ಅಂತರಾಷ್ಟ್ರೀಯ

ಫೇಸ್‌ಬುಕ್ ನಲ್ಲಿ ಸೆಕ್ಸಿ ವಿಡಿಯೋ ಲಿಂಕ್ ಮೂಲಕ ಹರಡುತ್ತಿದೆ ವೈರಸ್ ! ಜಾಗ್ರತ ವಹಿಸಿ…

Pinterest LinkedIn Tumblr

Facebook Virus

ನನ್ನ ಅಕೌಂಟ್‌ನಿಂದ ವೀಡಿಯೋ ಲಿಂಕ್ ನಿಮ್ಮ ಇನ್‌ಬಾಕ್ಸ್ ಗೆ ಬಂದಿದ್ದರೆ, ದಯವಿಟ್ಟು ಅದನ್ನು ಕ್ಲಿಕ್ ಮಾಡಬೇಡಿ ಎಂದು ಹಲವಾರು ಮಂದಿ ಫೇಸ್‌ಬುಕ್‌ನಲ್ಲಿ ಸ್ಟೇಟಸ್ ಅಪ್‌ಡೇಟ್ ಮಾಡಿದ್ದಾರೆ. ಒಂದು ವೇಳೆ ನಿಮಗೆ ಕೂಡಾ ಫೇಸ್‌ಬುಕ್ ಮೆಸೆಂಜರ್ ನಲ್ಲಿ ನಿಮ್ಮ ಇನ್‌ಬಾಕ್ಸ್‌ಗೆ ನಿಮ್ಮ ಗೆಳೆಯ/ಗೆಳತಿಯಿಂದ ವಿಡಿಯೋ ಲಿಂಕ್ ಬಂದಿದ್ದರೆ, ಆ ಲಿಂಕ್ ಕ್ಲಿಕ್ ಮಾಡುವ ಸಾಹಸ ಮಾಡಲೇ ಬೇಡಿ. ಅದೊಂದು ವೈರಸ್!

ಅತೀ ವೇಗದಲ್ಲಿ ಹರಡಬಲ್ಲ ಟ್ರೋಜನ್ ಕುಟುಂಬಕ್ಕೆ ಸೇರಿದ ವೈರಸ್‌ಗಳು ಇದೀಗ ಸಾಮಾಜಿಕ ತಾಣವಾದ ಫೇಸ್‌ಬುಕ್‌ನಲ್ಲಿ ವೀಡಿಯೋ ಲಿಂಕ್ ಮೂಲಕ ಹರಡುತ್ತಿವೆ. ಒಂದು ವೇಳೆ ಈ ವಿಡಿಯೋ ಲಿಂಕ್ ಕ್ಲಿಕ್ ಮಾಡಿದರೆ ನೀವು ಫೇಸ್‌ಬುಕ್ ಓಪನ್ ಮಾಡಿರುವ ಕಂಪ್ಯೂಟರ್‌ನ್ನು ಕೂಡಾ ಈ ವೈರಸ್ ಬಾಧಿಸುತ್ತದೆ.

ಫೇಸ್‌ಬುಕ್ ಗೆಳೆಯರಿಂದಲೇ ಸಂದೇಶದ ಮೂಲಕ ಬರುವ ಈ ವೈರಸ್ ಓಪನ್ ಆದ ಕೂಡಲೇ ಫೇಸ್‌ಬುಕ್ ಅಕೌಂಟ್ ಮತ್ತು ಕಂಪ್ಯೂಟರ್ ಈ ವೈರಸ್ ಬಾಧೆಗೊಳಗಾಗುವುದು ಮಾತ್ರವಲ್ಲದೆ ನಿಮ್ಮ ಫ್ರೆಂಡ್ ಲಿಸ್ಟ್ ನಲ್ಲಿರವ ಎಲ್ಲರಿಗೂ ಇದೇ ವೈರಸ್ ಸಂದೇಶದ ಮೂಲಕ ರವಾನೆಯಾಗುತ್ತದೆ. ಮೈ ವೀಡಿಯೋ ಎಂಬ ಹೆಸರಿನಲ್ಲಿಯೂ ಅಥವಾ ನಗ್ನ ಯುವತಿಯೊಬ್ಬಳ ಬ್ಲರ್ ಫೋಟೋ ಇರುವ ಸಂದೇಶದ ಮೂಲಕ ಈ ವೈರಸ್ ರವಾನೆಯಾಗುತ್ತದೆ. ಹೀಗೆ ಬಂದ ಸಂದೇಶವನ್ನು ಕ್ಲಿಕ್ ಮಾಡಿದರೆ ಫೇಸ್‌ಬುಕ್ ಅಕೌಂಟ್‌ನ ಲಾಗ್ ಔಟ್ ಬಟನ್ ಕೂಡಾ ಮರೆಯಾಗುವಂತೆ ಈ ವೈರಸ್ ಮಾಡುತ್ತದೆ.

ಆ್ಯಂಟಿ ವೈರಸ್ ಅಪ್‌ಡೇಟೆಡ್ ಆಗಿರದ ಕಂಪ್ಯೂಟರ್‌ಗಳು ಸುಲಭವಾಗಿ ಈ ವೈರಸ್ ದಾಳಿಗೊಳಗಾಗುತ್ತದೆ.

ವೈರಸ್ ಸಂದೇಶ ಲಭಿಸಿದರೆ ಏನು ಮಾಡಬೇಕು?
ಆ ಸಂದೇಶವನ್ನು ಕ್ಲಿಕ್ ಮಾಡಲು ಹೋಗಬೇಡಿ
ಒಂದು ವೇಳೆ ಕ್ಲಿಕ್ ಮಾಡಿದೆ ಕೂಡಲೇ ಬ್ರೌಸರ್ ಕ್ಲೋಸ್ ಮಾಡಿ ಕ್ಯಾಶೆ ಕ್ಲಿಯರ್ ಮಾಡಿ.
ಕೂಡಲೇ ಆ್ಯಂಟಿ ವೈರಸ್ ಸ್ಕ್ಯಾನಿಂಗ್ ಮಾಡಿಬಿಡಿ.

Write A Comment