ಕನ್ನಡ ವಾರ್ತೆಗಳು

ಕೋಟ: ಗ್ರಾಹಕರ ಸೋಗಿನಲ್ಲಿ ಬಂದ ಆಗಂತುಕರು; ಚಿನ್ನದಂಗಡಿ ಮಾಲೀಕನಿಗೆ ಮಾರಣಾಂತಿಕ ಹಲ್ಲೆ, ದರೋಡೆ

Pinterest LinkedIn Tumblr

ಚಿತ್ರ,ವರದಿ-ಯೋಗೀಶ್ ಕುಂಭಾಸಿ
ಕುಂದಾಪುರ: ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಯೊಂದಕ್ಕೆ ಬಂದ ಅಪರಿಚಿತ ವ್ಯಕ್ತಿಗಳು ಮಾಲೀಕನಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಚಿನ್ನಾಭರಣ ದೋಚಿದ ಘಟನೆ ಉಡುಪಿಯ ಕೋಟ ಸಮೀಪದಲ್ಲಿ ಶನಿವಾರ ರಾತ್ರಿ ನಡೆದಿದೆ.

ಉಡುಪಿಯ ಕೋಟ ಬಸ್ ನಿಲ್ದಾಣ ಸಮೀಪದಲ್ಲಿರುವ ರವೀಂದ್ರ ಆಚಾರ್ಯ ಎನ್ನುವವರ ಮಾಲೀಕತ್ವದ ಶ್ರೀ ದುರ್ಗಾ ಜುವೆಲ್ಲರ್ಸ್ ಎನ್ನುವ ಅಂಗಡಿಯಲ್ಲಿ ಈ ಘಟನೆ ನಡೆದಿದೆ.

Kota_Jewellary Sp_Theft (24) Kota_Jewellary Sp_Theft (11) Kota_Jewellary Sp_Theft (10) Kota_Jewellary Sp_Theft (14) Kota_Jewellary Sp_Theft (8) Kota_Jewellary Sp_Theft (6) Kota_Jewellary Sp_Theft (9) Kota_Jewellary Sp_Theft (7) Kota_Jewellary Sp_Theft (5) Kota_Jewellary Sp_Theft (4) Kota_Jewellary Sp_Theft (3) Kota_Jewellary Sp_Theft (2) Kota_Jewellary Sp_Theft (1) Kota_Jewellary Sp_Theft (12) Kota_Jewellary Sp_Theft (13) Kota_Jewellary Sp_Theft (15) Kota_Jewellary Sp_Theft (16) Kota_Jewellary Sp_Theft (18) Kota_Jewellary Sp_Theft (23) Kota_Jewellary Sp_Theft (20) Kota_Jewellary Sp_Theft (21) Kota_Jewellary Sp_Theft (22) Kota_Jewellary Sp_Theft (19) Kota_Jewellary Sp_Theft (17)
ಆಗಿದ್ದಾದರೂ ಏನು?: ಹನಿಹನಿ ಮಳೆ ಬೀಳುವ ಸಮಯ. ಅತ್ತ ವಿದ್ಯುತ್ ಸಂಪರ್ಕ ಕಡಿತವೂ ಆಗಿತ್ತು. ಇದೇ ವೇಳೆ ಗ್ರಾಹಕರ ಸೋಗಿನಲ್ಲಿ ಶ್ರೀ ದುರ್ಗಾ ಎನ್ನುವ ಚಿನ್ನದಂಗಡಿಗೆ ಆಗಮಿಸಿದ ಅಪರಿಚಿತರು, ಚಿನ್ನದ ಆಭರಣಗಳನ್ನು ನೋಡಬೇಕೆಂದು ಮಾಲಿಕ ರವೀಂದ್ರ ಆಚಾರ್ಯ ಅವರಿಗೆ ಮನವಿ ಮಾಡಿದ್ದಾರೆ. ಅದರಂತೆಯೇ ಗ್ರಾಹಕರೆಂದುಕೊಂಡ ಮಾಲೀಕರು ಚಿನ್ನಾಭರಣ ತೋರಿಸುತ್ತಿದ್ದ ಹಾಗೆಯೇ ಅಂಗಡಿಗೆ ಬಂದಿದ್ದ ಆಗಂತುಕರು ರವೀಂದ್ರ ಅವರ ತಲೆ ಭಾಗಕ್ಕೆ ಬಲವಾಗಿ ಹೊಡೆದಿದ್ದು ಮಾತ್ರವಲ್ಲದೇ ಅಂಗಡಿಯ ಶಟರ್ ಹಾಕಿದ್ದಾರೆ. ಬಳಿಕ ಅಂಗಡಿಯೊಳಗಿದ್ದ ಆಭರಣಗಳನ್ನು ಕೊಂಡೊಯಲು ಸ್ಕೆಚ್ ರೂಪಿಸುತ್ತಿದ್ದ ವೇಳೆಯೇ ನಡೆದಿದ್ದು ಬೇರೆ.

