ಕರಾವಳಿ

ಕೆ.ಆರ್.ಸಿ.ಎ: ಉಚಿತ ಕ್ರಿಕೆಟ್ ತರಬೇತಿಗಾಗಿ ಆಯ್ಕೆ ಶಿಬಿರ; ಆಸಕ್ತರಿಗೆ ಆಹ್ವಾನ

Pinterest LinkedIn Tumblr

IMG_9114

ಮಂಗಳೂರು ಪ್ರೀಮಿಯರ್ ಪಂದ್ಯಾಟವನ್ನು ಯಶಸ್ವಿಯಾಗಿ ಜರಗಿಸಿರುವ ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅರಳುತ್ತಿರುವ ಕ್ರಿಕೆಟ್ ಪ್ರತಿಭೆಗಳಿಗಾಗಿ ಉಚಿತ ಕ್ರಿಕೆಟ್ ತರಬೇತಿಯನ್ನು ಆಯೋಜಿಸಿದೆ.

ಕ್ರಿಕೆಟ್ ಆಡಲು ಬೇಕಾದ ಸೂಕ್ತ ಸೌಲಭ್ಯಗಳನ್ನು ಪೂರೈಸಿಕೊಳ್ಳಲಾರದೆ ಅವಕಾಶ ವಂಚಿತರಾಗುತ್ತಿರುವುದನ್ನು ಮನಗಂಡು, ಅಂತಹ ಪ್ರತಿಭೆಗಳಿಗೆ ಅವಕಾಶವನ್ನು ಕಲ್ಪಿಸುವ ಧ್ಯೇಯದೊಂದಿಗೆ ಹಾಗೂ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ಆಯ್ಕೆ ಶಿಬಿರವು ಮೇ ತಿಂಗಳ ದಿನಾಂಕ 1 ಮತ್ತು 2ರಂದು ಮಂಗಳೂರಿನ ನಂತೂರು ಪಾದುವಾ ಹೈಸ್ಕೂಲ್ ಮೈದಾನದಲ್ಲಿ ಜರಗಲಿರುವುದು.

ಈ ಶಿಬಿರದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಅಂಕಣದಲ್ಲಿ ಆಡುತ್ತಿರುವ ಆಟಗಾರರು, ಅಂಡರ್ ಆರ್ಮ್ ಕ್ರಿಕೆಟ್ ಆಟದಲ್ಲಿ ತೊಡಗಿರುವವರು ಹಾಗೂ ಆಸಕ್ತರೆಲ್ಲರೂ ಭಾಗವಹಿಸಬಹುದಾಗಿದೆ. ಆಟದ ಎಲ್ಲ ಪರಿಕರಗಳನ್ನು ಆಯೋಜಕರು ವ್ಯವಸ್ಥೆ ಮಾಡಲಿದ್ದು ಆಯ್ಕೆಯು 14, 16 ,19, 22 ಮತ್ತು 25 ವರ್ಷ ಕೆಳಹರೆಯದ ಐದು ವಿಭಾಗಗಳಿಗಾಗಿ ನಡೆಯಲಿರುವುದು. ಪ್ರತಿಯೊಂದು ವಿಭಾಗಗಳಲ್ಲಿ ತಲಾ 20 ರಂತೆ ಒಟ್ಟು ನೂರು ಮಕ್ಕಳಿಗೆ ಒಂದು ವರ್ಷದ ಉಚಿತ ಕ್ರಿಕೆಟ್ ತರಬೇತಿಯನ್ನು ನೀಡಲಾಗುವುದಲ್ಲದೆ, ಆಟದ ಪರಿಕರಗಳನ್ನು ಉಚಿತವಾಗಿ ಒದಗಿಸಲಾಗುವುದು.

ಸಂಸ್ಥೆಯು ಈಗಾಗಲೇ ಉಡುಪಿ, ಕಾಪು, ಹೆಜಮಾಡಿ, ಸುರತ್ಕಲ್, ಮಂಗಳೂರು ಮುಂತಾದೆಡೆಗಳಲ್ಲಿ ಕ್ರಿಕೆಟ್ ತರಬೇತಿಯನ್ನು ನಡೆಸುತ್ತಿದ್ದು 500 ರಷ್ಟು ಆಟಗಾರರು ಇದರ ಪ್ರಯೋಜನವನ್ನು ಪಡೆಯುತ್ತಿರುವರು. ಈ ಪ್ರದೇಶದಲ್ಲಿನ ಎಳೆಯ ಕ್ರಿಕೆಟ್ ಪ್ರತಿಭೆಗಳು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತಾಗಲಿ ಎಂಬ ಉದ್ದೇಶವನ್ನು ಹೊಂದಿರುವ ಸಂಸ್ಥೆಯ ಈ ಆಯ್ಕೆ ಶಿಬಿರದಲ್ಲಿ ಎಲ್ಲಾ ಆಸಕ್ತರು ಭಾಗವಹಿಸಿ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಸಂಸ್ಥಾಪಕ ಸಿರಾಜುದ್ದೀನ್, ಸಂಯೋಜಕ ಇಂತಿಯಾಜ್ ಹಾಗೂ ಕಾರ್ಯದರ್ಶಿ ಕ್ಯನ್ಯೂಟ್ ರವರು ತಿಳಿಸಿದ್ದಾರೆ.

Write A Comment