ಕರಾವಳಿ

ಶೈಖುನಾ ಆನಕ್ಕರ ಸಿ.ಕೋಯಕುಟ್ಟಿ ಮುಸ್ಲಿಯಾರ್(81) ವಫಾತ್ : ಕೆ ಐ ಸಿ ಸಂತಾಪ

Pinterest LinkedIn Tumblr

koyakkutti_musliyar

ಪ್ರಮುಖ ವಿದ್ವಾಂಸರೂ, ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಅಧ್ಯಕ್ಷರಾದ ಶೈಖುನಾ ಆನಕ್ಕರ ಸಿ.ಕೋಯಕುಟ್ಟಿ ಮುಸ್ಲಿಯಾರ್(81) ನಿನ್ನೆ ರಾತ್ರಿ 9.45ಕ್ಕೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಕಳೆದ ಕೆಲವು ಸಮಯದಿಂದ ಅಸ್ವಸ್ಥರಾಗಿದ್ದರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಶೈಖುನಾ ಆನಕ್ಕರ ಸಿ.ಕೋಯಕುಟ್ಟಿ ಮುಸ್ಲಿಯಾರ್ ರವರು ಸಮಸ್ತ ಕೇರಳ ವಿದ್ಯಾಭ್ಯಾಸ ಬೋರ್ಡ್ ಎಕ್ಸಿಕ್ಯುಟಿವ್ ಸದಸ್ಯರೂ, ಸಮಸ್ತ ಪರೀಕ್ಷಾ ಬೋರ್ಡ್, ಜಾಮಿಅಃ ನೂರಿಯಾ ಪರೀಕ್ಷಾ ಬೋರ್ಡ್, ಸಮಸ್ತ ಪಾಲಕ್ಕಾಡ್ ಜಿಲ್ಲಾ ಅಧ್ಯಕ್ಷರೂ, ಮಲಪ್ಪುರಂ ಜಿಲ್ಲಾ ಉಪಾಧ್ಯಕ್ಷರೂ, ಪೊನ್ನಾಣಿ ತಾಲೂಕು ಜಂಇಯ್ಯತುಲ್ ಉಲಮಾದ ಅಧ್ಯಕ್ಷ ಸೇರಿದಂತೆ ವಿವಿಧ ಸ್ಥಾನಗಳನ್ನು ಅವರು ಅಲಂಕರಿಸಿದ್ದರು. ಪಟ್ಟಿಕ್ಕಾಡ್ ಜಾಮಿಅಃ ನೂರಿಯಾ, ವಳಾಂಜೇರಿ ಮರ್ಕಝುತ್ತರ್‌ಬಿಯ್ಯಾತುಲ್ ಇಸ್ಲಾಮಿಯ್ಯಾ, ವಳವೂರ್ ಬಾಫಖಿ ಯತೀಂಖಾನ, ತಾನೂರು ಇಸ್ಲಾವುಲ್ ಉಲೂಂ, ದಾರುಲ್ ಹಿದಾಯ ಎಟ್ಟಪ್ಪಾಲಂ ಮುಂತಾದ ದಿನೀ ಸಂಸ್ಥೆಗಳ ಸಾರಥಿಯೂ ಹಲವಾರು ಮಹಲ್‌ಲ್ಗಳ ಖಾಝಿಯೂ ಆಗಿದ್ದರು.