ಪ್ರಾಣ ಉಳಿಸಿದ ಕಟ್ಟಡ ಮಾಲೀಕ..
ಕೋಟ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿಯೇ ಇದ್ದ ಕಟ್ಟಡ ಇದಾಗಿದ್ದು ಮೂರು ಅಂಗಡಿ ಕೋಣೆಗಳಿದ್ದ ಸಂಕೀರ್ಣದಲ್ಲಿ ರವೀಂದ್ರ ಅವರ ಚಿನ್ನದಂಗಡಿಯು ಒಂದಾಗಿತ್ತು. ಮೊದಲನೇ ಅಂಗಡಿ ಅಂಗಡಿ ಕಟ್ಟಡದ ಮಾಲೀಕರದ್ದಾದರೇ ಮದ್ಯದ ಅಂಗಡಿ ವೊಡಾಫೋನ್ ಸಿಮ್ ಅಂಗಡಿಯಾಗಿತ್ತು. ಅದರ ಪಕ್ಕದ ಅಂಗಡಿಯನ್ನು ಹಲವು ವರ್ಷಗಳಿಂದ ರವಿ ಅವರು ನಡೆಸುತ್ತಿದ್ದರು. ಶನಿವಾರ ರಾತ್ರಿ ಆಗಂತುಕರು ಅಂಗಡಿ ಒಳಹೊಕ್ಕು ಶಟರ್ ಮುಚ್ಚಿ ಹಲ್ಲೆ ನಡೆಸುವ ವೇಳೆ ರವೀಂದ್ರ ಆಚಾರ್ಯ ಕಿರುಚಾಡಿದ ಶಬ್ದ ಕೇಳಿ ಕಟ್ಟಡ ಮಾಲೀಕ ಪ್ರಭಾಕರ್ ಕಾಮತ್ ಓಡಿಬಂದಿದ್ದಾರೆ. ಅಷ್ಟೇ ಅಲ್ಲದೇ ಮುಚ್ಚಿದ್ದ ಚಿನ್ನದಂಗಡಿಯ ಶಟರ್ ಎತ್ತಿದ್ದಾರೆ.

ಕಾದಿತ್ತು ಶಾಕ್…..
ವಿಪರೀತ ಚೀರಾಟ ಕೇಳಿದ ಕಟ್ಟಡದ ಮಾಲೀಕ ಪ್ರಭಾಕರ್ ಕಾಮತ್ ಶ್ರೀ ದುರ್ಗಾ ಜ್ಯುವೆಲ್ಲರ್ಸ್ ಅಂಗಡಿ ಕೋಣೆಯ ಶಟರ್ ಎತ್ತುತ್ತಿದ್ದಂತೆಯೇ ಅಂಗಡಿಯೊಳಗಿದ್ದ ಮೂರ್ನಾಲ್ಕು ಜನ ಅಂಗಡಿ ಒಳಗಿನಿಂದ ಓಡಲು ಯತ್ನಿಸಿದ್ದು ಘಟನೆ ಬಗ್ಗೆ ಅರಿತ ಪ್ರಭಾಕರ್ ಕಾಮತ್ ಅವರ ಹಿಂದೆ ಓಡಿ ಆಗಂತುಕರನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೇ ಅದು ಸಾಧ್ಯವಾಗದಿದ್ದರೂ ಕೂಡ ಅಪರಿಚಿತ ವ್ಯಕ್ತಿಗಳು ಬಂದಿದ್ದರೆನ್ನಲಾದ ಬೈಕ್ ಎಂದು ಪತ್ತೆಯಾಗಿದೆ. ನಾಲ್ಕು ಜನ ದುಷ್ಕರ್ಮಿಗಳು ತಂಡದಲ್ಲಿದ್ದಾರೆನ್ನಲಾಗಿದ್ದು ಇವರೆಲ್ಲರೂ ಇಂಗ್ಲಿಷ್ ಹಾಗೂ ಹಿಂದು ಮಿಶ್ರಿತ ಭಾಷೆಯಲ್ಲಿ ಮತನಾಡುತ್ತಿದ್ದರೆನನ್ನಲಾಗಿದೆ. ಓಡಿ ಹೋಗುವ ಗಾಬರಿಯಲ್ಲಿ ಬೈಕ್ ಒಂದನ್ನು ಬಿಟ್ಟುತೆರಳುದ್ದಾರೆ.

