ಕರಾವಳಿ

ಮತ್ತೆ ಪೆಟ್ರೋಲ್ – ಡೀಸೆಲ್ ದರ ಏರಿಕೆ; ಪೆಟ್ರೋಲ್ ಬೆಲೆ 83 ಪೈಸೆ, ಡೀಸೆಲ್ ದರ 1.26 ರು. ಏರಿಕೆ

Pinterest LinkedIn Tumblr

petrol-aaa

ನವದೆಹಲಿ: ಕೇವಲ ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಏರಿಕೆಯಾಗಿದ್ದು, ಪೆಟ್ರೋಲ್ ದರ 83 ಪೈಸೆ ಮತ್ತು ಡೀಸೆಲ್ ದರ 1.26 ರು. ಏರಿಕೆಯಾಗಿದೆ.

ಭಾರತಕ್ಕೆ ಕಚ್ಚಾ ತೈಲ ರವಾನೆ ಮಾಡುತ್ತಿದ್ದ ಇರಾನ್ ನ ತೈಲೋತ್ಪನ್ನ ಸಂಸ್ಥೆಗಳು ರವಾನೆ ಶುಲ್ಕ ವಿನಾಯಿತಿ ತೆರವುಗೊಳಿಸಿದ ಹಿನ್ನಲೆಯಲ್ಲಿ ಭಾರತೀಯ ತೈಲೋತ್ಪನ್ನ ಸಂಸ್ಥೆಗಳೇ ರವಾನೆ ಶುಲ್ಕ ಪಾವತಿ ಮಾಡಬೇಕಿದೆ. ಇನ್ನು ಪೆಟ್ರೋಲ್ ಶುಲ್ಕವನ್ನು ಅಮೆರಿಕ ಡಾಲರ್ ದರದಲ್ಲಿ ನೀಡುವಂತೆ ತೈಲ ಕಂಪನಿಗಳು ಭಾರತೀಯ ಸಂಸ್ಕರಣಾ ಕಂಪನಿಗಳಿಗೆ ಸೂಚಿಸಿದ್ದವು. ಇದು ಪೆಟ್ರೋಲ್ ದರ ಏರಿಕೆ ಮೇಲೆ ಪರಿಣಾಮ ಬೀರಿದ್ದು, ಇದಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಕಂಡಿರುವುದು ಕೂಡ ಬೆಲೆ ಏರಿಕೆಗೆ ಕಾರಣ ಎಂದು ಹೇಳಲಾಗುತ್ತಿದೆ.

ತಿಂಗಳ ಹಿಂದಷ್ಟೇ ತೈಲೋತ್ಪನ್ನ ಸಂಸ್ಥೆಗಳು ಪೆಟ್ರೋಲ್ ದರ ಏರಿಕೆ ಮಾಡಿದ್ದವು. ಮೇ 1ರಂದು ಪೆಟ್ರೋಲ್ 1.6 ರೂ., ಡೀಸೆಲ್ 2.94 ರೂ. ಏರಿಕೆಯಾಗಿತ್ತು. ಇದೀಗ ಮತ್ತೆ 2ನೇ ಬಾರಿಗೆ ಪೆಟ್ರೋಲ್ ದರ ಏರಿಕೆಯಾಗಿರುವುದು ಗ್ರಾಹಕರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ನೂತನ ಪರಿಷ್ಕೃತ ದರ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.

Write A Comment