1988ರಿಂದ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾದ ಮುಶಾವರ ಸದಸ್ಯರಾಗಿದ್ದ ಕೋಯಕುಟ್ಟಿ ಉಸ್ತಾದರು, 2001ರಿಂದ ಉಪಾಧ್ಯಕ್ಷರಾಗಿಯೂ 2012ರಿಂದ ಕಾಳಂಬಾಡಿ ಮುಹಮ್ಮದ್ ಮುಸ್ಲಿಯಾರ್ ಅವರ ಕಾಲನಂತರ ಸಮಸ್ತದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಮದ್ರಸಾ ಶಿಕ್ಷಣ ವ್ಯವಸ್ಥೆಯನ್ನು ರೂಪಿಕರಿಸುವುದರಲ್ಲಿ ಉಸ್ತಾದರ ಪಾತ್ರವು ಪ್ರಮುಖವಾಗಿತ್ತು. ಒ.ಕೆ. ಝೈನುದ್ದೀನ್ ಮುಸ್ಲಿಯಾರ್, ಕೆ.ಪಿ. ಮುಹಮ್ಮದ್ ಮುಸ್ಲಿಯಾರ್, ಕಣ್ಣೀಯತ್ ಅಹ್ಮದ್ ಮುಸ್ಲಿಯಾರ್, ಕುಝಪ್ಪುರಂ ಮುಹಮ್ಮದ್ ಮುಸ್ಲಿಯಾರ್, ಸಿ. ಕುಂಞಿ ಅಹ್ಮದ್ ಮುಸ್ಲಿಯಾರ್, ಶೈಖ್ ಹಸನ್ ಹಝ್ರತ್, ಆದಂ ಹಝ್ರತ್, ಕೆ.ಕೆ. ಅಬೂಬಕ್ಕರ್ ಹಝ್ರತ್, ಆನಕ್ಕರ್ ಸಿ. ಕುಂಞಿ ಮುಹಮ್ಮದ್ ಮುಸ್ಲಿಯಾರ್, ಮುಂತಾದವರು ಉಸ್ತಾದರ ಪ್ರಮುಖ ಗುರುಗಳಾಗಿದ್ದರು. ಒದುಕ್ಕಲ್ ಎಂಬಲ್ಲಿ ಎರಡು ವರ್ಷ ಮುದರ್ರಿಸರಾಗಿ ಸೇವೆಗೈದ ನಂತರ ವೆಲ್ಲೂರು ಬಾಖಿಯಾತ್ ಸ್ವಾಲಿಯಾತ್‌ಗೆ ಉನ್ನತ ಶಿಕ್ಷಣಕ್ಕಾಗಿ ತೆರಳಿದ್ದರು. ಬಾಖವಿ ಬಿರುದು ಪಡೆದ ನಂತರ ತಿರುರಂಙಾಡಿ ಕೇಂದ್ರ ಮಸೀದಿ, ಕೊಯಿಲಾಂಡಿ, ವಾಣಿಯೂರ್, ಪೊನ್‌ಮುಂಡ, ಎಡಕ್ಕುಳಂ, ಕಾರಂದೂರು ಬದ್ರಿಯಾ ಕಾಲೇಜ್, ಮುಂತಾದೆಡೆಗಳಲ್ಲಿ ಮುದರ್ರಿಸರಾಗಿ ಸೆವೆಗೈದಿದ್ದಾರೆ.

ಚಾಪನಂಙಾಡಿ ಬಾಪು ಮುಸ್ಲಿಯಾರ್, ಕೆ.ಸಿ ಜಮಾಲುದ್ದೀನ್ ಮುಸ್ಲಿಯಾರ್, ಎಂ.ಎ. ಬಶೀರ್ ಮುಸ್ಲಿಯಾರ್ ಮುಂತಾದವರ ಜೊತೆಗೂಡಿ ಸಮಸ್ತದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಸೂಫಿಸಂ ಮೂಲಕ ಮಾದರೀ ಜೀವನವನ್ನು ನಡೆಸುತ್ತಿದ್ದ ಅವರು ಆದ್ಯಾತ್ಮಿಕ ರಂಗದಲ್ಲಿ ಸಕ್ರೀಯರಾಗಿದ್ದರು. ಚಾಪನಂಙಾಡಿ ಬಾಪು ಮುಸ್ಲಿಯಾರ್, ಕಕ್ಕಡಿಪ್ಪುರಂ ಅಬೂಬಕ್ಕರ್ ಮುಸ್ಲಿಯಾರ್, ಶೈಖುಲ್ ಖಾದಿರಿ ಞಂಙಾಡಿ ಅಬೂಬಕ್ಕರ್ ಹಾಜಿ ಮುಂತಾದ ಸೂಫಿವರ್ಯರ ಆದ್ಯಾತ್ಮಿಕ ಪರಂಪರೆಯಲ್ಲಿ ಸೇರಿಕೊಂಡಿದ್ದ ಅವರು ಹಲವಾರು ಸ್ಥಳಗಳಲ್ಲಿ ಆದ್ಯಾತ್ಮಿಕ ಮಜ್ಲಿಸುಗಳಿಗೆ ನೇತೃತ್ವವನ್ನು ನೀಡುತ್ತಾ ಬಂದಿದ್ದರು.