ಕೋಟ ಎ.ಎಸ್.ಐ. ಸಮಯಪ್ರಜ್ಞೆ:
ಇಷ್ಟೆಲ್ಲಾ ಘಟನೆಯಾಗುವ ವೇಳೆ ಸಮೀಪದ ಬಸ್ಸು ತಂಗುದಾಣದಲ್ಲಿ ಕೋಟ ಎ.ಎಸ್.ಐ. ಮುಕ್ತಾಬಾಯಿ ಅವರು ನಿಂತಿದ್ದರು. ಕೊಂಚ ದೂರದಲ್ಲಿಯೇ ನಡೆಯಬಾರದ ಘಟನೆ ನಡೆಯುವ ಬಗ್ಗೆ ಅರಿತ ಅವರು ಸ್ಥಳದಲ್ಲಿಂದಲೇ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಮಾತ್ರವಲ್ಲದೇ ತಾನು ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.

ಅಲರ್ಟ್ ಆದ ಪೊಲೀಸರು:
ಇತ್ತ ಕೋಟ ಪೊಲೀಸರಿಗೆ ಮಾಹಿತಿ ಬರುತ್ತಿದ್ದಂತೆಯೇ ಸಂಪೂರ್ಣ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಈ ಬಗ್ಗೆ ಅಲರ್ಟ್ ಆಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ವಾಹನ ತಪಾಸಣೆಯನ್ನು ನಡೆಸಿದ ಇಲಾಖೆ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಿದೆ. ಅಲ್ಲದೇ ಘಟನಾ ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ನರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನವು ಕೋಟ ದೇವಳದ ಪಾರ್ಕಿಂಗ್ ಸ್ಥಳದವರೆಗೂ ಹಾಗೂ ಕಳ್ಳತನ ನಡೆದ ಮನೆಯೊಂದರ ಅಂಗಳಕ್ಕೆ ತೆರಳಿ ವಾಪಾಸ್ಸಾಗಿದೆ.

ಎಸ್ಪಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ಭೇಟಿ
ಘಟನಾ ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಕೆ. ಅಣ್ಣಾಮಲೈ ಭೇಟಿ ನೀಡಿ ನೀಡಿದ್ದಾರೆ. ಉಡುಪಿ ಡಿವೈ‌ಎಸ್ಪಿ ಕುಮಾರಸ್ವಾಮೀ, ಕುಂದಾಪುರ ಡಿವೈ‌ಎಸ್‌ಪಿ ಎಂ. ಮಂಜುನಾಥ್ ಶೆಟ್ಟಿ, ಬ್ರಹ್ಮಾವರ ವೃತ್ತ ನಿರೀಕ್ಷಕ ಅರುಣ್ ನಾಯಕ್, ಕುಂದಾಪುರ ವೃತ್ತ ನಿರೀಕ್ಷಕ ದಿವಾಕರ್ ಪಿ.ಎಂ., ಗೃಹರಕ್ಷಕದಳದ ಸೆಕೆಂಡ್ ಇನ್ ಕಮಾಂಡೇಂಟ್ ರಾಜೇಶ್ ಕೆ.ಸಿ. ಮೊದಲಾದ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

ಇರಾನಿ ಗ್ಯಾಂಗ್ ಅಥವಾ ಸ್ಥಳೀಯರೇ?
ಒಂದೆರಡು ದಿನಗಳಿಂದ ಅಲ್ಲಲ್ಲಿ ಸರಗಳ್ಳತನ ಮೊದಲಾದ ಪ್ರಕರಣಗಳು ನಡೆಯುತ್ತಿದ್ದು ಈ ಪ್ರಕರಣ ಇರಾನಿ ಗ್ಯಾಂಗ್ ಕೃತ್ಯ ಎಂಬುದಾಗಿ ಇಲಾಖೆ ಮೂಲಗಳು ಸಂಶಯ ವ್ಯಕ್ತಪಡಿಸುತ್ತಿದೆ. ಅಲ್ಲದೇ ಅಂಗಡಿಗೆ ನುಗ್ಗಿ ಏಕಾ‌ಏಕಿ ಶಟರ್ ಎಳೆದು ತಮ್ಮ ದುಷ್ಕ್ರತ್ಯ ಎಸಗಿದ್ದು ನೋಡಿದರೇ ಇದು ಫ್ರೊಪೇಶನಲ್ ಹಿನ್ನೆಲೆಯುಳ್ಳ ಆರೋಪಿಗಳೆ ಮಾಡಿದ ಕೃತ್ಯವೆನ್ನಲಾಗುತ್ತಿದೆಯಾದರೂ ಇವರಿಗೆ ರವೀಂದ್ರ ಆಚಾರ್ಯ ಅಂಗಡಿ ಬಗ್ಗೆ ಮಾಹಿತಿಯನ್ನು ಕೆಲವು ಸ್ಥಳೀಯ ಮಹಿತಿಧಾರರೇ ನೀಡಿರಬೇಕೆಂಬ ಸಂಶವೂ ಸದ್ಯ ಮೂಡಿದೆ.

ಕೋಟ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Comments are closed.