿ, ಸತೀಶ್ ಪೂಜಾರಿ, ವಿಶ್ವನಾಥ್ ಶೆಟ್ಟಿ, ಬಿ. ಎಂ. ದಿನೇಶ್ ಆಚಾರ್ಯ, ಬಾಲಕೃಷ್ಣ ಸಾಲಿಯನ್, ಅನಂದ್ ಸಾಲಿಯಾನ್, ಜಗ್ಗನಾಥ್ ಬೆಳ್ಳಾರೆ, ಉಪೇಂದ್ರ ರವರು ಸನ್ಮಾನ ಪ್ರಕ್ರಿಯೇಯಲ್ಲಿ ಭಾಗಿಗಳಗಿದ್ದರು.

ಶ್ರೀ ಬಿ. ಕೆ. ಗಣೇಶ್ ರೈಯವರು ಪೂಜಾ ಕಾರ್ಯದ ನಿರೂಪಣೆಯನ್ನು ನಡೆಸಿಕೊಟ್ಟರು.

ಯು.ಎ.ಇ. ಬಂಟ್ಸ್, ಬಿಲ್ಲವಾಸ್ ದುಬಾಯಿ, ವಿಶ್ವಕರ್ಮ ಸೇವಾ ಸಮಿತಿ ಯು.ಎ.ಇ. ಮೊಗವೀರ್ಸ್ ಯು.ಎ.ಇ. ಪದ್ಮಶಾಲಿ ಸಮುದಾಯ ಯು.ಎ.ಇ. ರಜಕ ಸಮಾಜ ದುಬಾಯಿ ಸಂಘಟನೆಗಳ ಪ್ರತಿನಿಧಿಗಳು ಒಟ್ಟು ಸೇರಿ ರಚಿತವಾಗಿರುವ ಶ್ರೀ ಸತ್ಯನಾರಾಯಣ ಪೂಜಾ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯರ ಪೂರ್ವಭಾವಿ ತಯಾರಿಕೆಯೊಂದಿಗೆ ಪೂಜಾಕಾರ್ಯ ಯಶಸ್ವಿಯಾಗಿ ನಡೆಯಿತು.

Comments are closed.