ಇಂತಹ ಪಂಡಿತ ಪ್ರತಿಭೆಯ ವಿಯೋಗವು ಈ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದ್ದು ಸದಾ ಪಾರತ್ತ್ರಿಕಲೋಕದ ಚಿಂತಿಸುತ್ತಿದ್ದ ಗೌರವಾನ್ವಿತರು ಯುವ ಸಮೂಹಕ್ಕೆ ಮಾದರಿಯಾಗಿ ಜೀವಿಸುತ್ತಿದ್ದರು. ಸದಾ ಸಮುದಾಯವನ್ನು ಆಧ್ಯಾತ್ಮಿಕದೆಡೆಗೆ ಎಚ್ಚರಿಸುತ್ತಿದ್ದ ಅವರು ದೀನೀ ಕಾರ್ಯಗಳಲ್ಲಿ ಮುನ್ನುಗ್ಗುವಂತೆ ಯುವ ಸಮುದಾಯವನ್ನು ವಿನಂತಿಸಿಕೊಳ್ಳುತ್ತಿದ್ದ ಕೋಯಕುಟ್ಟಿ ಉಸ್ತಾದ್ ರವರ ಅಗಳುವಿಕೆಗೆ ಕರ್ನಾಟಕ ಇಸ್ಲಾಮಿಕ್ ಸೆಂಟರ್ (ಕೆ ಐ ಸಿ ) ಯು ಅತೀವ ಸಂತಾಪ ವ್ಯಕ್ತ ಪಡಿಸಿದೆ. ಶೈಖುನಾ ರವರ ವಫಾತ್ ಕುರಿತು ಸಂತಾಪ ಸೂಚಿಸಿದ ಕೆ ಐ ಸಿ ಯು ಎ ಇ ಕೇಂದ್ರ ಸಮಿತಿ ಅಧ್ಯಕ್ಷರಾದ ಮೊಹಿಯುದ್ದೀನ್ ಕುಟ್ಟಿ ಹಾಜಿ ದಿಬ್ಬ , ಕೆ ಐ ಸಿ ಸೌದಿ ಅರೇಬಿಯಾ ಅಧ್ಯಕ್ಷರಾದ ಶಾಫಿ ಕೇಕನಾಜೆ , ಕೆ ಐ ಸಿ ಖತಾರ್ ಸಮಿತಿ ಅಧ್ಯಕ್ಷರಾದ ಅಶ್ರಫ್ ಪಲ್ಲಪ್ಪಾಡಿ ಹಾಗೂ ಕೆ ಐ ಸಿ ಕುವೈಟ್ ಸಮಿತಿ ಅದ್ಯಕ್ಷರಾದ ಅಬ್ದುಲ್ ಖದರ್ ಬಪ್ಪಲಿಗೆ ರವರು ಗೌರವಾನ್ವಿತರ ಮೇಲೆ ಮಯ್ಯತ್ ನಿರ್ವಹಿಸಿ ಮಗ್ಫಿರತ್ಗಾಗಿ ಪ್ರಾರ್ಥಿಸುವಂತೆ ವಿನಂತಿಸಿಕೊಂಡಿರುತ್ತಾರೆ .

Write A Comment