ಕರಾವಳಿ

ಪೆಟ್ರೋಲ್, ಡಿಸೇಲ್ ಬೆಲೆ ಮತ್ತೆ ಹೆಚ್ಚಳ ! ಪೆಟ್ರೋಲ್ ದರ ಲೀಟರ್ ಗೆ ರು.2.19, ಡೀಸೆಲ್ 98 ಪೈಸೆ ಏರಿಕೆ

Pinterest LinkedIn Tumblr

petrol-price-hiked

ನವದೆಹಲಿ: ದೇಶದಲ್ಲಿ ಮತ್ತೆ ತೈಲ ಬೆಲೆ ಏರಿಕೆಯಾಗಿದ್ದು, ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರು.2.19 ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ 98ಪೈಸೆ ಏರಿಕೆಯಾಗಿದೆ.

ಸೋಮವಾರ ಮಧ್ಯರಾತ್ರಿಯಿಂದ ಪರಿಷ್ಕೃತ ದರ ಜಾರಿಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ತೈಲ ಬೆಲೆ ಏರಿಸಲಾಗಿದೆ.

ದೆಹಲಿಯಲ್ಲಿ ಪ್ರಸ್ತುತ ಪೆಟ್ರೋಲ್ ದರ ಪ್ರತಿ ಲೀಟರ್ ಗೆ ರು.59.68 ಇದ್ದು, ಮಂಗಳವಾರ ಮಧ್ಯರಾತ್ರಿಯಿಂದ ರು.61.87ಕ್ಕೆ ಹಾಗೂ ಡೀಸೆಲ್ ದರ ರು.48.33 ಇದ್ದು, ರು.49.31ಕ್ಕೆ ಏರಿಕೆಯಾಗಲಿದೆ.

Write A Comment