ಕರ್ನಾಟಕ

ಈ ಬಾರಿಯ ಐಪಿಎಲ್‍ನಲ್ಲಿ ವಿಶಿಷ್ಠ ದಾಖಲೆ ಬರೆಯಲಿದ್ದಾರೆ ವಿರಾಟ್ ಕೊಹ್ಲಿ ! ಏನು ದಾಖಲೆ ?

Pinterest LinkedIn Tumblr

kohli-rcb

ಬೆಂಗಳೂರು: ಟಿ20 ವಿಶ್ವಕಪ್‍ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಟೀಂ ಇಂಡಿಯಾದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಐಪಿಎಲ್‍ನ 9ನೇ ಆವೃತ್ತಿಯಲ್ಲಿ ವಿಶಿಷ್ಠ ದಾಖಲೆ ಬರೆಯಲಿದ್ದಾರೆ.

ಹೌದು. ಇದುವರೆಗೆ ನಡೆದ ಎಲ್ಲ ಐಪಿಎಲ್ ಆವೃತ್ತಿಯಲ್ಲಿ ಒಂದೇ ತಂಡದ ಪರ ಆಡುತ್ತಿರುವ ಏಕೈಕ ಆಟಗಾರ ಎನ್ನುವ ಹಿರಿಮೆಗೆ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.

ಈ ಹಿಂದೆ ಎಂಎಸ್ ಧೋನಿ, ಸುರೇಶ್ ರೈನಾ, ಆರ್ ಅಶ್ವಿನ್ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರೆ, ಶೇನ್ ವಾಟ್ಸನ್ ರಾಜಸ್ಥಾನ ರಾಯಲ್ಸ್ ಪರವಾಗಿ ಆಡಿದ್ದರು. ಆದರೆ ಈ ಎರಡು ತಂಡಗಳು 2 ವರ್ಷಗಳ ಕಾಲ ಐಪಿಎಲ್‍ನಿಂದ ಹೊರ ಬಿದ್ದ ಕಾರಣ ಈ ಆಟಗಾರರು ಈಗ ಬೇರೆ ತಂಡದಲ್ಲಿ ಆಡಲಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ಆರಂಭದಿಂದಲೂ ಬೆಂಗಳೂರಿನ ರಾಯಲ್ ಚಾಲೆಂಜರ್ಸ್ ಪರವಾಗಿ ಆಡಿಕೊಂಡು ಬಂದ ಕಾರಣ ಈ ದಾಖಲೆ ಅವರಿಗೆ ಸುಲಭವಾಗಿ ಒಲಿದಿದೆ.

ಐಪಿಎಲ್‍ನ 9ನೇ ಆವೃತ್ತಿಗೆ ಇಂದು ಮುಂಬೈನಲ್ಲಿರುವ ವಾಂಖೆಡೆ ಕ್ರೀಡಾಂಗಣದಲ್ಲಿ ಚಾಲನೆ ಸಿಗಲಿದೆ. ಆರ್‍ಸಿಬಿ ಮಂಗಳವಾರದಂದು ಬೆಂಗಳೂರಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ ಆಡುತ್ತಾ ಬಂದಿದ್ದರೂ 2008ರಲ್ಲಿ ಮೊಹಾಲಿಯಲ್ಲಿ ಪಂದ್ಯ ಸೋತಿದ್ದಕ್ಕೆ ಕಿಂಗ್ಸ್ ಇಲೆವನ್ ಶ್ರೀಶಾಂತ್‍ಗೆ ಕಪಾಳ ಮೋಕ್ಷ ಮಾಡಿದ್ದರು. ಬಿಸಿಸಿಐ ವಿಚಾರಣೆ ಬಳಿಕ ಹರ್ಭಜನ್ ಸಿಂಗ್ ಅವರಿಗೆ 11 ಪಂದ್ಯಗಳನ್ನು ಆಡದಂತೆ ನಿಷೇಧ ಹೇರಿತ್ತು.

Write A Comment