ಅಂತರಾಷ್ಟ್ರೀಯ

ಜೂನ್ 7 ರಂದು 2 ದಿನಗಳ ಕಾಲ ಅಮೆರಿಕಾಕ್ಕೆ ಭೇಟಿ ನೀಡಲಿರುವ ಮೋದಿ

Pinterest LinkedIn Tumblr

modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರ ಆಹ್ವಾನದ ಮೇರೆಗೆ ಜೂನ್ 7 ರಂದು 2 ದಿನಗಳ ಕಾಲ ವಾಷಿಂಗ್‌ಟನ್ ಡಿಸಿಗೆ ಭೇಟಿ ನೀಡಲಿದ್ದಾರೆ.

ಎರಡು ದಿನಗಳ ಭೇಟಿಯಲ್ಲಿ ಅಮೆರಿಕಾದ ಜಂಟಿ ಸಂಸತ್ ಉದ್ದೇಶಿಸಿ ಮಾತನಾಡಲಿದ್ದು, ಇದೇ ಸಂದರ್ಭದಲ್ಲಿ ಭಾರತ ಹಾಗೂ ಅಮೆರಿಕಾ ನಡುವೆ ಆರ್ಥಿಕ ವ್ಯವಸ್ಥೆ, ಇಂಧನ, ಪರಿಸರ, ರಕ್ಷಣೆ ಹಾಗೂ ಮುಂತಾದ ವಿಷಯಗಳ ದ್ವಿಪಕ್ಷೀಯ ಬಾಂಧವ್ಯದ ಕುರಿತು ಚರ್ಚಿಸಲಿದ್ದಾರೆ’ ಎಂದು ವಿದೇಶಾಂಗ ಇಲಾಖೆ ಪ್ರಕಟಣೆ ತಿಳಿಸಿದೆ.

ಜೂನ್ 4 ರಂದು ಕತಾರ್ ಭೇಟಿ ನೀಡಲಿದ್ದು, ಅಲ್ಲಿಂದ ಅಮೆರಿಕಾಕ್ಕೆ ತೆರಳಲಿದ್ದಾರೆ. ಅಮೆರಿಕಾದ ಜಂಟಿ ಸಂಸತ್ ಉದ್ದೇಶಿಸಿ ಮಾತನಾಡುತ್ತಿರುವ ಭಾರತದ ಐದನೇ ಪ್ರಧಾನಿ ಮೋದಿಯಾಗಿದ್ದಾರೆ.

ಇದಕ್ಕೂ ಮೊದಲು 1985, ಜುಲೈ 13 ರಲ್ಲಿ ರಾಜೀವ್ ಗಾಂಧಿ, 1994 ಮೇ 18 ರಂದು ಪಿ.ವಿ. ನರಸಿಂಹರಾವ್, ಸೆಪ್ಟಂಬರ್ 14, 2000ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಜುಲೈ 19, 2005 ರಂದು ಮನಮೋಹನ್ ಸಿಂಗ್ ಅಮೆರಿಕಾದ ಸಂಸತ್‌ನಲ್ಲಿ ಭಾಷಣ ಮಾಡಿದ್ದರು.

ಎರಡು ದಿನಗಳ ಪ್ರವಾಸದಲ್ಲಿ ಅಮೆರಿಕಾದ ಪ್ರಮುಖ ಕಂಪನಿಗಳ ಸಿಇಒಗಳ ಜೊತೆ ನೇರ ಸಂವಾದ ನಡೆಸಲಿದ್ದಾರೆ.

Comments are closed.