ಕರಾವಳಿ

ಕಡಿಮೆ ಬೆಲೆಯ ಐಫೋನ್, 9.7 ಇಂಚಿನ ಐಪ್ಯಾಡ್ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?

Pinterest LinkedIn Tumblr

iphone-6-plus-6

ನವದೆಹಲಿ: ಆಪಲ್ ಕಳೆದ ತಿಂಗಳು ಬಿಡುಗಡೆ ಮಾಡಿದ ಕಡಿಮೆ ಬೆಲೆಯ ಐಫೋನ್ ಎಸ್‍ಇ(ಸ್ಪೆಷಲ್ ಎಡಿಶನ್) ಮತ್ತು 9.7 ಇಂಚಿನ ಐಪ್ಯಾಡ್ ಪ್ರೋ ಈಗ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಂಪೆನಿಯ ಆನ್‍ಲೈನ್ ಮತ್ತು ಆಫ್‍ಲೈನ್ ರಿಟೇಲ್ ಅಂಗಡಿಗಳಲ್ಲಿ ಐಫೋನ್ ಮತ್ತು ಐಪ್ಯಾಡ್ ಲಭ್ಯವಿದೆ.

ಐಫೋನ್ ಎಸ್‍ಇ 32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 39 ಸಾವಿರ ರೂ. ನಿಗದಿಯಾಗಿದ್ದರೆ, 64 ಜಿಬಿಯ ಫೋನಿಗೆ 49 ಸಾವಿರ ರೂ. ನಿಗದಿ ಮಾಡಿದೆ. 9.7 ಇಂಚಿನ ಐಪ್ಯಾಡ್ ಎರಡು ಮಾದರಿ ಮತ್ತು ಮೂರು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ. ವೈಫೈ ಮಾತ್ರ ಇರುವ 32 ಜಿಬಿ ಐಪ್ಯಾಡ್‍ಗೆ 49,900, 128 ಜಿಬಿಗೆ 61,900, 256 ಜಿಬಿಗೆ 73,900 ರೂ. ನಿಗದಿ ಮಾಡಿದೆ.

ವೈಫೈ ಮತ್ತು ಸೆಲ್ಯೂಲರ್ ಸಂಪರ್ಕ ಇರುವ 32 ಜಿಬಿ ಆಂತರಿಕ ಮೆಮೊರಿಯ ಐಪ್ಯಾಡ್‍ಗೆ 61,900 ರೂ. 128 ಜಿಬಿಗೆ 73,900 ರೂ. 256 ಜಿಬಿಗೆ 85,900 ರೂ. ನಿಗದಿ ಮಾಡಿದೆ.

ಬೇರೆ ಕಂಪೆನಿಯ ಹೊಸ ಸ್ಮಾರ್ಟ್‍ಫೋನ್‍ಗಳಿಗೆ ಹೋಲಿಕೆ ಮಾಡಿದರೆ ಐಫೋನ್ ಎಸ್‍ಇ ಫೋನಿನ ಬೆಲೆ ದುಬಾರಿಯಾದರೂ, ಆಪಲ್‍ನ ಈ ಹಿಂದಿನ ಐಫೋನ್‍ಗಳಿಗೆ ಹೋಲಿಕೆ ಮಾಡಿದರೆ ಹೊಸ ಫೋನಿನ ಬೆಲೆ ಕಡಿಮೆಯಿದೆ.

ಐಫೋನ್ ಎಸ್‍ಇ
ಗುಣ ವೈಶಿಷ್ಟ್ಯಗಳು
ಸಿಂಗಲ್ ನ್ಯಾನೋ ಸಿಮ್
4 ಇಂಚಿನ ಎಲ್‍ಇಡಿ ಬ್ಯಾಕ್‍ಲಿಟ್ ಐಪಿಎಸ್ ಎಲ್‍ಸಿಡಿ ಕ್ಯಾಪಸಿಟೆಟಿವ್ ಟಚ್‍ಸ್ಕ್ರೀನ್(640* 1136 ಪಿಕ್ಸೆಲ್, 326 ಪಪಿಐ)
ಐಓಎಸ್ 9.3 ಆಪರೇಟಿಂಗ್ ಸಿಸ್ಟಂ
1.84 GHz ಟ್ವಿಸ್ಟರ್ ಡ್ಯುಯಲ್ ಕೋರ್ ಪ್ರೊಸೆಸರ್
ಪವರ್ವಿಆರ್ ಜಿಟಿ7600( ಸಿಕ್ಸ್ ಕೋರ್) ಗ್ರಾಫಿಕ್ಸ್ ಪ್ರೊಸೆಸರ್
16/64 ಜಿಬಿ ಆಂತರಿಕ ಮೆಮೊರಿ
12 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚುವರಿ ಮೆಮೊರಿ ವಿಸ್ತರಣೆ ಮಾಡಲು ಕಾರ್ಡ್ ಸ್ಲಾಟ್ ಇಲ್ಲ
ಫಿಂಗರ್ ಪ್ರಿಂಟ್, ಎಕ್ಸಲರೋಮಿಟರ್, ಗೈರೋ, ಪ್ರಾಕ್ಸಿಮಿಟಿ, ಕಂಪಾಸ್ ಸೆನ್ಸರ್
ಲಿಪೊ 1642 mAh ಬ್ಯಾಟರಿ

ಐಪ್ಯಾಡ್ ಪ್ರೊ
9.7 ಇಂಚಿನ ಎಲ್‍ಇಡಿ ಬ್ಯಾಕ್‍ಲಿಟ್ ಎಲ್‍ಸಿಡಿ ಕ್ಯಾಪಸಿಟೆಟಿವ್ ಸ್ಕ್ರೀನ್(2048* 1536 ಪಿಕ್ಸೆಲ್, 264 ಪಿಪಿಐ)
ಆಪಲ್ 9ಎಕ್ಸ್ 2.16 GHz ಡ್ಯುಯಲ್ ಕೋರ್ ಪ್ರೊಸೆಸರ್
ಐಓಎಸ್ 9 ಆಪರೇಟಿಂಗ್ ಸಿಸ್ಟಂ
ಪವರ್ ವಿಆರ್ ಸಿರೀಸ್ ಗ್ರಾಫಿಕ್ಸ್ ಪ್ರೊಸೆಸರ್( 12 ಕೋರ್ ಪ್ರೊಸೆಸರ್)
2ಜಿಬಿ RAM
ಹಿಂದುಗಡೆ 12 ಎಂಪಿ ಕ್ಯಾಮೆರಾ
ಮುಂದುಗಡೆ 5 ಎಂಪಿ ಕ್ಯಾಮೆರಾ
ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ
ತೆಗೆಯಲು ಅಸಾಧ್ಯವಾದ ಲಿಯಾನ್ ಬ್ಯಾಟರಿ((27.9 Wh)

Write A Comment